ಬಿಜೆಪಿ ಟಿಕೆಟ್ ಆಫರ್ ನೀಡಿದ್ದರಂತೆ ಜ್ಞಾನೇಶ್ ಕುಮಾರ್!...ಸಿಇಸಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ ಕೆರಳದ ಮಾಜಿ ಮುಖ್ಯ ಕಾರ್ಯದರ್ಶಿ | Jiji Thomson

ತಿರುವನಂತಪುರಂ: 2016 ರಲ್ಲಿ ದೆಹಲಿಗೆ ಪ್ರಯಾಣಿಸುವಾಗ, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುವಂತೆ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ನನಗೆ ಸಲಹೆ ನೀಡಿದ್ದರು ಎಂದು ಕೆರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್​​ ( Jiji Thomson) ಗಂಭೀರ ಆರೋಪ ಮಾಡಿದ್ದಾರೆ.
ಸಿಇಸಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ ಕೆರಳದ ಮಾಜಿ ಮುಖ್ಯ ಕಾರ್ಯದರ್ಶಿ
ಸಿಇಸಿ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ ಕೆರಳದ ಮಾಜಿ ಮುಖ್ಯ ಕಾರ್ಯದರ್ಶಿ
Published on: 

ತಿರುವನಂತಪುರಂ: 2016 ರಲ್ಲಿ ದೆಹಲಿಗೆ ಪ್ರಯಾಣಿಸುವಾಗ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುವಂತೆ ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ನನಗೆ ಸಲಹೆ ನೀಡಿದ್ದರು ಎಂದು ಕೆರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್​​ ( Jiji Thomson) ಗಂಭೀರ ಆರೋಪ ಮಾಡಿದ್ದಾರೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನಿರ್ಧಾರಗಳ ಕುರಿತು ಚುನಾವಣಾ ಆಯೋಗದ ಇಬ್ಬರು ಆಯುಕ್ತರ ಆಕ್ಷೇಪಣೆಗಳಿಂದಾಗಿ ಎದ್ದಿರುವ ವಿವಾದದ ನಡುವೆಯೇ ಈ ಹೊಸ ಆರೋಪ ಕೇಳಿಬಂದಿದೆ. ತಾವು ಆ ಪ್ರಸ್ತಾಪವನ್ನು ತಕ್ಷಣವೇ ತಿರಸ್ಕರಿಸಿದ್ದಾಗಿ ತಿಳಿಸಿರುವ ಥಾಮ್ಸನ್​​, ಜ್ಞಾನೇಶ್ ಕುಮಾರ್ ಅವರ ಈ ನಡೆ ತಮಗೆ ಅಚ್ಚರಿ ತಂದಿತ್ತು ಎಂದಿದ್ದಾರೆ.

2019 ರ ಪತ್ತನಂತಿಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆಂಟೋ ಆಂಟೋನಿ ಗೆಲುವು ಸಾಧಿಸಿದರೆ, ಸಿಪಿಐ(ಎಂ)ನ ವೀಣಾ ಜಾರ್ಜ್ ಎರಡನೇ ಸ್ಥಾನ ಹಾಗೂ ಬಿಜೆಪಿಯ ಕೆ. ಸುರೇಂದ್ರನ್ ಮೂರನೇ ಸ್ಥಾನ ಪಡೆದಿದ್ದರು.

ಇದನ್ನೂ ಓದಿ:ಇಂತದ್ದನ್ನ ನಾವು ನೋಡಿಯೇ ಇಲ್ಲ!...ಸಿಇಸಿ ಜ್ಞಾನೇಶ್ ಕುಮಾರ್‌ಗೆ ಪದ್ಮಭೂಷಣ ಕೊಡಿ ಎಂದ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ! | Samik Bhattacharya

ಈ ವಿಷಯ ಮಾಧ್ಯಮಗಳಲ್ಲಿ ಹೊರಬರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜ್ಞಾನೇಶ್ ಕುಮಾರ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಜ್ಞಾನೇಶ್ ಕುಮಾರ್ ಅವರು ಐಎಎಸ್ ಅಧಿಕಾರಿಯಾಗಿದ್ದಾಗ ಬಿಜೆಪಿಗೆ ಆಳುಗಳನ್ನು ಸೇರಿಸುವ ಕೆಲಸ ಮಾಡುತ್ತಿದ್ದರು, ನಂತರ ಅವರನ್ನೇ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಗೆ ನೇಮಿಸಲಾಗಿದೆ ಎಂದು ರಾಹುಲ್ಆರೋಪಿಸಿದ್ದಾರೆ.

ಇದಲ್ಲದೆ, ಥಾಮ್ಸನ್​​ ತಮ್ಮ ವೃತ್ತಿಜೀವನದ ಆರಂಭದಲ್ಲಿಯೂ ಕೆಲವರು ರಾಜಕೀಯ ಪ್ರವೇಶಿಸುವಂತೆ ಕೇಳಿಕೊಂಡಿದ್ದರು ಮತ್ತು ಈ ವಿಷಯ ತಿಳಿದ ಜ್ಞಾನೇಶ್ ಕುಮಾರ್ ನಂತರವೂ ತಮ್ಮನ್ನು ರಾಜಕೀಯಕ್ಕೆ ಬರಲು ಮನವೊಲಿಸಲು ಯತ್ನಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯಗಳ ವರದಿ ಹೊರಬಂದ ಬೆನ್ನಲ್ಲೇ ಜಿಜಿ ಥಾಮ್ಸನ್​​ ಅವರ ಈ ಹೇಳಿಕೆ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ದೇಶದಾದ್ಯಂತ ವಿಪಕ್ಷಗಳು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ತಿದ್ದುಪಡಿ, ಫಾರ್ಮ್ 6 ರ ಬದಲಾವಣೆ ಮತ್ತು ಕೇಂದ್ರೀಕೃತ ವೋಟರ್ ಡೇಟಾಬೇಸ್ ನಿರ್ವಹಣೆಯ ನಿರ್ಧಾರಗಳ ಬಗ್ಗೆ ಹಲವು ಬಾರಿ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಮಾಧ್ಯಮ ವರದಿಗೆ ಚುನಾವಣಾ ಆಯೋಗದ ಸ್ಪಷ್ಟನೆ

ಶನಿವಾರದಂದು ಚುನಾವಣಾ ಆಯೋಗವು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಎಸ್​​ಐಆರ್​​ಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ಮೂವರು ಆಯುಕ್ತರೂ ಸರ್ವಸಮ್ಮತಿಯಿಂದ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6 ರ ಬದಲಾವಣೆಯನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ ಎಂದು ತಿಳಿಸಿದೆ. ಸಂಧು ಮತ್ತು ಜೋಶಿ ಅವರು ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಬರೆದ ಪತ್ರಗಳು ಆಡಳಿತಾತ್ಮಕ ನಿಯೋಜನೆಗೆ ಸಂಬಂಧಿಸಿದ್ದು, ಯಾವುದೇ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ್ದಲ್ಲ ಎಂದು ಆಯೋಗ ಹೇಳಿದೆ.

ಚುನಾವಣಾ ಆಯೋಗದ ಸ್ಪಷ್ಟನೆಯಿಂದ ಕಾಂಗ್ರೆಸ್ ಹೆಣೆದಿದ್ದ ಸುಳ್ಳು ಆರೋಪಗಳು ಬಯಲಾಗಿವೆ ಎಂದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸಮರ್ಥಿಸಿಕೊಂಡಿವೆ. ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರು ವಿಪಕ್ಷಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ ಎಂದು ಟೀಕಿಸಿದ್ದಾರೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕೂಡ ಚುನಾವಣಾ ಆಯೋಗದ ಈ ಸ್ಪಷ್ಟನೆಯನ್ನು ಸ್ವಾಗತಿಸಿದ್ದಾರೆ.

ಮತ್ತೊಂದೆಡೆ, ಇಂಡಿಯಾದ ಒಕ್ಕೂಟದ ನಾಯಕರು ಸೆಪ್ಟೆಂಬರ್ 30 ರಂದು ದೆಹಲಿಯಲ್ಲಿ ಮುಂದಿನ ಕಾರ್ಯತಂತ್ರ ರೂಪಿಸಲು ಸಭೆ ಸೇರಲಿದ್ದು, ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ವಿಪಕ್ಷ ನಾಯಕರಿಗೆ ಪತ್ರ ಬರೆದು ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net