ರಾಜಕೀಯ
ಮನೆಗೊಂದು ಸರ್ಕಾರಿ ಕೆಲಸಕೊಡಿ: ಸೇವಾ ನಿವೃತ್ತಿಯನ್ನು 45 ವರ್ಷಕ್ಕೆ ಇಳಿಕೆ ಮಾಡಿ; ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಭಿಮತ! H D Kumaraswamy
ಬೆಂಗಳೂರು: ರಾಜ್ಯದ ಪ್ರತಿ ಕುಟುಂಬಗಳಿಗೆ ಸರ್ಕಾರಿ ನೌಕರಿ ಕೊಡುವ ನಿಟ್ಟಿನಲ್ಲಿ ಸೇವಾ ನಿವೃತ್ತಿ ಅವಧಿಯನ್ನು 60 ವರ್ಷದ ಬದಲು 45 ವರ್ಷಕ್ಕೆ ಇಳಿಕೆ ಮಾಡಬೇಕೆಂದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. KPSC ನಲ್ಲಿ ನಡೆಯುತ್ತಿರುವ ಅಕ್ರಮ ನೇಮಕಾತಿ ಹಾಗೂ ಭ್ರಷ್ಟಾಚಾರದ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯನ್ನು ಸರಿದಾರಿಗೆ ತರುವ ಹಾಗೂ ಭವಿಷ್ಯದಲ್ಲಿ ಸರ್ಕಾರಿ ನೌಕರಿಯನ್ನು ಸೃಷ್ಟಿಸುವ ಬಗ್ಗೆ ತಮ್ಮಲ್ಲಿರುವ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
