More

    ಕರೊನಾ ವೈರಸ್ ವಿರುದ್ಧ ಜಡ್ಡು ಹೋರಾಟ..!

    ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಿಲುಕಿರುವ ಟೀಮ್ ಇಂಡಿಯಾ ಆಟಗಾರರು ವಿವಿಧ ದೈಹಿಕ ಕಸರತ್ತು, ಸಾಮಾಜಿಕ ಚಟುವಟಿಕೆ, ಫಿಟ್ನೆಸ್ ಕಾಯ್ದುಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ. ಈ ವೇಳೆಗೆ ನೆಚ್ಚಿನ ಐಪಿಎಲ್‌ನಲ್ಲಿ ಬಿಜಿಯಾಗಬೇಕಾಗಿರುತ್ತಿದ್ದ ಕ್ರಿಕೆಟಿಗರು ಕಳೆದ 60 ದಿನಗಳಿಂದ ಕ್ರಿಕೆಟ್ ಆಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಿಟ್ಟರೆ ಅವರ ಕುಟುಂಬವೇ ಅವರ ಪ್ರಪಂಚವಾಗಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಾರ್ಮ್‌ಹೌಸ್, ಮನೆ, ಫಿಟ್ನೆಸ್, ನೆಚ್ಚಿನ ಕುದುರೆಗಳ ಆರೈಕೆ ಮಾಡುತ್ತಿದ್ದಾರೆ. ಗುರುವಾರ ಟೀಮ್ ಇಂಡಿಯಾ ಜೆರ್ಸಿ, ಪ್ಯಾಡ್, ಗ್ಲೌಸ್ ಧರಿಸಿ ಕಾಣಿಸಿಕೊಂಡ ಜಡೇಜಾ ಕೊರನಾ ವಿರುದ್ಧ ಹೋರಾಡೋಣ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

    ಇದನ್ನೂ ಓದಿ: ಮನೆಯಲ್ಲೇ ಪೋಲ್‌ವಾಲ್ಟ್! ಈಗ ಮಹಿಳೆಯರ ಸರದಿ

    ಕರೊನಾ ವಿರುದ್ಧ ಹೋರಾಡಿ
    ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುವ ಜಡೇಜಾ, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಮತ್ತೊಮ್ಮೆ ಕರೆ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಕತ್ತಿ ವರಸೆ ಮಾಡುವ ಮೂಲಕ ಕರೊನಾ ವೈರಸ್ ವಿರುದ್ಧ ಹೋರಾಡಿ ಎಂದು ಹೇಳಿದ್ದ ಜಡೇಜಾ, ‘ಸ್ಟೇ ಫಿಟ್, ಸ್ಟೇ ಹೋಮ್’ ಎಂದು ಹೇಳುತ್ತಿದ್ದರು. ಇದೀಗ ಟೀಮ್ ಇಂಡಿಯಾ ಏಕದಿನ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋವಿಡ್-19ರ ವಿರುದ್ಧ ಸಮರ ಮುಂದುವರಿಸಿದ್ದಾರೆ. ‘ಕರೊನಾ ವೈರಸ್ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ. ಮನೆಯಲ್ಲೇ ಸುರಕ್ಷಿತವಾಗಿದ್ದು, ಜೀವ ಉಳಿಸಿಕೊಳ್ಳೋಣ’ ಎಂದು ಅಡಿಬರಹ ಬರೆದಿದ್ದಾರೆ.
    ಅರ್ಧಶತಕ, ಸಿಕ್ಸರ್ ಸಿಡಿಸಿ ಮೈದಾನದಲ್ಲಿ ಖಡ್ಗ ಝಳಪಿಸುವಂತೆ ಬ್ಯಾಟ್ ತಿರುಗಿಸಿ ಸಂಭ್ರಮಿಸುವ ಮಾದರಿಯಲ್ಲೇ ವಿಡಿಯೋ ಮಾಡಿದ್ದಾರೆ. ಇದು ಆಲ್ರೌಂಡರ್ ಜಡೇಜಾ ಟೀಮ್ ಇಂಡಿಯಾ ಜೆರ್ಸಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನೂ ತೋರಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts