More

    ಕೊಡವ ಭಾಷೆಯ‘ಪೆತ್ತವಡ ಆರೈಕೆ’ ಕೃತಿ ಬಿಡುಗಡೆ

    ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಕೊಡವ ಕೂಟಾಳಿಯಡ ಕೂಟದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

    ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಕೊಡವ ಭಾಷೆಯಲ್ಲಿ ಬರೆದ ‘ಪೆತ್ತವಡ ಆರೈಕೆ’ ಕೊಡವ ಜನಾಂಗದ ಸಂಪ್ರದಾಯದಂತೆ ಗರ್ಭಿಣಿ ಹಾಗೂ ಬಾಣಂತಿಯರನ್ನು ಆರೈಕೆ ಮಾಡುವ ವಿವರವುಳ್ಳ ನೂತನ ಕೊಡವ ಪುಸ್ತಕ ಬಿಡುಗಡೆಗೊಳಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ಕೊಡಗ್‌ರ ಚುಪ್ಪಿ ಕೋಗಿಲೆಯ ಭಾಗ-3ರ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.

    ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಪದ್ಧತಿ ಪಡಿಪು ಶಿಬಿರದಲ್ಲಿ ಪಾಲ್ಗೊಂಡು ಸಮ್ಮಂದ ಅಡ್ಕುವ ಪದ್ಧ್ದತಿ ಕಲಿತ ವಿದ್ಯಾರ್ಥಿಗಳಿಗೆ ಹಾಗೂ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಸಿದ್ದ ಆಟ್ ಪಾಟ್ ಪಡಿಪು ಶಿಬಿರದಲ್ಲಿ ಕತ್ತಿಯಾಟ್ ಕಲಿತ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ನೆನಪಿನ ಕಾಣಿಕೆ ಹಾಗೂ ಮದುವೆಯಲ್ಲಿ ಸಮ್ಮಂದ ಅಡ್ಕುವ ಪದ್ಧತಿ ನಡೆಸಿದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಮುಕ್ಕಾಟಿರ ಹಿತೈಶಿ ನಾಣಯ್ಯ ಅವರಿಂದ ಭರತನಾಟ್ಯಂ ಸ್ವಾಗತ ನೃತ್ಯ ಕೊಡವಾಮೆಲ್ ಪೆತ್ತವಡ ಆರೈಕೆ ಎನ್ನುವ ವಿಷಯದ ಬಗ್ಗೆ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನಗಾರ್ತಿ ಮಾಳೇಟಿರ ಸೀತಮ್ಮ ಅವರಿಂದ ಮಾಹಿತಿ, ಚುಪ್ಪಿ ಕೋಗಿಲೆಯ ಸ್ಪರ್ಧೆಯ ಮಕ್ಕಳಿಂದ ಗಾಯನ, ತರಬೇತಿ ಪಡೆದ ಮಕ್ಕಳಿಂದ ಕತ್ತಿಯಾಟ್ ಪ್ರದರ್ಶನದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಂಘಟನೆಯ ಕಲಿಕಾ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳಿಂದ ಕೊಡವ ಜನಾಂಗದ ವಿಶೇಷ ಪದ್ಧತಿಯಾದ, ಸಮ್ಮಂದ ಅಡ್ಕುವ ಪದ್ಧ್ದತಿಯ ಪ್ರದರ್ಶನ ನಡೆಯಿತು.

    ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚಂಗುಲಂಡ ಸೂರಜ್, ಕೊಂಗಾಂಡ ಕಾಶಿ ಕಾರ್ಯಪ್ಪ, ಬಯವಂಡ ಮಹಾಬಲ ಹಾಗೂ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts