More

    ಹೇಗಿದೆ ಗೊತ್ತಾ ರಾಮಮಂದಿರ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆ? ಮೊದಲ ಇನ್ವಿಟೇಶನ್​ ಕಾರ್ಡ್​ ಹೋಗಿದ್ದು ಯಾರಿಗೆ?

    ನವದೆಹಲಿ: ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ಆಗಸ್ಟ್​ 5ರಂದು ನಡೆಯಲಿದೆ. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

    ಹಾಗೇ, ಈ ಕಾರ್ಯಕ್ರಮದಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಾಧು-ಸಂತರು, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ.

    ರಾಮಮಂದಿರ ಭೂಮಿ ಪೂಜೆಯ ಮೊದಲ ಆಮಂತ್ರಣ ಪತ್ರಿಕೆ, ಬಾಬ್ರಿ ಮಸೀದಿ ಪರ ಪ್ರಮುಖ ಅರ್ಜಿದಾರರಾದ ಇಕ್ಬಾಲ್​ ಅನ್ಸಾರಿ ಅವರಿಗೆ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಶಕಗಳಿಂದಲೂ ಪೊಲೀಸರು ಹುಡುಕುತ್ತಿದ್ದ ನಕ್ಸಲನನ್ನು ರಕ್ಷಾ ಬಂಧನದಂದೇ ಶರಣಾಗುವಂತೆ ಮಾಡಿದ್ದು ಆತನ ಸೋದರಿ…!

    ಹಾಗೇ, ಈ ಆಮಂತ್ರಣ ಪತ್ರಿಕೆ ಹಳದಿ ಬಣ್ಣದಲ್ಲಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನೂ ಹಾಕಲಾಗಿದೆ. ಒಟ್ಟು 200 ಜನರಿಗೆ ಆಮಂತ್ರಣ ಪತ್ರಿಕೆ ಕಳಿಸಲಾಗುತ್ತದೆ ಎಂದು ರಾಮಜನ್ಮಭೂಮಿ ಟ್ರಸ್ಟ್​ನ ಮೂಲಗಳು ತಿಳಿಸಿವೆ.
    ರಾಮಮಂದಿರ ಒಟ್ಟು 161 ಅಡಿ ಎತ್ತರ ಇರಲಿದ್ದು, ಮೂರರಿಂದ ಮೂರುವರೆ ವರ್ಷಗಳ ಅವಧಿಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

    ಸದ್ಯ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರ ಪೋಸ್ಟರ್​ ಹಾಗೂ ಕೇಸರಿ ಧ್ವಜಗಳನ್ನು ಅಳವಡಿಸಲಾಗುತ್ತಿದೆ. (ಏಜೆನ್ಸೀಸ್​)

    ಹೇಗಿದೆ ಗೊತ್ತಾ ರಾಮಮಂದಿರ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆ? ಮೊದಲ ಇನ್ವಿಟೇಶನ್​ ಕಾರ್ಡ್​ ಹೋಗಿದ್ದು ಯಾರಿಗೆ?

    ಮೂರು ಭಾಷೆಗಳಲ್ಲಿ ತ್ರಿಕೋನ ಬಿಡುಗಡೆ; ವರಮಹಾಲಕ್ಷ್ಮೀ ಹಬ್ಬಕ್ಕೆ ಬಂತು ಮೋಷನ್​ ಪೋಸ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts