More

    ಮಕ್ಕಳ ಪ್ರತಿಭೆ ಗುರುತಿಸಿ

    ಕುಕನೂರು: ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ ಸೂಕ್ತವಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ ಹೇಳಿದರು.

    ಇದನ್ನೂ ಓದಿ: ಪ್ರತಿಭೆಗೆ ತಕ್ಕ ಅವಕಾಶ ಸಿಗಲಿ

    ಪಟ್ಟಣದ ವಿದ್ಯಾನಂದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಕುಕನೂರು ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

    ಮಕ್ಕಳ ಮನಸ್ಸು ತಿಳಿ ನೀರಿನಂತೆ ಪರಿಶುದ್ಧವಾಗಿದ್ದು, ಮನಸ್ಸನ್ನು ಚಂಚಲಗೊಳಿಸಬಾರದು. ನಿರ್ಮಲ ಮನಸಗಳಲ್ಲಿ ಒಂದಿಲ್ಲಾ ಒಂದು ಪ್ರತಿಭೆ ಇರುತ್ತದೆ. ಶಿಕ್ಷಕರು ಮತ್ತು ಪಾಲಕರು ಗುರುತಿಸುವ ಮೂಲಕ ಪ್ರೋತ್ಸಾಹಿಸಿಬೇಕು. ಮಕ್ಕಳಲ್ಲಿ ಧೈರ್ಯ, ಪ್ರೀತಿ, ಕರುಣೆ, ಛಲ ತುಂಬಬೇಕು ಎಂದರು.

    ವಿದ್ಯಾನಂದ ಗುರುಕುಲ ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ಜಹಗೀರದಾರ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು- ಗೆಲುವು ಸಹಜ. ಇವುರೆಡು ನಾಣ್ಯದ ಎರಡು ಮುಖಗಳಿದ್ದಂತೆ. ಸೋತವರು ನಿರಾಶಗೊಳ್ಳಬೇಡಿ ಎಂದರು.

    ಬಿಇಒ ನಿಂಗಪ್ಪ ಕೆ.ಟಿ, ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಮಾರುತೇಶ ತಳವಾರ, ಬಿಆರ್‌ಸಿ ಮಹೇಶ ಅಸೂಟಿ, ಮುಖ್ಯೋಪಾಧ್ಯಾಯ ಕಲ್ಲಪ್ಪ ಮಾಳೆಕೊಪ್ಪ, ಸುಮಂಗಲಾ ಹಿರೇಮನಿ, ಸೋಮಶೇಖರ ನಿಲೋಗಲ್, ಶಿವಕುಮಾರ ಹೆಳವರ, ಸಿಆರ್‌ಪಿ ಪೀರಸಾಬ್ ದಫೇದಾರ, ಪ್ರಮುಖರಾದ ಮಂಜುನಾಥ ಪೂಜಾರ, ಗೂಳನಗೌಡ ಹಿರೇಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts