More

    ಮೂಲ ಭಾರತೀಯ ಸಂಸ್ಕೃತಿಯ ಸಂಶೋಧನೆ ಅಗತ್ಯ

    ಗೋಕರ್ಣ:  ಒಂದು ಕಾಲದಲ್ಲಿ ಈ ದೇಶದ ಮಣ್ಣಿನ ಕಣಕಣದಲ್ಲಿ ಭಾರತೀಯ ಸಂಸ್ಕೃತಿ ವಿಜೃಂಭಿಸುತ್ತಿತ್ತು. ಕಾಲಾಘಾತದಲ್ಲಿ ಇಂದು ಗುಪ್ತ, ಲುಪ್ತ ಮತ್ತು ಸುಪ್ತವಾಗಿ ನಮ್ಮಿಂದ ಮರೆಯಾಗಿರುವ ಆ ಮೂಲ ಭಾರತೀಯ ಸಂಸ್ಕೃತಿಯ ಸಂಶೋಧನೆಯ ಅಗತ್ಯವಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಮತ್ತು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುಲಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

    ಗುರುವಾರ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ನೂತನವಾಗಿ ನಿರ್ವಣವಾಗಿರುವ ಸಂಶೋಧನಾ ಕೇಂದ್ರ ‘ಶೋಭಾ ಭವನ’ದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನವಿತ್ತರು.

    ಭಾರತೀಯ ಮೂಲ ಸಂಸ್ಕೃತಿ ಎನ್ನುವುದು ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ ಬಂದ ಮಹಾಸೌಧವಾಗಿದೆ. ಆ ಸೌಧದ ಒಳಗೆಲ್ಲ ಏನೇನಿದೆ. ಅದರ ಮೌಲಿಕ ಮಹತ್ವವೇನು ಎಂಬುದನ್ನು ಅರಿಯಲು ಶತಮಾನಗಳಿಂದ ಬೀಗ ಹಾಕಲ್ಪಟ್ಟ ಆ ಸೌಧದವನ್ನು ತೆರದು, ಕಣ್ಣೆತ್ತಿ ನೋಡುವ ಸಮರ್ಥವಾದ ಪ್ರಯತ್ನ ಈತನಕ ಆಗಿಲ್ಲ. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನೂತನವಾಗಿ ನಿರ್ವಿುಸಿರುವ ಸಂಶೋಧನಾ ಕೇಂದ್ರ ಶೋಭಾ ಭವನದ ಮೂಲಕ ಮೂಲ ಸಂಸ್ಕೃತಿಯನ್ನು ಸತತ ಪರೀಕ್ಷಿಸಿ, ಅಧ್ಯಯನ ನಡೆಸಿ ಅವುಗಳ ಮೂಲಾರ್ಥವನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯ ಮಾಡಲಿದೆ ಎಂದರು.

    ಕರ್ಣಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಎಂ.ಎಸ್. ಮಹಾಬಲೇಶ್ವರ ಶೋಭಾ ಭವನವನ್ನು ಉದ್ಘಾಟಿಸಿದರು.

    ವಿವಿಯ ವಿದ್ಯಾಪರಿಷತ್ ಗೌರವಾಧ್ಯಕ್ಷ ಡಾ.ಎಸ್.ಎಸ್. ಹೆಗಡೆ ಸಭಾಪೂಜೆ ನಡೆಸಿದರು. ಪ್ರಾಚಾರ್ಯ ನರಸಿಂಹ ಭಟ್ಟ ಅವಲೋಕನ ನಡೆಸಿಕೊಟ್ಟರು. ಅರವಿಂದ ಲಾಡ್ ವಿವಿಧ ಗಣ್ಯರಿಂದ ಬಂದ ಸಂದೇಶಗಳನ್ನು ವಾಚಿಸಿದರು. ರೋಹಿತ ಇನ್ನಿತರರು ನಿರ್ವಹಿಸಿದರು. ಶೋಭಾ ಭವನವನ್ನು ನಿರ್ವಿುಸಿದ ರವಿಶಂಕರ ಭಟ್ಟ ಮತ್ತು ಸುಧಾಕರ ಹೆಗಡೆ ಬಡಗಣಿ ಅವರನ್ನು ಶ್ರೀಗಳು ಫಲ ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts