ಹೊಸಪೇಟೆ: ಡೊಳ್ಳು ವಾದ್ಯದ ಮೂಲಕ ಜಾನಪದ ಕ್ಷೇತ್ರದಲ್ಲಿ ಮನೆ ಮಾತಾಗಿದ್ದ ತಾಲೂಕಿನ ಮಲಪನಗುಡಿ ಗ್ರಾಮದ ಡೊಳ್ಳು ವಾದ್ಯ ಕಲಾವಿದ ಎಚ್.ಕೆ.ಕಾಲಮಂಚಪ್ಪ ಅವರು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ತಾಲೂಕಿನ ಮಲಪನಗುಡಿ ಗ್ರಾಮದ ನವಣೆಪ್ಪ ಮತ್ತು ದ್ಯಾವಮ್ಮ ದಂಪತಿ ಮಗನಾಗಿ ಕಾರಮಂಚಪ್ಪ ೧೦ ಏಪ್ರಿಲ್ ೧೯೫೧ ರಂದು ಜನಿಸಿದ್ದಾರೆ. ಓದಿದ್ದು ಬರೆದಿದ್ದು ಇಲ್ಲವೆನ್ನುವಷ್ಟು ಕಡಿಮೆ. ೨ನೇ ತರಗತಿ ಮಾತ್ರ. ಅವರು ೧೨ ವರ್ಷದ ಬಾಲಕನಾಗಿದ್ದಾಗ ಡೊಳ್ಳು ಕುಣಿತಕ್ಕೆ ಮಾರು ಹೋಗಿದ್ದರು. ಅಜ್ಜ, ಅಜ್ಜಿ, ತಂದೆಯಿಂದ ಬಳುವಳಿಯಾಗಿ ಬಂದಿದ್ದ ಡೊಳ್ಳು ಕುಣಿತವನ್ನು ಕಲಿತು, ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರು. ತಮ್ಮ ಜೀವನದ ೫೦ ವರ್ಷಗಳ ಕಾಲ ಡೊಳ್ಳು ಕುಣಿತದಲ್ಲೇ ಸವೆಸಿದ್ದಾರೆ.
ಸಾಂಪ್ರದಾಯಿಕ ಡೊಳ್ಳು ಕುಣಿತದಲ್ಲಿ ವೈವಿದ್ಯಮಯವಾಗಿ ತೊಡಗಿಸಿಕೊಳ್ಳುವ ಮೂಲಕ ಈ ಭಾಗದಲ್ಲಿ ಮನೆ ಮಾತಾಗಿದ್ದಾರೆ. ಡೊಳ್ಳು ಕುಣಿತದಲ್ಲಿ ಸಣ್ಣದಿಮ್ಮಿ, ದೊಡ್ಡದಿಮ್ಮಿ, ಜೋಡು ಬಡಿತ, ಎರಡು ಹೆಜ್ಜೆ ಕುಣಿತ, ಕುಕ್ಕರ ಬಡಿತ, ಮಂಡಿಗಾಳಿ ಕುಣಿತ, ಒಂಟಿ ಗುಣಿತ, ಎರಡುಗುಣಿ, ಹರಿವಾಲಗ ಸೇರಿದಂತೆ ಅನೇಕ ಪಟ್ಟುಗಳನ್ನು ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಜನ ಪ್ರಿಯತೆ ಗಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಾನಪದ ಕಲಾವಿದ ಕಾರ ಮಂಚಪ್ಪ, ನನ್ನ ಕಲೆಯನ್ನು ಗುರುತಿಸಿ ಈಗಾಗಲೇ ಸ್ಥಳೀಯ ಸಂಘ, ಸಂಸ್ಥೆಗಳ ಸನ್ಮಾನ, ಪ್ರಶಸ್ತಿಗಳನ್ನು ನೀಡಿದ್ದವು. ಆದರೆ, ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ನನ್ನು ಆಯ್ಕೆ ಮಾಡುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಆಯ್ಕೆ ಸಮಿತಿ ನಿರ್ಧಾರಕ್ಕೆ ನಾನು ತಲೆ ಬಾಗಿ ನಮಸ್ಕರಿಸುತ್ತೇನೆ.
ಡೊಳ್ಳುವಾದ್ಯ ಕಲಾವಿದ ಕಾರಮಂಚಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

You Might Also Like
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips
ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…
ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips
ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…
ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips
ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…