More

    ಕನ್ನಡ ಭಾಷೆಯ ಅರಿವು ಮೂಡಿಸಿ: ಮುಖ್ಯ ಶಿಕ್ಷಕಿ ರೇಖಾ ದಯಾನಂದಯ್ಯ

    ರಾಯಚೂರು: ಗಡಿ ಪ್ರದೇಶದಲ್ಲಿ ಕನ್ನಡ ಮಾಯವಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ರಾಜಲಬಂಡಾ ಶಾಲೆ ಮುಖ್ಯ ಶಿಕ್ಷಕಿ ರೇಖಾ ದಯಾನಂದಯ್ಯ ಕಳವಳ ವ್ಯಕ್ತಪಡಿಸಿದರು.


    ತಾಲೂಕಿನ ರಾಜಲಬಂಡಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಿ ಮತ್ತು ಗುರುಪುಟ್ಟ ಕಲಾಬಳಗದಿಂದಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಗಡಿನಾಡು ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಗಡಿ ಪ್ರದೇಶದಲ್ಲಿ ಕನ್ನಡ ಭಾಷೆಯ ಅರಿವಿದ್ದರೂ ಜನರು ಮಾತನಾಡುವುದಿಲ್ಲ. ಕನ್ನಡದ ನೆಲ, ನೀರು, ಗಾಳಿ ಸೇವಿಸುತ್ತಿದ್ದರೂ ಗಡಿನಾಡ ಜನರು ಇತರೆ ಭಾಷೆಗಳಿಗೆ ಒಗ್ಗಿಕೊಂಡಿದ್ದಾರೆ. ಹಾಗಾಗಿ ಕನ್ನಡದ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.


    ನೃತ್ಯ ಮತ್ತು ಗಾಯನ ಕಾರ್ಯಕ್ರಮಗಳು ಜರುಗಿದವು. ಕಲಾವಿದರಾದ ಸುಧಾಕರ ಅಸ್ಕಿಹಾಳ, ಪ್ರಕಾಶಯ್ಯ ನಂದಿ, ರಾಘವೇಂದ್ರ ಆಶಾಪುರ, ಮಹಾಲಕ್ಷ್ಮಿ, ವಿಜಯಕುಮಾರ ದಿನ್ನಿ, ಆರ್.ರವಿಕುಮಾರ, ಜೆ.ಸುಜಾತಾ, ಬಸವರಾಜ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts