ಸಿನಿಮಾ

ದರ್ಶನ್ ಪುಟ್ಟಣ್ಣಯ್ಯ ಭರ್ಜರಿ ರೋಡ್ ಶೋ: ಸಾಥ್ ಕೊಟ್ಟ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು

ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ತಾಲೂಕಿನ ದುದ್ದ ಹೋಬಳಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಬೆಳಗ್ಗೆ ಪ್ರಾರಂಭವಾದ ರೋಡ್ ಶೋ ಸಂಜೆವರೆಗೂ ನಡೆಯಿತು. ರೈತ ಸಂಘ ಹಾಗೂ ಕಾಂಗ್ರೆಸ್ ನಾಯಕರ ಜತೆಗೆ ಕಾರ್ಯಕರ್ತರು ಉತ್ತಮ ಸಾಥ್ ನೀಡಿದರು. ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಈ ಬಾರಿ ಮೇಲುಕೋಟೆ ಕ್ಷೇತ್ರದ ಚುನಾವಣೆಯಲ್ಲಿ ದುದ್ದ ಹೋಬಳಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಕಾರ್ಯಕರ್ತರು, ಅಭಿಮಾನಿಗಳು ಸುತ್ತಮುತ್ತಲು ದರ್ಶನ್ ಪುಟ್ಟಣ್ಣಯ್ಯ ಅವರ ಬಗ್ಗೆ ತಿಳುವಳಿಕೆ ಮೂಡಿಸಿ. ಜತೆಗೆ ಮತ ನೀಡುವಂತೆ ಪ್ರೇರೆಪಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ರವಿ ಭೋಜೇಗೌಡ ಮಾತನಾಡಿ, ಕಾಂಗ್ರೆಸ್ ರಾಜ್ಯದ ಜನರಿಗೆ ಹೆಚ್ಚಿನ ಅನುಕೂಲವಾಗುವಂತಹ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದೆ. ಅಧಿಕಾರಕ್ಕೆ ಬಂದ ದಿನವೇ ಎಲ್ಲವನ್ನೂ ಈಡೇರಿಸಲಾಗುವುದು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಹಾಗೂ ಪೂರಕ ವಾತಾವರಣವಿದೆ. ಆದ್ದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕ್ಷೇತ್ರದ ಜನರ ಸೇವೆ ಮಾಡಲು ಒಮ್ಮೆ ನನಗೆ ಅವಕಾಶ ಕಲ್ಪಿಸಿ. ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ, ಸಿ.ಕೆ.ನಾಗರಾಜು, ಎಚ್.ಎಲ್. ಅಭಿನಂದನ್, ನಂದೀಶ್, ಜಟ್ಟಿಕುಮಾರ್, ಚಂದನ್, ಚೇತನ್, ಶ್ಯಾಮ್, ಪಟೇಲ್ ರಾಮು, ಸೂರಿ, ಅಭಿ, ಲಿಂಗರಾಜಮ್ಮ, ಪದ್ಮಾ, ಶಾಂತಮ್ಮ, ಲತಾ ಶಂಕರ್, ವಿನುತಾ ಇತರರಿದ್ದರು. ಇದೇ ವೇಳೆ ಬಿಜೆಪಿ ಯುವ ಮುಖಂಡ ಚಿಕನ್ ರವಿ ಬಿಜೆಪಿ ತೊರೆದು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿ ರೈತ ಸಂಘಕ್ಕೆ ಸೇರ್ಪಡೆಗೊಂಡರು.

Latest Posts

ಲೈಫ್‌ಸ್ಟೈಲ್