More

    ಜಿಲ್ಲೆಯಾದ್ಯಂತ ರಾಮ ನವಮಿ ಸಂಭ್ರಮ

    ವಿಜಯವಾಣಿ ಸುದ್ದಿಜಾಲ ಗದಗ
    ಜಿಲ್ಲೆಯ ವಿವಿಧ ಶ್ರೀರಾಮ ಮಂದಿರಗಳಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ರಾಮನವಮಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-, ಹೋಮ-ಹವನ, ತೊಟ್ಟಿಲೋತ್ಸವ, ಭಜನೆ ನಡೆದವು.
    ಬೆಟಗೇರಿ ರ್ಟನಲ್​ ಪೇಟೆಯಲ್ಲಿರುವ ಶ್ರೀರಾಮ ಮಂದಿರಕ್ಕೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಕುಷ್ಟ್ಟಗಿ ಚಾಳದಲ್ಲಿರುವ ಶ್ರೀರಾಮದೇವರ ಗುಡಿ, ಹಾತಲಗೇರಿ ನಾಕಾ ಬಳಿ ಇರುವ ಶಿರಡಿ ಸಾಯಿಬಾಬಾ ಮಂದಿರ ಸೇರಿದಂತೆ ಅವಳಿ ನಗರದಲ್ಲಿರುವ ಶ್ರೀರಾಮ ಮಂದಿರಗಳಲ್ಲಿ ಶ್ರೀರಾಮನವಮಿ ನಿಮಿತ್ಯ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ನಡೆದವು. ಶ್ರೀರಾಮನ ಬೆಳ್ಳಿ ತೊಟ್ಟಿಲು ಮೆರವಣಿಗೆ ಶ್ರೀಮಾರ್ಕಂಡೇಶ್ವರ ದೇವಸ್ಥಾನದಿಂದ ಟೆಂಗಿನಕಾಯಿ ಬಜಾರ್​, ಪಿ.ಬಿ.ರೋಡ್​, ಹೊಸಪೇಟೆ ಚೆಕ್​ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀರಾಮ ಮಂದಿರ ತಲುಪಿತು. ಶ್ರೀರಾಮ, ಸೀತಾ, ಲಕ್ಷ$್ಮಣ, ಆಂಜನೇಯರ ವೇಷ ಧರಿಸಿದ ಬಾಲಕರು ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.

    ವಿಶೇಷ ಪೂಜೆ:
    ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಗ್ಗೆ ಕಾಕಡಾರತಿ, ಮಂಗಲ ಸ್ನಾನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿದ ನಂತರ ಸುಮಂಗಲೆಯರು ಶ್ರೀರಾಮ ತೊಟ್ಟಿಲು ಪೂಜೆ ಮಾಡಿ ಶ್ರೀರಾಮನನ್ನು ತೊಟ್ಟಿಲಿಗೆ ಹಾಕಿದರು. ಪಂಚಾರತಿ ನಂತರ ಅನ್ನ ಸಂತರ್ಪಣೆ, ಧೂಪಾರತಿ, ಸಂಜೆ ಭಜನೆ ಹಾಗೂ ಸಂಗೀತ ಸೇವೆ, ರಾತ್ರಿ ಪಾಲಕಿ ಸೇವೆ, ಶೇಜಾರತಿ ನಡೆಯಿತು. ನಗರದ ಕುಷ್ಠಗಿ ಚಾಳ್​ ಹಾಗೂ ಬೆಟಗೇರಿಯ ರ್ಟನಲ್​ ಪೇಟದಲ್ಲಿರುವ ರಾಮ ಮಂದಿರಗಳಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ನಡೆದವು. ರಾಮ, ಲಕ್ಷ$್ಮಣ, ಸೀತೆ, ಹನುಮಂತನ ವಿಗ್ರಹಗಳಿಗೆ ಅಭಿಷೇಕ ನೆರವೇರಿಸಲಾಯಿತು. ಹೂವು- ಹಣ್ಣುಗಳಿಂದ ವಿಶೇಷಢವಾಗಿ ವಿಗ್ರಹಗಳನ್ನು ಅಲಂಕಾರ ಮಾಡಲಾಗಿತ್ತು.

    ಹೋಮ, ಮೆರವಣಿಗೆ:
    ದೇವಸ್ಥಾನ ಆವರಣದಲ್ಲಿ ರಾಮತಾರಕ ಹೋಮ ನೆರವೇರಿಸಲಾಯಿತು. ಮಂದಿರದ ಅರ್ಚಕರು ಹಾಗೂ ವಿಪ್ರ ಬಾಂಧವರು ಹೋಮದಲ್ಲಿ ಪಾಲ್ಗೊಂಡು, ವಿವಿಧಾನದ ಮೂಲಕ ಅಗ್ನಿಗೆ ಹವಿಸ್ಸು ಅಪಿರ್ಸಿದರು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಹೋಮದ ಬಳಿಕ ತೊಟ್ಟಿಲೋತ್ಸವ ಜರುಗಿದವು. ದೇವಸ್ಥಾನ ಆವರಣದಲ್ಲಿ ಅಳವಡಿಸಿದ್ದ ತೊಟ್ಟಿಲಿಗೆ ಸುಮಂಗಲೆಯರು ಹೂವು-ಹಣ್ಣು ಅಪಿರ್ಸಿದರು.

    ಬೆಳಧಡಿಯ ರಾಮಜನ್ಮೋತ್ಸವ
    ತಾಲೂಕಿನ ಬೆಳಧಡಿಯ ಸದ್ಗುರು ಬ್ರಹ್ಮಾನಂದ ಮಹಾರಾಜರು ಬೆಳಧಡಿಕರ ಶ್ರೀರಾಮ ಮಂದಿರದಲ್ಲಿ ರಾಮಜನ್ಮೋತ್ಸವ ನಿಮಿತ್ತ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ಶ್ರದ್ಧೆ ಭಕ್ತಿಯಿಂದ ಜರುಗಿತು. ರಾಮನವಮಿಯಂದು ಶ್ರೀರಾಮ ಜನ್ಮೋತ್ಸವ ಕಾರ್ಯಕ್ರಮ ಜರುಗುವುದು. ರಾಮಜನ್ಮೋತ್ಸವ ಅಂಗವಾಗಿ ಭಕ್ತರಿಗಾಗಿ ಪಾನಕ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವಸ್ಥಾನದಲ್ಲಿ ರಾಮಜನ್ಮೋತ್ಸವ ನಿಮಿತ್ಯ ಪಾರಾಯಣ, ಪುರಾಣ, ಕೀರ್ತನೆ, ವಾಹನ ಸೇವೆ ಮುಂತಾದ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts