More

    ಸುಶಾಂತ್​ ಒಡೆತನದ ಫಾರ್ಮ್​ಹೌಸ್​ನಲ್ಲಿ ರಿಯಾ ಕುಟುಂಬದಿಂದ ಹೋಮ- ಹವನ!

    ಸುಶಾಂತ್ ಸಿಂಗ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ರಿಯಾ ಹುಡುಕಾಟ ಒಂದೆಡೆ ನಡೆದರೆ, ಬಿಹಾರ ಪೊಲೀಸರ ತನಿಖೆಗೆ ಮುಂಬೈ ಪೊಲೀಸ್​ ಅಡ್ಡಿ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ, ರಿಯಾಗೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

    ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆ: ಸುಶಾಂತ್​ ಪ್ರಕರಣದ ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್​!

    ಅಂದರೆ, ಮುಂಬೈನಿಂದ 95 ಕಿಮೀ ದೂರದಲ್ಲಿರುವ ಲೋನಾವಾಲಾ ಫಾರ್ಮ್​ಹೌಸ್​ನಲ್ಲಿ ರಿಯಾ ಮತ್ತವರ ಕುಟುಂಬ ಬೀಡು ಬಿಟ್ಟಿದ್ದು, ಹೋಮ ಹವನ ಮಾಡುವುದರಲ್ಲಿ ತೊಡಗಿಸಿಕೊಂಡಿದೆ. ಈ ವಿಚಾರವನ್ನು ಫಾರ್ಮ್​ಹೌಸ್​ ಮ್ಯಾನೇಜರ್​ ಮಾಹಿತಿ ನೀಡಿದ್ದು, ಪೂಜಾ ಕಾರ್ಯದ ಹಿನ್ನೆಲೆ ಏನು ಎಂಬುದು ಸದ್ಯ ನಿಗೂಢವಾಗಿದೆ.
    ಅಂದಹಾಗೆ, ಈ ಮೊದಲು ಸುಶಾಂತ್​ ಖಾತೆಯಲ್ಲಿನ ಲಕ್ಷಾಂತರ ರೂಪಾಯಿಗಳನ್ನು ಪೂಜೆಗಾಗಿಯೇ ರಿಯಾ ಖರ್ಚು ಮಾಡಿದ್ದಳು. ಮಗನನ್ನು ವಶಕ್ಕೆ ಪಡೆಯಲು ಮಾಟ ಮಂತ್ರದ ಮೊರೆ ಹೋಗಿದ್ದಳು ಎಂದು ತಂದೆ ಕೆಕೆ. ಸಿಂಗ್ ಆರೋಪಿಸಿದ್ದರು. ಅದೇ ರೀತಿ ಸುಶಾಂತ್​ ಸ್ನೇಹಿತರು ಆ ಬಗ್ಗೆ ಹೇಳಿಕೊಂಡಿದ್ದರು.

    ಇದನ್ನೂ ಓದಿ: ಲಾಕ್​ಡೌನ್​ ನಂತರ ಶುರುವಾದ ‘ಚಡ್ಡಿದೋಸ್ತ್’ ಈಗ ಕೊನೆಯ ಹಂತಕ್ಕೆ …

    ಇದೀಗ, ಸುಶಾಂತ್​ ಫಾರ್ಮ್​ಹೌಸ್​ನಲ್ಲಿ ಪೂಜೆ ಮಾಡುವಂಥದ್ದೇನಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ವಿಚಾರಣೆಗೆ ಹಾಜರಾಗದೆ, ಕಣ್ಣಾಮುಚ್ಚಾಲೆ ಆಡುತ್ತಿರುವ ರಿಯಾ, ಈ ವರೆಗೂ ಬಿಹಾರ ಪೊಲೀಸರ ವಿಚಾರಣೆಗೆ ಹಾಜರಾಗಿಲ್ಲ.
    ಕಳೆದ ವರ್ಷದ ಜನ್ಮದಿನದ ಪಾರ್ಟಿಯನ್ನು ರಿಯಾ ಚಕ್ರವರ್ತಿ ಇದೇ ಫಾರ್ಮ್​ಹೌಸ್​ನಲ್ಲಿ ಆಯೋಜನೆ ಮಾಡಿದ್ದರು. (ಏಜೆನ್ಸೀಸ್​)

    ಚಿರು ಸಿನಿಮಾಗಳ ಡಬ್ಬಿಂಗ್​ನಲ್ಲಿ ಧ್ರುವ ಸರ್ಜಾ ಭಾಗಿಯಾಗುವುದು ಯಾವಾಗಿನಿಂದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts