More

    ಅಗಸ್ಱ ತೀರ್ಥದಲ್ಲಿ ರಥೋತ್ಸವ

    ಲಕ್ಷೆ್ಮೕಶ್ವರ: ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿಯಂದು ಪಟ್ಟಣದ ಐತಿಹಾಸಿಕ ಅಗಸ್ಱತೀರ್ಥ ಕ್ಷೇತ್ರ ಬಾವಿಯಲ್ಲಿ ಸೋಮವಾರ ಜನರು ಪುಣ್ಯಸ್ನಾನ ಮಾಡಿದರು. ಪ್ರತಿ ವರ್ಷ ಸಂಕ್ರಾಂತಿ ದಿನವೇ ಕ್ಷೇತ್ರದ ಜಾತ್ರಾ ಮಹೋತ್ಸವ ಇರುವುದರಿಂದ ಭಕ್ತರು ಇಲ್ಲಿರುವ ಬಾವಿಯಲ್ಲಿ ಪುಣ್ಯಸ್ನಾನ ಮಾಡಿ, ಮಡಿ ಉಡುಗೆಯಲ್ಲಿ ಶಿವನ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಪುಣ್ಯಸ್ನಾನ ಮತ್ತು ಜಾತ್ರೆಗೆ ಆಗಮಿಸಿದ್ದರು. ಸಂಜೆ ರಥೋತ್ಸವದಲ್ಲಿ ನೆರೆದಿದ್ದ ಅಪಾರ ಭಕ್ತರು ‘ಹರ ಹರ ಮಹಾದೇವ’ ಎನ್ನುತ್ತ ರಥವನ್ನು ಎಳೆದು ಭಕ್ತಿಭಾವ ಮೆರೆದರು. ತೇರಿನ ಕಳಸಕ್ಕೆ ಬಾಳೆ ಹಣ್ಣು, ಉತ್ತತ್ತಿ, ಕೊಬ್ಬರಿ, ಲಿಂಬೆ ಹಣ್ಣು ಎಸೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವ ಬಳಿಕ ಮಿರ್ಚಿ, ಖಾರಾ ಮಂಡಕ್ಕಿ ಸವಿದು ಸಂಕ್ರಾಂತಿ ಹಬ್ಬ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts