More

    ರಂಜಾನ್​ ಹಬ್ಬ ಸೌಹಾರ್ದದ ಸಂಕೇತ

    ತಾಳಿಕೋಟೆ: ರಂಜಾನ್​ ತಿಂಗಳು ಪ್ರತಿಯೊಬ್ಬ ಮುಸ್ಲಿಮರಿಗೆ ಪವಿತ್ರವಾಗಿದ್ದು, ಸೌಹಾರ್ದ ಬೆಸೆಯುವ ಸಂಕೇತವಾಗಿದೆ ಎಂದು ಅಸ್ಕಿ ಫೌಂಡೇಷನ್​ ಅಧ್ಯ, ಸಮಾಜ ಸೇವಕ ಸಿ.ಬಿ.ಅಸ್ಕಿ (ಕೊಣ್ಣೂರ) ಹೇಳಿದರು.

    ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆ ಆವರಣದಲ್ಲಿ ಪವಿತ್ರ ರಂಜಾನ್​ ಹಬ್ಬದ ನಿಮಿತ್ತ ಅಸ್ಕಿ ಫೌಂಡೇಷನ್​ ವತಿಯಿಂದ ಭಾನುವಾರ ಆಯೋಜಿಸಿದ್ದ ಇಫ್ತಾರ್​ ಕೂಟ ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು.

    ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬ, ಹರಿದಿನಗಳನ್ನು ಎಲ್ಲರೂ ಕೂಡಿ ಆಚರಿಸಿದರೆ ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ. ಪವಿತ್ರ ಹಬ್ಬದಲ್ಲಿ ಉಪವಾಸ ವೃತ ಕೈಗೊಂಡ ಮುಸ್ಲಿಮರಿಗೆ ಪ್ರತಿವರ್ಷವೂ ಕೊಣ್ಣೂರ ಗ್ರಾಮದಲ್ಲಿ ಇಫ್ತಾರ್​(ಭೋಜನ) ಕೂಟವನ್ನು ಅಸ್ಕಿ ಫೌಂಡೇಷನ್​ನಿಂದ ಆಯೋಜಿಸುತ್ತ ಬರಲಾಗಿದೆ. ಈ ಇಫ್ತಾರ್​ ಕೂಟವನ್ನು ತಾಲೂಕಿನಾದ್ಯಂತ ವಿಸ್ತರಿಸಬೇಕೆಂಬ ಇಚ್ಛೆಯೊಂದಿಗೆ ಮುದ್ದೇಬಿಹಾಳ, ನಾಲತವಾಡ, ತಾಳಿಕೋಟೆ ಪಟ್ಟಣದಲ್ಲಿ ಹಮ್ಮಿಕೊಳ್ಳುತ್ತ ಬರಲಾಗಿದೆ. ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಳ್ಳುವ ಮೂಲಕ ಪ್ರೀತಿ ತೋರಿಸಿರುವುದು ಭಾವೈಕ್ಯದ ಸಂಕೇತವಾಗಿದೆ ಎಂದರು.

    ಕೆಪಿಸಿಸಿ ಸದಸ್ಯ ಬಿ.ಎಸ್​.ಪಾಟೀಲ(ಯಾಳಗಿ) ಅವರು ಮಾತನಾಡಿ, ಆಚರಣೆಗಳು ಬೇರೆಯಾದರೂ ವಿಚಾರಗಳು ಒಂದೇ ಆಗಿವೆ. ಸಾಮರಸ್ಯದ ಹಾದಿಯಲ್ಲಿ ಜನರನ್ನು ಕೊಂಡೊಯ್ಯುವಲ್ಲಿ ಕೊಣ್ಣೂರಿನ ಸಿ.ಬಿ.ಅಸ್ಕಿ ಪರಿವಾರ ಕೊಡುಗೆ ಅಪಾರ ಎಂದರು.

    ಪುರಸಭೆ ಮಾಜಿ ಸದಸ್ಯ ಇಬ್ರಾಹಿಂ ಮನ್ಸೂರ, ಖಾಜಾಹುಸೇನ ಚೌದ್ರಿ ಮಾತನಾಡಿ, ಪ್ರತಿವರ್ಷ ಇಫ್ತಾರ್​ಕೂಟ ಆಯೋಜಿಸುವ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರ ಕಾರ್ಯ ಶ್ಲಾನೀಯ ಎಂದರು.

    ಎಚ್​.ಎಸ್​.ಪಾಟೀಲ, ಜೈಭೀಮ ಮುತ್ತಗಿ, ಶಿವರಾಜ ಗುಂಡಕನಾಳ ಮಾತನಾಡಿದರು.

    ಸಿ.ಬಿ.ಅಸ್ಕಿ ಅವರನ್ನು ಸನ್ಮಾನಿಸಲಾಯಿತು. ಮೂಕೀಹಾಳದ ಕಾಶಿಂಪಟೇಲ ಪಾಟೀಲ, ಮಹಿಬೂಬ ಚೋರಗಸ್ತಿ, ಎಚ್​.ಎಂ.ನಾಯಕ, ಸಿದ್ದನಗೌಡ ಪಾಟೀಲ(ನಾವದಗಿ), ಪರಶುರಾಮ ತಂಗಡಗಿ, ಶೌಕತ್​ ಲಾಹೋರಿ, ಮೋದಿನಸಾಬ ನಗಾರ್ಚಿ, ಗೌಸ ನಾಸರ, ಮಂಜೂರ ಬೇಪಾರಿ ಮನಗೂಳಿ, ಖಾಜಾಹುಸೇನ ಸಗರ, ಕಾಮರಾಜ ಬಿರಾದಾರ, ವೈ.ಎಚ್​.ವಿಜಯಕರ, ಮೈಹಿಬೂಬ ಕೆಂಭಾವಿ, ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ಆಶಿಪ ಕೆಂಭಾವಿ, ಗೋಪಾಲ ಕಟ್ಟಿಮನಿ, ರಾಮನಗೌಡ ಹೊಸಮನಿ ಇದ್ದರು. ಶಮಶುದ್ದೀನ ನಾಲಬಂದ ಸ್ವಾಗತಿಸಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts