More

    ದ.ಕ.ಗಡಿಯಲ್ಲಿ ಕೇರಳಿಗರಿಗೆ ನಿರ್ಬಂಧ, ಮತ್ತೆ ಅತಂತ್ರ ಸ್ಥಿತಿಯಲ್ಲಿ ಕಾಸರಗೋಡು ಕನ್ನಡಿಗರು

    ಮಂಗಳೂರು: ನೆರೆಯ ಕೇರಳದಲ್ಲಿ ಕೋವಿಡ್ ಸೋಂಕು ಗಮನಾರ್ಹ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಫೆ.22ರಿಂದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇರುವವರಿಗೆ ಮಾತ್ರ ಐದು ಗಡಿ ಪ್ರದೇಶಗಳಲ್ಲಿ ಕೇರಳದಿಂದ ಕರ್ನಾಟಕ ಪ್ರವೇಶಿಸಲು ಅವಕಾಶ ದೊರೆಯಲಿದೆ. ದೈನಂದಿನ ಅಗತ್ಯಗಳಿಗೆ ದಿನಂಪ್ರತಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ನಡುವೆ ಓಡಾಡುವ ಗಡಿನಾಡು ನಿವಾಸಿಗಳ ಪರಿಸ್ಥಿತಿ ಮತ್ತೆ ಅತಂತ್ರವಾಗಿದೆ.

    ಸರಕು ವಾಹನ ಮತ್ತು ತುರ್ತು ಸೇವೆಗಳನ್ನು ಒದಗಿಸುವ ವಾಹನಗಳನ್ನು ನಿಲ್ಲಿಸುವುದಿಲ್ಲ ಎನ್ನುತ್ತದೆ ಜಿಲ್ಲಾಡಳಿತ. ಸರಕು ವಾಹನಗಳಿಗೆ ರಿಯಾಯಿತಿ ಕುರಿತು ನಮಗೆ ನಿರ್ದೇಶನ ಬಂದಿಲ್ಲ. ಕಂದಾಯ ಇಲಾಖೆಯ ಸೂಚನೆ ಬರುವ ತನಕ ಸರಕು ವಾಹನಗಳನ್ನು ಕೂಡ ನಿಲ್ಲಿಸಲಾಗುವುದು ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗ ನಿಮಿತ್ತ ಓಡಾಡುವವರಿಗೆ ಮಾತ್ರ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿಕೊಳ್ಳಲು ಕಾಲಾವಕಾಶ ಒದಗಿಸಲಾಗಿದೆ. ಇತರ ಎಲ್ಲರೂ ಕರ್ನಾಟಕ ಪ್ರವೇಶಿಸಲು 72 ಗಂಟೆಯೊಳಗೆ ನಡೆಸಲಾದ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು.

    ಉಭಯ ರಾಜ್ಯಗಳ ಜನರು ಯಾವುದೋ ಕಾರ್ಯಕ್ರಮದಲ್ಲಿ(ಉದಾಹರಣೆಗೆ ಮದುವೆ, ನಿಶ್ಚಿತಾರ್ಥ)ದಲ್ಲಿ ಭಾಗವಹಿಸಿ ವಾಪಸ್ ಆಗುವುದಿದ್ದರೂ 72 ಗಂಟೆ ಒಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಅವಶ್ಯ.

    ನಿರ್ವಾಹಕರಿಗೆ ಹೊಣೆ: ಬಸ್‌ಗಳಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರು ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಹೊಂದಿದ್ದಾರೆಯೇ ಎನ್ನುವುದನ್ನು ನಿರ್ವಾಹಕರು ಖಚಿತಪಡಿಸಿಕೊಳ್ಳಲಿದ್ದಾರೆ. ಇದಲ್ಲದೆ ಎಲ್ಲ ಚಾಲಕರು ಮತ್ತು ನಿರ್ವಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಮಂಗಳೂರು ಬಿಜೈ ಮತ್ತು ಕಾಸರಗೋಡು ಬಸ್ ನಿಲ್ದಾಣಗಳಲ್ಲಿ ಸ್ಯಾನಿಟೈಸರ್ ಸೌಲಭ್ಯ ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts