More

    ಆರ್​ಸಿ, ಡಿಎಲ್ ಕಾರ್ಡ್​ಗಳು ಇನ್ನಷ್ಟು ಸ್ಮಾರ್ಟ್! ಕ್ಯೂ ಆರ್ ಕೋಡ್ ಸಮೇತ ಕಾರ್ಡ್ ವಿತರಣೆಗೆ ಸಿದ್ಧತೆ

    | ಕೀರ್ತಿನಾರಾಯಣ ಸಿ. ಬೆಂಗಳೂರು

    ವಾಹನಗಳ ನೋಂದಣಿ (ಆರ್​ಸಿ) ಹಾಗೂ ಚಾಲನಾ ಪರವಾನಗಿ (ಡಿಎಲ್) ಸ್ಮಾರ್ಟ್ ಕಾರ್ಡ್​ಗಳು ಇನ್ನಷ್ಟು ಹೈ ಟೆಕ್ನಾಲಜಿಯೊಂದಿಗೆ ಜನರ ಕೈ ಸೇರುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, 2024ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ನಂತರ ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬರಲಿದೆ. ಇದಕ್ಕಾಗಿ ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿರುವ ಡಿಜಿಟಲ್ ವ್ಯವಸ್ಥೆಯ ಸಾಧಕ-ಬಾಧಕಗಳು ಹಾಗೂ ಹೊಸ ಯೋಜನೆ ಜಾರಿಗೆ ಬೇಕಾಗಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲು ಸರ್ಕಾರದ ಏಜೆನ್ಸಿಯೊಂದಕ್ಕೆ ಸಾರಿಗೆ ಇಲಾಖೆ ಜವಾಬ್ದಾರಿ ಕೊಟ್ಟಿದ್ದು, ಕಳೆದ ವಾರದಿಂದಲೇ (ಡಿ.14) ಕಚೇರಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಕಾರ್ಯ ಆರಂಭವಾಗಿದೆ.

    ರಾಜ್ಯದಲ್ಲಿ ಸದ್ಯ ಪಿಪಿಪಿ ಮಾದರಿಯಲ್ಲಿ ಎಲ್ಲ ಆರ್​ಟಿಒ ಕಚೇರಿಗಳು ಹಾಗೂ ತನಿಖಾ ಠಾಣೆಗಳನ್ನು ಗಣಕೀಕರಣಗೊಳಿಸುವ ಮತ್ತು ಆರ್​ಸಿ, ಡಿಎಲ್​ಗೆ ಸ್ಮಾರ್ಟ್ ಕಾರ್ಡ್​ಗಳನ್ನು ವಿತರಿಸುವ ಯೋಜನೆಯನ್ನು ರೋಸ್​ವುರ್ಟ ಟೆಕ್ನಾಲಜೀಸ್ ಪ್ರೖೆವೇಟ್ ಲಿಮಿಟೆಡ್​ಗೆ ಗುತ್ತಿಗೆ ಕೊಡಲಾಗಿತ್ತು. ಈ ಗುತ್ತಿಗೆ ಅವಧಿ 2024ರ ಫೆಬ್ರವರಿಗೆ ಮುಕ್ತಾಯವಾಗುತ್ತಿದೆ. ನಂತರ ಹೊಸದಾಗಿ ಟೆಂಡರ್ ಆಹ್ವಾನಿಸುವ ಮೂಲಕ ಸ್ಮಾರ್ಟ್​ಕಾರ್ಡ್ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಇಲಾಖೆ ಸಿದ್ಧತೆ ನಡೆಸಿದೆ. ಕರ್ನಾಟಕದಲ್ಲಿ 2009ರಿಂದಲೇ ಆರ್​ಸಿ ಹಾಗೂ ಡಿಎಲ್​ಗೆ ಸ್ಮಾರ್ಟ್ ಕಾರ್ಡ್​ಗಳನ್ನು ಕೊಡಲಾಗುತ್ತಿದೆ. ಆದರೀಗ ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡ್ ಮುಂಭಾಗ ಕ್ಯೂಆರ್ ಕೋಡ್ ಇರಲಿದೆ.

    ಈಗ ಸ್ಮಾರ್ಟ್ ಕಾರ್ಡ್ ವಿತರಣೆ ಪಡೆದಿರುವ ಸಂಸ್ಥೆಯ ಗುತ್ತಿಗೆ ಅವಧಿ ಇನ್ನೆರಡು ತಿಂಗಳಲ್ಲಿ ಮುಕ್ತಾಯವಾಗಲಿದೆ. ಕ್ಯೂ ಆರ್ ಕೊರ್ಡ್ ಹೊಂದಿರುವ ಕಾರ್ಡ್​ಗಳ ವಿತರಣೆಯ ಹೊಸ ಯೋಜನೆ ಅನುಷ್ಠಾನಕ್ಕೆ ಹೊಸದಾಗಿ ಟೆಂಡರ್ ಆಹ್ವಾನಿಸಿ, ಅರ್ಹ ಕಂಪನಿಗೆ ಜವಾಬ್ದಾರಿ ಕೊಡಲಾಗುತ್ತದೆ.

    | ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

    ಹೊಸ ಕಾರ್ಡ್ ಹೇಗಿರುತ್ತೆ?
    ಡಿಎಲ್​ನ ಮುಂಭಾಗದಲ್ಲಿ ಮಾಲೀಕರ ಹೆಸರು, ಫೋಟೋ, ವಿಳಾಸ, ಹುಟ್ಟಿದ ದಿನಾಂಕ, ರಕ್ತದ ಗುಂಪು ವಿವರಗಳು ಇರುತ್ತವೆ. ಹಿಂಭಾಗ ಮೊಬೈಲ್ ನಂಬರ್, ವಾಹನ ಚಲಾಯಿಸಲಿರುವ ಅನುಮತಿ ವಿವರ ಇರಲಿದೆ. ಹೊಸ ಆರ್​ಸಿ ಕಾರ್ಡ್ ಮುಂಭಾಗದಲ್ಲಿ ವಾಹನ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಕಾರ್ಡ್ ಅವಧಿ ಮುಕ್ತಾಯ, ಚಾಸ್ಸಿ ನಂಬರ್, ಇಂಜಿನ್ ನಂಬರ್ ಇರುತ್ತೆ. ಕಾರ್ಡ್​ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿ ವಾಹನಕ್ಕೆ ಸಂಬಂಧಿಸಿದ ವಿವರ ನಮೂದಾಗಿರುತ್ತದೆ. ಸ್ಮಾರ್ಟ್ ಕಾರ್ಡ್​ನಲ್ಲಿ ಕ್ಯೂ ಆರ್ ಕೋಡ್ ಇರಲಿದ್ದು, ಸ್ಕಾ್ಯನ್ ಮಾಡಿದರೆ ಸಾಕು ಎಲ್ಲ ಮಾಹಿತಿ ಸಿಗುತ್ತದೆ. ಇದರಿಂದ ಅಪರಾಧ ಚಟುವಟಿಕೆ ಅಥವಾ ಅಪಘಾತ ಸಂದರ್ಭಗಳಲ್ಲಿ ಉಪಯೋಗವಾಗಲಿದೆ.

    ವರದಿ ಕೊಡಲು ಐಡೆಕ್ ಸಂಸ್ಥೆಗೆ ಆದೇಶ
    ಇನ್​ಫ್ರಾಸ್ಟ್ರ್ಚರ್ ಡೆವಲಪ್​ವೆುಂಟ್ ಕಾಪೋರೇಷನ್ (ಕರ್ನಾಟಕ) ಲಿಮಿಟೆಡ್​ಗೆ (ಐಡೆಕ್) ಆರ್​ಟಿಒ ಕಚೇರಿಗಳ ವ್ಯವಸ್ಥೆ ಮೌಲ್ಯಮಾಪನ ವರದಿ ಕೊಡುವಂತೆ ಸರ್ಕಾರ ಕಾರ್ಯಾದೇಶ ಹೊರಡಿಸಿದೆ. ಆರ್​ಟಿಒ ಕಚೇರಿಗಳಲ್ಲಿರುವ ಕಂಪ್ಯೂಟರ್​ಗಳು, ಪ್ರಿಂಟರ್​ಗಳು, ಡಾಟ್ ಮಾಟ್ರಿಕ್ಸ್, ಲೇಸರ್, ಸ್ಮಾರ್ಟ್ ಕಾರ್ಡ್ ರೀಡರ್, ಯುಪಿಎಸ್, ಜನರೇಟರ್, ಎಸಿ, ಮಾನವ ಸಂಪನ್ಮೂಲ ಬಗ್ಗೆ ಖುದ್ದು ಭೇಟಿ ಕೊಟ್ಟು ಪರಿಶೀಲಿಸಬೇಕು. ನಂತರ ಏನೆಲ್ಲ ಇದೆ, ಏನೆಲ್ಲ ಬೇಕು ಎಂಬುದರ ಕುರಿತು ವರದಿ ಕೊಡಬೇಕು. ಅದನ್ನು ಆಧರಿಸಿ ಸಾರಿಗೆ ಇಲಾಖೆ ಟೆಂಡರ್ ಆಹ್ವಾನ ಪ್ರಕ್ರಿಯೆಯನ್ನು ಶುರು ಮಾಡಲಿದೆ.

    ಹೆಚ್ಚಾಗಲಿದೆ ಜೆಎನ್​.1 ಪ್ರಕರಣಗಳ ಸಂಖ್ಯೆ, ಹೆದರುವ ಅಗತ್ಯವಿಲ್ಲ: ಹೀಗೆಂದು ಹೇಳಿದೆ ಉನ್ನತ ವೈದ್ಯಕೀಯ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts