More

    ರವಿಚಂದ್ರನ್ ಆ್ಯಂಡ್​​ ಸನ್ಸ್ ಈಗ ಬ್ಯಾಡ್​ಬಾಯ್ಸ್​; ಮಕ್ಕಳ ಜತೆ ಸಿನಿಮಾ ಘೋಷಿಸಿದ ಕ್ರೇಜಿಸ್ಟಾರ್

    ರವಿಚಂದ್ರನ್ ತಮ್ಮ ಮಕ್ಕಳ ಜತೆಗೆ ಸೇರಿ ಯಾವಾಗ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮನುರಂಜನ್ ಮತ್ತು ವಿಕ್ರಮ್ ಜತೆಗೆ ಚಿತ್ರ ಮಾಡುವುದಾಗಿ ಸ್ವತಃ ರವಿಚಂದ್ರನ್, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸೋಮವಾರ ಘೋಷಿಸಿದ್ದಾರೆ. ಚಿತ್ರದ ಹೆಸರು ‘ಬ್ಯಾಡ್ ಬಾಯ್್ಸ. ಈ ಚಿತ್ರದ ಕುರಿತು ಸಣ್ಣ ಸುಳಿವನ್ನಷ್ಟೇ ನೀಡಿರುವ ರವಿಚಂದ್ರನ್, ‘‘ಗುಡ್ ಬಾಯ್್ಸ ಅಂದರೆ ಯಾರೂ ಸಿನಿಮಾ ನೋಡಲ್ಲ. ಹೀಗಾಗಿಯೇ ‘ಬ್ಯಾಡ್​ಬಾಯ್್ಸ ಅಂತ ನಿರ್ಧರಿಸಿದ್ದೇನೆ. ಈ ಚಿತ್ರದಲ್ಲಿ ನಾನು, ಮನು, ವಿಕ್ಕಿ ಮೂರೂ ಜನ ನಟಿಸುತ್ತೇವೆ. ‘ರವಿ ಬೋಪಣ್ಣ’ ಮುಗಿದ ತಕ್ಷಣ ಸಿನಿಮಾ ಪ್ರಾರಂಭಿಸುತ್ತೇನೆ. ಪ್ರತಿ ಬಾರಿಯಂತೆ ಡೇಟ್ ಹೇಳಿ ನಂತರ ಸಿನಿಮಾ ತಡವಾಗಿ ಸಿಕ್ಕಿಹಾಕಿಕೊಳ್ಳೋದಿಲ್ಲ. ಆದಷ್ಟು ಬೇಗ ಸಿನಿಮಾ ಪೂರ್ಣಗೊಳಿಸುತ್ತೇನೆ. ಇವತ್ತಿನ ಟ್ರೆಂಡ್ ಹಾಗೂ ಜನರೇಷನ್​ಗೆ ಇಷ್ಟವಾಗುವ ಸಿನಿಮಾ’ ಎಂದು ಹೇಳಿಕೊಂಡಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ರವಿಚಂದ್ರನ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ, ಅಭಿಮಾನಿಗಳ ಆಸೆಗೆ ಮಣಿದು, ಅವರ ಜತೆಗೆ ಮನೆಯಲ್ಲೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಳಗ್ಗೆಯಿಂದಲೇ ನೂರಾರು ಮಂದಿ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನಿಗೆ ಸನ್ಮಾನಿಸಿ, ಕೇಕ್ ಕಟ್ ಮಾಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಆ ಬಳಿಕ ಮಾಧ್ಯಮಗಳ ಜತೆ ಮಾತಿಗೆ ಕುಳಿತ ರವಿಚಂದ್ರನ್, ‘ಪ್ರತಿದಿನವೂ ನನಗೆ ಹುಟ್ಟುಹಬ್ಬವೇ. ನಾನು ಪ್ರತಿಕ್ಷಣವನ್ನೂ ಜೀವಿಸುತ್ತೇನೆ, ಎಂಜಾಯ್ ಮಾಡುತ್ತೇನೆ. ಪ್ರತಿ ವರ್ಷ ಹುಟ್ಟುಹಬ್ಬ ವಯಸ್ಸು ಕಡಿಮೆಯಾಗುತ್ತಿರುತ್ತೆ, ಅನುಭವ ಹೆಚ್ಚಾಗುತ್ತಿರುತ್ತೆ. ಆ ಅನುಭವಗಳನ್ನು ಹಂಚಿಕೊಳ್ಳಬೇಕಷ್ಟೇ. ನನ್ನ ಹುಟ್ಟುಹಬ್ಬವನ್ನು ನಾನು ನನಗಾಗಿ ಆಚರಿಸಿಕೊಳ್ಳುವುದಿಲ್ಲ. ಆಚರಿಸಿಕೊಳ್ಳುವುದು ಜನರಿಗೆ, ಅವರ ಪ್ರೀತಿಗಷ್ಟೇ. ನನಗೆ ಈಗ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎನ್ನುವ ಆಸೆಯಿಲ್ಲ, ತಾಳ್ಮೆಯೂ ಇಲ್ಲ…’ ಎಂದರು.

    ರವಿಚಂದ್ರನ್ ಆ್ಯಂಡ್​​ ಸನ್ಸ್ ಈಗ ಬ್ಯಾಡ್​ಬಾಯ್ಸ್​; ಮಕ್ಕಳ ಜತೆ ಸಿನಿಮಾ ಘೋಷಿಸಿದ ಕ್ರೇಜಿಸ್ಟಾರ್

    ಇನ್ನು ಅಭಿಮಾನಿಗಳ ಪ್ರೀತಿ ಕಂಡು ಎಮೋಷನಲ್ ಆದ ರವಿಚಂದ್ರನ್, ‘ನಾನು ಇದುವರೆಗೂ ಹಣ ಸಂಪಾದನೆ ಮಾಡದಿರಬಹುದು. ಆದರೆ, ಪ್ರೀತಿ ಸಂಪಾದಿಸಿದ್ದೇನೆ. ಆ ಪ್ರೀತಿ, ಗೌರವಗಳೇ ನನಗೆ ಧೈರ್ಯ ನೀಡುವುದು. ಮತ್ತೆ ಎದ್ದು ನಿಲ್ಲುತ್ತೇನೆ. ನಾನು ಈ ಮಣ್ಣಿನ ಋಣ ಮರೆಯವುದಿಲ್ಲ. ತಂದೆ-ತಾಯಿಯನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಹುಟ್ಟಿರುವುದೇ ಕರ್ನಾಟಕಕ್ಕೋಸ್ಕರ, ಕನ್ನಡ ಕ್ಕೋಸ್ಕರ, ಸಿನಿಮಾಗೋಸ್ಕರ. ಕೊನೆಯ ಉಸಿರಿರುವವರೆಗೂ ಸಿನಿಮಾ ಮಾಡುತ್ತಿರುತ್ತೇನೆ’ ಎಂದರು. ‘ರವಿಚಂದ್ರನ್ ತನ್ನ ಹೆಂಡತಿ ಮಕ್ಕಳಿಗೂ ಸಣ್ಣ ಮೋಸ ಮಾಡಿರಬಹುದು. ಆದರೆ, ಸಿನಿಮಾಗೆ ಮಾಡಲ್ಲ. ನನಗೆ ತೃಪ್ತಿ ನೀಡುವವರೆಗೂ ನಾನು ಸಿನಿಮಾ ರಿಲೀಸ್ ಮಾಡಲ್ಲ. ಅದೆಷ್ಟೇ ಸಾಲಕ್ಕೆ ಸಿಲುಕಿದರೂ, ಮುಂದೆ ಸಮಸ್ಯೆಗೆ ಸಿಲುಕುತ್ತೇನೆ ಎಂಬುದು ತಿಳಿದರೂ ಬಿಟ್ಟಿಲ್ಲ. ‘ಏಕಾಂಗಿ’ ಸಿನಿಮಾ ಸೋಲಿನ ಬಳಿಕ ಎಷ್ಟೋ ಚಿತ್ರಗಳನ್ನು ದುಡ್ಡಿಗಾಗಿ ಮಾಡಿದ್ದೇನೆ. ಹಾಗಂತ ನನ್ನ ಕನಸುಗಳನ್ನು ಬಿಡಲು ಇಷ್ಟವಿಲ್ಲ. ಇನ್ನೂ ಸಾವಿರ ಕನಸುಗಳಿವೆ. ಆದರೆ, ಅವುಗಳನ್ನು ಸಾಕಾರಗೊಳಿಸಲು ಒಂದು ಗೆಲುವು ಬೇಕು’ ಎಂದು ಮನಬಿಚ್ಚಿ ಮಾತನಾಡಿದರು.

    ಮತದಾನ ಕೇಂದ್ರದಲ್ಲಿ ಮದ್ಯಪಾನ ಪರೀಕ್ಷೆಗೆ ಮನವಿ; ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts