More

    ಮುಂಬೈ ಇಂಡಿಯನ್ಸ್​ ಎದುರು ಆಲ್ರೌಂಡ್​ ಪ್ರದರ್ಶನ; ರಾಜಸ್ಥಾನ ರಾಯಲ್ಸ್​ಗೆ ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವು

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 14ನೇ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಎದುರು ಆಲ್ರೌಂಡ್​ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್​ ತಂಡವು ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿದೆ.

    ಟಾಸ್​ ಗೆದ್ದ ರಾಜಸ್ಥಾನ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತ್ತು. ಅದರಂತೆ ನಾಯಕ ಹಾರ್ದಿಕ್​ ಪಾಂಡ್ಯ (34 ರನ್, 21 ಎಸೆತ, 6 ಬೌಂಡರಿ), ತಿಲಕ್​ ವರ್ಮಾ (32 ರನ್​, 29 ಎಸೆತ, 2 ಸಿಕ್ಸರ್​) ಪ್ರತಿರೋಧದ ನಡುವೆಯೂ 20 ಓವರ್​ಗಳಲ್ಲಿ 125ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

    ಇದನ್ನೂ ಓದಿ: ಬಾಯ್ಕಾಟ್​ ಇಂಡಿಯಾ ಎನ್ನುವವರು ಮೊದಲು ನಿಮ್ಮ ಪತ್ನಿಯರ ಸೀರೆಗಳನ್ನು ಸುಟ್ಟು ಹಾಕಿ: ಬಾಂಗ್ಲಾ ಪ್ರಧಾನಿ

    ರಾಜಸ್ಥಾನ ಪರ ಟ್ರೆಂಟ್​ ಬೌಲ್ಟ್​ (4-0-22-3) ನಂಡ್ರೆ ಬರ್ಗರ್​ (4-0-32-2), ಆವೇಶ್​ ಖಾನ್​ (4-0-30-1), ಯಜುವೇಂದ್ರ ಚಹಲ್​ (4-0-11-3), ಆರ್​. ಅರ್ಶವಿನ್​ (4-0-27-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    126ರನ್​ ಗಳ ಸುಲಭ ಗುರಿ ಬೆನ್ನತ್ತಿದ್ದ ರಾಯಲ್ಸ್​ ತಂಡದ ಪರವಾಗಿ ರಿಯಾನ್​ ಪರಾಗ್​ (54 ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್​) ಅರ್ಧಶತಕದ ಫಲವಾಗಿ15.3 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 127 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು. ಮುಂಬೈ ಪರ ಆಕಾಶ್​ ಮಡಿವಾಳ್​ (4-0-20-3), ಕ್ವೇನಾ ಮ್ಯಾಪಾಕಾ (2-0-23-1) ಜಸ್ಪ್ರೀತ್​ ಬುಮ್ರಾ (4-0-26-0), ಪಿಯೂಷ್​ ಚಾವ್ಲಾ (3-0-18-0), ಗೆರಾಲ್ಡ್​ ಕೋಟ್​ಜೀ (2.3-0-36-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts