More

    ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ; ಭಟ್ಕಳ ವ್ಯಕ್ತಿಯೊರ್ವನ ಮನೆ ಮೇಲೆ ಎನ್‌ಐಎ ದಾಳಿ

    ಭಟ್ಕಳ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಚುರುಕುಗೊಳಿಸಿದ್ದು, ಶಂಕೆಯ ಆದಾರದಲ್ಲಿ ಭಟ್ಕಳ ಪಟ್ಟಣದ ವ್ಯಕ್ತಿಯೊರ್ವನ ಮನೆಯ ಮೇಲೆ ದಾಳಿ ನಡೆಸಿ ಪರೀಶೀಲನೆ ನಡೆಸಿದೆ.

    ಭಟ್ಕಳ ಪಟ್ಟಣದ ತಕಿಯಾ ಸ್ಟ್ರಿಟ್​​ ಶಂಕಿತ ಉಗ್ರ ಇಕ್ಬಾಲ್ ಭಟ್ಕಳ ಈತನ ಪುತ್ರ ಅಬ್ದುಲ್ ರಬಿ ಇತನ ಮನೆಯ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಎನ್‌ಐಎ ತಂಡ ದಾಳಿ ನಡೆಸಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬರ್‌ನ ವಯಸ್ಸು ಇತನ ವಯಸ್ಸಿಗೆ ಹೋಲಿಕೆಯಾಗುತ್ತಿದ್ದ ಹಿನ್ನಲೆಯಲ್ಲಿ ತಂಡ ತನಿಖೆ ಕೈಗೊಂಡಿದೆ ಎನ್ನಲಾಗಿದೆ.

    ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ; ಭಟ್ಕಳ ವ್ಯಕ್ತಿಯೊರ್ವನ ಮನೆ ಮೇಲೆ ಎನ್‌ಐಎ ದಾಳಿ

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತನಿಖಾ ತಂಡ ಕರ್ನಾಟಕ ಮಾತ್ರವಲ್ಲದೆ ಇತರೆಡೆಯಲ್ಲೂ ದಾಳಿ ನಡೆಸುತ್ತಿದೆ. ಬೆಂಗಳೂರಿನ ಎಡಿಶನಲ್ ಎಸ್‌ಪಿ ಅವರ ನೇತೃತ್ವದಲ್ಲಿ ಭಟ್ಕಳಕ್ಕೆ ಬಂದ ಎನ್ ಐಎ ಸ್ಥಳೀಯ ಪೊಲೀಸರ ಸಹಕಾರದಿಂದ ವಿಚಾರಣೆ ನಡೆಸಿದೆ.

    ಶಂಕಿತನ ಮನೆಯಲ್ಲಿ ದಾಳಿ ನಡೆಸಿ, ಬೆಂಗಳೂರಿನ ಕಚೇರಿಗೆ ಗುರುವಾರವೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಭಟ್ಕಳದಲ್ಲಿ ಎನ್‌ಐಎ ತಂಡದ ದಾಳಿ ಸಂಚಲನ ಮೂಡಿಸಿದ್ದು, ದೇಶದ ಎಲ್ಲಿಯಾದರೂ ಭಯೋತ್ಪಾದನೆ ಘಟನೆ ನಡೆದರೂ ಕೊನೆಯಲ್ಲಿ ಭಟ್ಕಳದ ನಂಟು ಹೊಂದಿರುವದು ಹಿಂದೂ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಜ್ಜಿ, ಮೊಮ್ಮಗಳಿಗೆ ಉಚಿತ ಟಿಕೆಟ್‌: ನಾಲ್ಕು ಲವ್ ಬರ್ಡ್ಸ್​​ಗೆ ಬರೋಬ್ಬರಿ 444ರೂ. ಟಿಕೆಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts