ರಾಜಕೀಯ ಭವಿಷ್ಯ ಬಗ್ಗೆ ಇಂದು ರಜನಿಕಾಂತ್ ಸಭೆ

Rajanikanth
Published on

ಚೆನ್ನೈ: ನಟ ರಜನಿಕಾಂತ್ ಅವರು ಪಕ್ಷದ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸೋಮವಾರ ಸಭೆ ನಡೆಸಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ? ಬೇಡವೇ? ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ತಾನು ಪಕ್ಷದ ಇತರ ಮುಖಂಡರೊಂದಿಗೆ ರ್ಚಚಿಸಿ ಸೂಕ್ತ ಸಮಯದಲ್ಲಿ ರಾಜಕೀಯ ನಿಲುವು ತಿಳಿಸುತ್ತೇನೆ ಎಂದು ರಜನಿಕಾಂತ್ 2 ವರ್ಷಗಳಿಂದಲೂ ಹೇಳುತ್ತ ಬಂದಿದ್ದಾರೆ. ಇದರಿಂದ ಬೇಸರಗೊಂಡಿರುವ ಅವರ ಅಭಿಮಾನಿಗಳು ರಾಜಕೀಯಕ್ಕೆ ಪ್ರವೇಶಿಸುವಂತೆ ತೀವ್ರ ಒತ್ತಡ ಹೇರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net