More

    ‘ನಾನು ಆ ರೀತಿ ಹೇಳೇ ಇಲ್ಲ’ ಎಂದ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ!

    ನವದೆಹಲಿ: ಅತ್ಯಾಚಾರ ಆರೋಪಿಯೊಬ್ಬನಿಗೆ, ‘ನಿನ್ನಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ನೀನು ಮದುವೆಯಾಗು’ ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್​​ಎ ಬೊಬ್ಡೆ ಜಾಮೀನು ಅರ್ಜಿ ವಿಚಾರಣೆಯಲ್ಲಿ ಹೇಳಿದ್ದರು ಎಂಬ ವರದಿ ಕಳೆದ ವಾರ ಸಾಕಷ್ಟು ವಿವಾದ ಸೃಷ್ಟಿಸಿತ್ತು.

    ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ಮುಖ್ಯ ನ್ಯಾಯಮೂರ್ತಿ ಎಸ್​​ಎ ಬೊಬ್ಡೆ, ನಾನು ಆ ರೀತಿ ಅತ್ಯಾಚಾರ ಆರೋಪಿಗೆ ಹೇಳೇ ಇಲ್ಲ. ನನ್ನ ಹೇಳಿಕೆಯನ್ನು ಸಂಪೂರ್ಣ ತಿರುಚಲಾಗಿದೆ ಎಂದು ಹೇಳಿದ್ದಾರೆ. ದಾರಿ ತಪ್ಪಿಸುವ ವರದಿ ಬಿತ್ತರಿಸಲಾಗಿದೆ ಎಂದು ಮಾಧ್ಯಮಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಗುಡ್ಡದ ಮಣ್ಣು ಕುಸಿದು ನಾಲ್ವರು ಸ್ಥಳದಲ್ಲೇ ಸಾವು; ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದುರಂತ

    ಸುಪ್ರೀಂಕೋರ್ಟ್​ಗೆ ಮಹಿಳೆಯರ ಬಗ್ಗೆ ಅತ್ಯುನ್ನತ ಗೌರವವಿದೆ. ಕಳೆದ ವಾರದ ಜಾಮೀನ ಅರ್ಜಿಯ ವಿಚಾರಣೆ ವೇಳೆ ತಾವು ಆಡಿದ ಮಾತುಗಳನ್ನು ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಸಂಪೂರ್ಣ ತಪ್ಪಾಗಿ ಅರ್ಥೈಸಲಾಗಿದೆ. ನಾವು ಅವನಿಗೆ ನೀನು ಮದುವೆಯಾಗುತ್ತೀಯಾ? ಎಂದು ಕೇಳಿದ್ದೇವೆ ವಿನಃ ನೀನು ಯುವತಿಯನ್ನು ಮದುವೆಯಾಗು ಎಂದು ಹೇಳಿಲ್ಲ ಎಂದು ಬೊಬ್ಡೆ ಹೇಳಿದ್ದಾರೆ.

    ಮಹಾರಾಷ್ಷ್ರ ವಿದ್ಯುತ್ ಪ್ರಸರಣ ನಿಗಮದಲ್ಲಿ ಕೆಲಸಗಾರನಾಗಿರುವ ಮೋಹಿತ್ ಸುಭಾಶ್ ಎಂಬಾತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದ. ಈತನ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಮಾರ್ಚ್ 1 ರಂದು ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅವರ ಮಾತನ್ನು ತಪ್ಪಾಗಿ ಅರ್ಥೈಸಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಸುಪ್ರಿಂಕೋರ್ಟ್​ ಸಾಕಷ್ಟು ವಿಮರ್ಶೆಗೆ ಒಳಗಾಗಿತ್ತು.

    ದೀದಿಗೆ ಶಾಕ್​ ಮೇಲೆ ಶಾಕ್​! ಟಿಎಂಸಿ ಅಭ್ಯರ್ಥಿಯೇ ಬಿಜೆಪಿ ಸೇರ್ಪಡೆ! ಕೈ ಕೊಟ್ಟ ಐವರು ಶಾಸಕರು

    ಸತತ 15 ತಿಂಗಳ ಬಳಿಕ ವಿದೇಶಕ್ಕೆ ಹಾರಲು ಸಜ್ಜಾದರು ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts