More

    ಎಸ್​ಪಿಬಿ ನಿಧನದ ಸುತ್ತ, ಎದ್ದ ಅಲೆಗಳು ಎತ್ತೆತ್ತ?

    ರಾಷ್ಟ್ರದ ಆರೋಗ್ಯ ರಕ್ಷಣೆಯಲ್ಲಿ ಕಲೆಯ ಪಾತ್ರ ಮಹತ್ವದ್ದು. ಗ್ರೀಕರಲ್ಲಿ ಅಭಿರುಚಿ ಕೆಟ್ಟಾಗ ಸಾಕ್ರೆಟೀಸ್ ನಾಟಕಗಳ ಕೀಳುಮಟ್ಟದ ದೃಶ್ಯಗಳನ್ನು ಆಕ್ಷೇಪಿಸಿ, ಜನರನ್ನು ಪ್ರಶ್ನಿಸಿ, ಅವರು ಕೀಳನ್ನೇ ಬಯಸಿ, ಅಂದಿನ ಅಧಿಕಾರಾರೂಢ ವರ್ಗ ಅವನನ್ನು ಕೊಂದಿತ್ತು.

    ಒಂದೆಡೆ ಸಿನಿಮಾ ನಟ-ನಟಿಯರ ಭ್ರಷ್ಟ, ನಾಚಿಕೆಗೆಟ್ಟ ನಡವಳಿಕೆಗಳು ಇನ್ನೊಂದತ್ತ ಜೂಜಿನ ಆಕಾರ, ಭೂತ ಬೇತಾಳ ಶಕ್ತಿ ಎಸ್​ಪಿಬಿ ನಿಧನದ ಸುತ್ತ, ಎದ್ದ ಅಲೆಗಳು ಎತ್ತೆತ್ತ?ಪಡೆದುಕೊಂಡ ಕ್ರಿಕೆಟ್ಟಿಗರ ರಾಷ್ಟ್ರನಾಶಕ ಮೇಲ್ಪಂಕ್ತಿಗಳು, ಅವರ ಹಿಂದೆ ಪಟ್ಟಭದ್ರ, ಕರ್ಣ, ಶಕುನಿಯರನ್ನೂ ಹಿಂದಿಕ್ಕುವ ಕುತಂತ್ರಿ ರಾಜಕಾರಣಿಗಳು, ಆಘಾತಕರ ವಿದೇಶಿಯರ ನಂಟುಗಳು, ಎತ್ತೆತ್ತಲೂ ಸಂಸ್ಕೃತಿಕನಾಶಕ ಅಂಧಕಾಸುರ, ಬಕಾಸೂರ, ವೃತ್ತಾಸೂರ, ತ್ರಿಪುರಾಸುರರಂಥ, ಬ್ಯಾಂಕ್ ದೋಚುಗಾರರು, ಹೇಗಾದರೂ ‘ದುಡ್ಡು ಮಾಡುವು’ದೊಂದೇ ಕಾಯಕವಾದ ಸಂಘಟಿತ ಜಾತೀಯ ಶತ್ರುಗಳು, ಅವರ ಪಗಡೆ ಹಾಸಿನಂತಹ ರಾಜಕೀಯ ಪಕ್ಷಗಳು, ಮೋಸಗೊಂಡ ವೋಟುಬ್ಯಾಂಕುಗಳು, ಯಾರದೋ ಸ್ವಾರ್ಥಕ್ಕೆ ಬೇರಾರೋ ಸಾಯುವಂತೆ ಸಂಘಟಿಸಿದ ‘ಬಂದ್’ಗಳು, ದಿನ ಬೆಳಗಾದರೆ ಮುಷ್ಕರ, ‘ಹಟಾವೋ’ಗಳು, ಪ್ರಜಾಸತ್ತೆಯನ್ನೇ ಕೊಲೆ ಮಾಡುವ ಕೊಲೆಗಡುಕರ ತಿರು ಬೊಬ್ಬೆಗಳು, ದಾರಿ ತಪ್ಪಿಸುವ ಟಿ.ವಿ. ಚರ್ಚೆಗಳು, ತಿರುಚು ಪತ್ರಿಕಾ ವರದಿಗಳು, ಇಂಥ ಗಟಾರದಲ್ಲೂ ಅಲೆ ಎಬ್ಬಿಸಿ, ದುರ್ವಾಸನೆ ಮೂಡಿಸುವ ಘಾಟಿನ ಸಂದರ್ಭದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನದ ಸಂದರ್ಭದಲ್ಲಿ ನನ್ನ ಮನಸ್ಸು ಎತ್ತೆತ್ತಲೋ ಅಲೆಯುತ್ತ ಈ ವಿಚಾರಲಹರಿಗಳು ಎದ್ದು ನಿಮ್ಮ ಮುಂದೆ ತೋಡಿಕೊಳ್ಳಲು ಯತ್ನಿಸುವೆ.

    ಇಲ್ಲಿ ಒಂದು ಸೂತ್ರವನ್ನು-‘ಕಂಟಿನ್ಯೂಯಿಟಿ’ಯನ್ನು ಕಾಣಲು ನಿಮಗೆ ಸಹನೆ, ಚುರುಕು, ಸೂಕ್ಷ್ಮತೆಗಳು, ಸಂವೇದನಾಶೀಲತೆ ಬೇಕು. ಒಪು್ಪತ್ತೇನೆ. ಈ ಲೇಖನ ಬರೆಯುವಾಗ ನೀವು ನೆನಪಿಡಬೇಕಾದ್ದು-ನಾನು ‘ಸಂತೋಷ-ಅಸಹನೆಯ’ kಜ್ಝಿlಟಢ-ಎಂಬ ವರ್ಗದವನಲ್ಲ. ನಾನು ಸಂಗಿತಪ್ರಿಯ. ಅಷ್ಟಿಷ್ಟು ಹಾಡಬಲ್ಲವ. ರಸಿಸಬಲ್ಲವ. ಕಲಾಪ್ರಿಯ. ಹಿಂದೆ ಕೊಟ್ಟುರಪ್ಪನವರ ಚಾಮುಂಡೇಶ್ವರೀ ಕಂಪನಿಯ ನಾಟಕಗಳನ್ನೂ, ಉತ್ತಮ ಹಾಡುಗಳನ್ನೂ ನೋಡಿ, ಕೇಳಿ ಅನುಭವಿಸಿದವ. ನನ್ನ ಹಿರಿಯ ಸೋದರಿಯರು ಹಾಡುತ್ತಿದ್ದರು. ನನ್ನ ಐದನೆಯ ವಯಸ್ಸಿನಿಂದ ನಾನು ತ್ಯಾಗರಾಜ, ಪುದಿದಂ, ಕನಕ, ಅನ್ನಮಯ್ಯರ ಕೀರ್ತನೆಗಳನ್ನು ಕೇಳಿ ಆನಂದಿಸಿದರೂ ಆಗ ಪ್ರಚಲಿತವಿದ್ದ ಹಾಡುಗಳನ್ನು ಈಗ ಕೇಳುವುದು ಅಪರೂಪ. ಕಥೆ, ಕವಿತೆ, ಲೇಖನ, ಹರಟೆ, ಹಾಸ್ಯಚುಟುಕುಗಳನ್ನು ತಾರುಣ್ಯದಲ್ಲಿ ಬರೆದು ಪ್ರಚುರಿಸಿರುವೆ. ಹಿಂದಿ ‘ರಾಮರಾಜ್ಯ’ ಚಿತ್ರ, ಶಾಂತಾರಾಂ ನಿರ್ದೇಶನದ ‘ಭಾರತಕೀ.. ಕಹಾಂ ವೈದೇಹಿ?’ ಹಾಡನ್ನು ಹಾಗೇ ಹಾಡುತ್ತ ಸ್ಕೂಲ್ ದಿನಗಳಲ್ಲಿ ಮೇಷ್ಟ್ರರುಗಳನ್ನೂ, ಸಹಪಾಠಿಗಳನ್ನೂ ತೃಪ್ತಿಪಡಿಸುತ್ತಿದೆ. ಇಂಥ ಪ್ರಮಾಣಗಳನ್ನು ನಿಮ್ಮ ಮುಂದೆ ಇಡುತ್ತಿರುವ ಉದ್ದೇಶ, ನನ್ನ ಅಭಿಪ್ರಾಯಗಳಲ್ಲಿ ನಿಮಗೆ ಶ್ರದ್ಧೆ ಹುಟ್ಟಿಸಲು.

    ನಾನು ಢೋಂಗಿ ಬರಹಗಾರನೋ, ಕಲಾವಿದನೋ, ಪುಂಡ ವಿಚಾರಶೀಲನೋ ಅಲ್ಲ ಎಂದು ನಿಮಗೆ ನಂಬಿಕೆ ತರಿಸಲು. ಎಸ್.ಪಿ.ಬಿ.-‘ಅನ್​ಟ್ಯೂಟರ್ಡ್ ಜೀನಿಯಸ್’ ಎಂಬ ಕಲಾ ಅಭಿಜಾತರ ವರ್ಗದವರು. ಪಾಠ ಹೇಳಿಸಿಕೊಳ್ಳದೆಯೇ ಸ್ವಪ್ರತಿಭಾ ವಿಲಾಸ ಕುದುರಿದ ಮಹಾನ್ ಕಲಾವಿದ. ಆ ವರ್ಗದ ಹಿಂದಿನ ಇತರರು-ಪಿ.ಬಿ.ಶ್ರೀನಿವಾಸ್, ಶೀರ್​ಗಾಳಿ ಗೋವಿಂದರಾಜನ್, ಹಿಂದಿಯ ಸೆಹಗಾಲ್, ಮಹಮ್ಮದ್ ರಫಿ, ನಮ್ಮ ಕಾಳಿಂಗರಾವ್, ತಮಿಳಿನ ಎಸ್.ಜಿ.ಕೆಟ್ಟಪ್ಪ, ಕೆ.ಬಿ.ಸುಂದರಾಂ ಬಾಳ್, ನಮ್ಮ ರಾಜೈಂಗಾರ್, ಚಿದಂಬರಂ ಜಯರಾಮನ್ ಇನ್ನಿತರರೂ ಮರೆಯಲಾರದ ಕಾಣಿಕೆ ಇತ್ತ ‘ಕಂಠಶ್ರೀ’ಗಳು, ಶುದ್ಧ ಅಭಿಜಾತ ಕಲಾವಿದರು. ನಾಟ್ಯದಲ್ಲಿ ಲಲಿತಾ ಪದ್ಮಿನಿ, ವೈಜಯಂತಿ ಮಾಲಾ, ಹೆಮಾಮಾಲಿನಿ, ‘ಶಂಕರಾಭರಣಂ’ ಚಿತ್ರದ, ಪ್ರತಿಭಾಶಾಲಿನಿ, ಅಪ್ರತಿಮ ಕಲಾವಿದೆ, ನೃತ್ಯಗಾರ್ತಿ ಮಂಜು ಭಾರ್ಗವೀ, ಇವರನ್ನು ಎಷ್ಟು ಜನ ಮಿರಿಸಬಲ್ಲರಯ್ಯ? ‘ಶಂಕರಾಭರಣಂ’ ಚಿತ್ರ ಈಗ ಎಷ್ಟು ಜನರಿಗೆ ಹಿಡಿಸುತ್ತದೆ? ವಾಸನ್ ಅವರ ‘ಚಂದ್ರರೇಖಾ’ನೋ? ಬಿ.ಆರ್.ಪಂತಲು ಅವರ ‘ಸ್ಕೂಲ್ ಮಾಸ್ಟರ್’, ‘ಮೊದಿಲ್​ತೇದಿ’ ಇಂಥವೋ?

    ನಾನು ಮೈಸೂರಿನಲ್ಲಿ ಕೇವಲ ಏಳೆಂಟು ವರ್ಷ ಹಿಂದೆ ವಾಸ್ತವ್ಯ ಇದ್ದಾಗ ವಾಸುದೇವಾಚಾರ್ಯ ಕಲಾಭವನ-‘ನಾದಬ್ರಹ್ಮಸಭಾ’-ಆಶ್ರಯದಲ್ಲಿ ಮಂಜು ಭಾರ್ಗವಿಯವರ ನೃತ್ಯ ಪ್ರದರ್ಶನ ಇತ್ತು. ವೀಕ್ಷಕರೋ? ಹತ್ತಿಪ್ಪತ್ತು ಜನರು ಮಾತ್ರ! ಅಲ್ಲಿದೆ ಅಭಿರುಚಿಯ ಅಧಃಪತನ, ಕೀಳು ಮನರಂಜನೆಯ ರುಚಿಯ ಹಾವಳಿ! ಈ ಬಗ್ಗೆ ನಿಮ್ಮ ಗಮನ ಸೆಳೆಯಲು ಈಗ ಯತ್ನಿಸುತ್ತೇನೆ. ಕೀಳುರಂಜನೆ ಬೇಕೆಂದು ಸಿನಿಮಾಪ್ರಿಯರಿಗೆ, ರೇಪು, ಬಡಿದಾಟ, ಹಿಂಸಾ ಪ್ರದರ್ಶನ ರುಚಿಯವರಿಗೆ ನನ್ನ ಬರವಣಿಗೆ ಹಿಡಿಸದಿರುವುದು ಮಾತ್ರವಲ್ಲ, ಆಕ್ರೋಶವನ್ನೂ ಉಂಟು ಮಾಡುವ ಸಂಭವ ಇದ್ದೀತು ಎಂಬುದನ್ನು ಚೆನ್ನಾಗಿ ಬಲ್ಲ ನಾನು ರಾಷ್ಟ್ರದ ಯುವಜನರ ಮಾನಸಿಕ, ದೈಹಿಕ, ವ್ಯಕ್ತಿಗತ ಆರೋಗ್ಯದ ರಕ್ಷಣೆಯ ಭಾವನೆಯಿಂದ ಬರೆಯಬೇಕಾಗಿದೆ.

    ಸತ್ಯವನ್ನೇ ಬರೆದು ಕೋರ್ಟಿನವರೆಗೆ ಹತ್ತಿದ ಎದೆಗಾರಿಕೆ, ನನಗೆ ವ್ಯಾಸ ವಾಲ್ಮೀಕಿ, ಬೋಧಾಯನ, ಶುಕರಂಥ ತ್ರಿಕಾಲಜ್ಞರ ಪರಂಪರೆಯಿಂದ ಬಂದುದು. ಬರೆಯಬಾರದ್ದನ್ನು ಬರೆದರೂ ತಪು್ಪ, ಬರೆಯಬೇಕಾದುದನ್ನು ಬರೆಯದೇ ಬಿಟ್ಟರೂ ತಪು್ಪ ಎಂದು ನಾನು ನಂಬಿದವ! ಇರಲಿ, ರಾಷ್ಟ್ರದ ಆರೋಗ್ಯ ರಕ್ಷಣೆಯಲ್ಲಿ ಕಲೆಯ ಪಾತ್ರ ಮಹತ್ವದ್ದು. ಗ್ರೀಕರಲ್ಲಿ ಅಭಿರುಚಿ ಕೆಟ್ಟಾಗ ಸಾಕ್ರೆಟೀಸ್ ನಾಟಕಗಳ ಕೀಳುಮಟ್ಟದ ದೃಶ್ಯಗಳನ್ನು ಆಕ್ಷೇಪಿಸಿ, ಜನರನ್ನು ಪ್ರಶ್ನಿಸಿ, ಅವರು ಕೀಳನ್ನೇ ಬಯಸಿ, ಅಂದಿನ ಅಧಿಕಾರಾರೂಢ ವರ್ಗ ಅವನನ್ನು ಕೊಂದಿತ್ತು. ‘ಮಿಡಿಯಾ’ ಎಂಬುದು ಯಾಲಿಪಿಡೀಸನನ ಒಂದು ನಾಟಕ. ಗಂಡನ ದುರ್ವರ್ತನೆಯಿಂದ ಬೇಸತ್ತ ನಾಯಕಿ, ತನಗೆ ಅವನಿಂದ ಹುಟ್ಟಿದ ಮಗುವನ್ನೇ ತುಂಡರಿಸಿ ತೋರಿಸುವ ದೃಶ್ಯ ಅಲ್ಲಿ ಬರುತ್ತದೆ. ನಾನು ಎಂ.ಎ, ಬಿ.ಎ.ಆನರ್ಸ್ ಓದುವಾಗ ಈ ನಾಟಕ ಆಂಗ್ಲ ಭಾಷಾಂತರದಲ್ಲಿ ನನಗೆ ಪಠ್ಯವಿತ್ತು.

    ನಾಟಕಗಳಲ್ಲಿ ನಟ-ನಟಿಯರು ಬೆನ್ನು ತೋರಿಸಬಾರದು, ಸಾವು ಪ್ರಕರಣ ರ್ವ್ಯಜ, ಅತಿ ದುಃಖ ಪ್ರದರ್ಶನ ಸಲ್ಲ, ವೇಷಭೂಷಣಗಳಲ್ಲಿ ಗಾಂಭೀರ್ಯ, ಸೌಮ್ಯತೆ ಇರಬೇಕು! ‘ಅಪದ್ಧ ಶಬ್ದಗಳ ಪ್ರಯೋಗ ಕೂಡದು’-ಇತ್ಯಾದಿ ನಮ್ಮಲ್ಲೂ ನಿಯಮ ಇತ್ತು. ಅರಿಸ್ಟಾಟೆಲಿನ ಟಟಛಿಠಿಜ್ಚಿಠನಲ್ಲೂ ಇವೆ! ನಾನು ಓದಿದ್ದೇನೆ. ನೀವು ಓದದಿದ್ದರೆ ನಿಮ್ಮ ಕರ್ಮ. ಬಿ.ಎಂ.ಶ್ರೀ.ವರೆಗೆ-ಬೇಂದ್ರೆವರೆಗೆ ಸಾಗಿದ್ದ ಸಾಹಿತ್ಯದ ಜಾಡನ್ನು ‘ಮಣ್ಣಿನ ವಾಸನೆ, ಕೊಚ್ಚೆಯ ವಾಸನೆ’ಗಳ ಪ್ರತಿಪಾದಕರು ಬದಲಿಸಿ, ಕ್ರೋಧ, ಕೋಪ, ತಾಪ, ಅಟಾಟೋಪ, ಜಾತಿದ್ವೇಷ, ಸಾಮೂಹಿಕ ಉದ್ರೇಕಗಳಲ್ಲಿ ‘ಕ್ರಾಂತಿ’ ಹೆಸರಲ್ಲಿ ತಂದು ‘ರಿಯಲಿಸಂ’ ‘ಸರ್ ರಿಯಲಿಸಂ’ ಹೆಸರಲ್ಲಿ ಸಮರ್ಥಿಸಿದರು. ಅನಂತಮೂರ್ತಿ, ಕಾರ್ನಾಡಿಗಳು- ರೂಢಮೂಲ ಸಂಸ್ಕೃತಿಯನ್ನೇ ಪ್ರತಿಭಟಿಸಿದರು, ವಿಕೃತಗೊಳಿಸಿದರು. ಬಾಯಲ್ಲಿ ಹೇಳದೆ ‘ಕಮ್ಯುನಿಸ್ಟ್ ಸಾಹಿತ್ಯ’ಕ್ಕೆ ಪಟ್ಟವಾಗಿ, ದೇಶೀಯ ರೀತಿಗೆ ಚಟ್ಟವಾಯ್ತು. ಅದೇ ದಾರಿಯನ್ನು ಸಿನಿಮಾಗಳೂ ಆಗಾಗ ಹಿಡಿದವು! ಚೋಪ್ರಾ (ಹಿಂದಿ) ಮಹಾಭಾರತ, ರಮಾನಂದ ಸಾಗರರ ರಾಮಾಯಣ, ಇಲ್ಲಿ ಜೆಸಿಬಿ ಕೆಲಸ ಮಾಡಿಯೂ, ಕಳೆ, ಕಸ, ಮುಳ್ಳು ಉಳಿದು ಹಾವಳಿ ಮಾಡುತ್ತ ಈಗ ನಟಿಯರೂ ಮಾದಕದ್ರವ್ಯಸೇವಿಗಳಾಗಿ, ಕೊಲೆಗಡುಕರಾಗಿ, ಉದ್ರೇಕದ ತುಂಡು ಲಂಗ ನೃತ್ಯ, ಕಾಮಕ್ರೋಧ ಎಬ್ಬಿಸುವ ಹಾಡುಗಳು, ತಾಳ, ಶ್ರುತಿ, ಲಯ ಇಲ್ಲದ ಘಟಜಿಠಛಿ= ಸಂಗೀತ ಎಂಬ ಭ್ರಮೆ ಜನಪ್ರಿಯವಾಗಿದೆ.

    ಸಾಹೇಬ್ರೇ! ಪ್ರೊಡ್ಯುಸರ್​ಗಳೇ? ನಿಮಗೆ ಬಂದಿರುವ ರೋಗ ಯಾವುದು? ನಾನು ಬಲ್ಲೆ! ‘ದುಡ್ಡು ಮಾಡುವುದು’. ಅದೇ ರೋಗ ರಾಜಕಾರಣಿಗಳಿಗೆ ಸಹ! ನಟಿಯಾಗದೆಯೂ ಸೋನಿಯಾ ಕಂಪನಿ ಮಾಡುತ್ತಿರುವುದೇನು? ‘ಜನ ಹಾಳಾಗಲಿ, ದುಡ್ಡು ಬೇಕು’. ಇದು ‘ಥೀಂ’, ಹೌದೆ? ‘ಶಂಕರಾಭರಣಂ’, ‘ಚಂದ್ರಲೇಖಾ’ ತರಹ ಚಿತ್ರಗಳನ್ನು ಈಗ ಎಷ್ಟು ಜನ ಮಾಡಬಲ್ಲರು? ಎಸ್​ಪಿಬಿಯಂತೆ ಎಷ್ಟು ಜನ ಹಾಡುಬಲ್ಲರು? ಜನರನ್ನು ತಿದ್ದುವ ಸಾಮಾಜಿಕ, ರಾಜಕೀಯ ವಸ್ತುಗಳ ಚಿತ್ರ ಬೇಕಯ್ಯ! ಮಲಯಾಳಿಗಳು ವಾಸಿ-ಮಮ್ಮುಟಿ, ಮೋಹನ್ ಲಾಲ್, ಸುರೇಶ ಗೋಪಿ ಅವರ ಇಜಿಞಛಿ ಊಜ್ಝಿಛಿ, ಘಚ್ಞಜಿ (ನರೇಂದ್ರ) ಕಟ್ಝಜ್ಚಿಛಿ, ಕಟ್ಝಜ್ಚಿಛಿ-‘ಡಬ್ಡ್’ ಚಿತ್ರಗಳನ್ನು ನೋಡಿದ್ದೀರಾ? ವಿಜಯಕಾಂತ್ ಅವರ ‘ರಮಣ’, ‘ಶಬರೀ’, ತಮಿಳು ಚಿತ್ರಗಳನ್ನೋ? ಆ ಜನ ಇಂಥವನ್ನು ಬಯಸುತ್ತಾರೆ. ರೋಸಿಹೋಗಿದ್ದಾರೆ. ಟಛಿಟಟ್ಝಛಿ ಗಚ್ಞಠಿ ಚ ್ಚಚ್ಞಜಛಿ ್ಛ್ಟ ಚಿಛಿಠಿಠಿಛ್ಟಿ. ಕೋರ್ಟುಗಳು ಕೊಲ್ಲದ ದುಷ್ಟರನ್ನು ಚಿತ್ರಪಟಗಳಲ್ಲಿ ಕೊಂದು ಅಲ್ಪತೃಪ್ತಿ ಪಡುತ್ತಾರೆ. ಕನ್ನಡದಲ್ಲಿ ಉತ್ತಮ ನಟ-ನಟಿಯರು ಇಲ್ಲದೆ ಇಲ್ಲ. ಚಿತ್ರಗಳ ವಸ್ತುಆಯ್ಕೆ, ಹಣಹೂಡಿಕೆ, ದಿಗ್​ದರ್ಶನಗಳಲ್ಲಿ ಕೊರತೆಯೇ?

    ಆಟಪಾಠಗಳಲ್ಲೂ ಸುಧಾರಣೆ ಬೇಕಯ್ಯ! ಇದು ನಿಮಗೆ ಅಪ್ರಿಯ. ಹನ್ನೊಂದು ಜನರ ಟೀಂಗೆ, ಅವರ ಹಣ ದಾಹಕ್ಕೆ-ಲಕ್ಷ ಲಕ್ಷ ಸಂಪಾದನೆಗೆ, ಕೋಟಿ ಕೋಟಿ ಯುವಕರ ವೇಳೆ, ಗಮನ, ಆಸಕ್ತಿ ಸೆಳೆದು ಸೋಮಾರಿಗಳನ್ನಾಗಿಸುವ ಐಪಿಎಲ್​ಗಳು ‘ಯಾವ ದೇವರಿಗೆ, ಯಾವ ಮಾರಿಗೆ ಪ್ರೀತಿ!’ ಯುವಕರಿಗೆ ಬೇಕು ವ್ಯಾಯಾಮ! ಮೋದಿಯವರು ಕ್ರೀಡೆಗಳನ್ನು ವಿಕೇಂದ್ರೀಕರಣ ಮಾಡಲಾರದಷ್ಟು ಅಶಕ್ತರೇ? ಅನಾಸಕ್ತರೇ? ಇದೊಂದು ಹೆಚ್ಚಾಗಿಲ್ಲವೇನಿರಯ್ಯ? ಆಟ, ಕ್ರೀಡೆ, ಜೂಜಾಗುವುದು ಅಲ್ಲಿ ಹಣ ತೊಡಗಿದಾಗ! ಹಣ ಬಿಟ್ಟು ಐಪಿಎಲ್ ಮಾಡುತ್ತೀರಾ? ಹಣ ಇಲ್ಲದೆ ಫ್ರೀ ಸಿನಿಮಾ ಮಾಡುತ್ತೀರಾ? ಈಗ ಫ್ರೀ ಎಂಬ ಟಿ.ವಿ. ಚಾನೆಲ್ಲುಗಳು ಇಲ್ಲವೇ?

    ಬ್ಯಾಂಕ್ ಹಣವಹಿವಾಟನ್ನು ಡಿಮಾನಿಟೈಸೇಷನ್ ಮಾಡಿದ ಮೋದಿಯವರಿಗೆ ಯಾವುದೂ ಅಸಾಧ್ಯವಲ್ಲ. ಪುಣೆಯ ಫಿಲ್ಮ್ ಇನ್​ಸ್ಟಿಟ್ಯುಟ್​ನ್ನು ಎಡಪಂಥೀಯರ ಕಪಿಮುಷ್ಠಿಯಿಂದ ಬಿಡಿಸಿದ್ದು ಮಹಾಸಾಧನೆ. ಜೆಎನ್​ಯುು ದಾರಿಗೆ ಬರುತ್ತಿದೆ. ಸಿನಿಮಾ-ಹಿಂದಿ-ಪಟಗಳಲ್ಲಿ ‘ಖಾನ್’ಗಳ, ಅವರ ಹಿಂದಿನ ದಾವೂದ್ ಇಬ್ರಾಹಿಂನಂಥವರ, ಪಾಕ್ ಹಿತಾಸಕ್ತಿಗಳ ಬಲ, ಜಾಲ, ಮುರಿಯಬೇಕಾಗಿದೆ. ಏಕೆ ಈ ಶೂರ್ಪನಖಾ ಪ್ರಲಾಪ? ಅಲ್ಲಿದೆ ಹಣ! ಮಾನ, ಮರ್ಯಾದೆ ಯಾರಿಗೆ ಬೇಕು? ಗಂಡು-ಹೆಣ್ಣು ಪರಸ್ಪರ ಹಿಡಿದು ‘ರೇಪ್’ ಮಾಡುವ ದೃಶ್ಯ ಪ್ರದರ್ಶನಕ್ಕೆ ಬ್ರೇಕು ಬೇಡವೇ? ಸೆನ್ಸಾರ್ ಮಂಡಳಿ, ಯಾವ ಹುಲ್ಲುಗಾವಲಿನ ಒಣಹುಲ್ಲು ತಿನ್ನುತ್ತಾರೋ ನಾನರಿಯೆ! ಅದು ಹುಡುಗ-ಹುಡುಗಿಯರಿಗೆ ಪ್ರಚೋದಕ. ಹಿಂದೆ ಪ್ರಮೋದ್ ಮುತಾಲಿಕರು ಪಬ್​ಗಳ, ಕ್ಲಬ್ಬುಗಳ ‘ತುಂಡುಲಂಗಾ’ಧಾರಿಗಳಿಗೆ ಪಾಠ ಕಲಿಸಿದಾಗ, ಪುಢಾರಿಗಳ ಹಿಂಡೇ ಊಳೆಯಿಟ್ಟಿತ್ತು! ಡಚ್ಝಛ್ಞಿಠಿಜ್ಞಿಛಿ’ಠ ಛಚಢಗೆ-ಅದರ ವಿರೋಧಕ್ಕೆ ಸಹ! ನಿಮ್ಮಲ್ಲಿ ಎಷ್ಟು ಹುಡುಗರು, ನಿಮ್ಮ ಕುಟುಂಬದಲ್ಲಿ ಮುತಾಲಿಕರಂತೆ ಆಗಬಲ್ಲಿರಿ? ಆದಾಗಲಲ್ಲವೇ ಸುಭಾಷ್, ಮೋದಿ, ವಿವೇಕಾನಂದ, ಸಾವರ್ಕರ್, ಶಿವಾಜಿಗಳ ಸೃಷ್ಟಿ? ಇವರಲ್ಲವೇ ರಾಷ್ಟ್ರರಕ್ಷಕರು? ಅಥವಾ ಸೋನಿಯಾ, ಪವಾರರೋ?

    ಈಗ ಅಗ್ರಿಕಲ್ಚರ್ ಸುಧಾರಣಾ ಸೂತ್ರಗಳಲ್ಲಿ ರಾಷ್ಟ್ರಹಿತವೇ ಅಡಗಿದೆ. ಅಲ್ಲಿ ಮಧ್ಯವರ್ತಿಗಳ-‘ಮದ್ಯ’ವರ್ತಿಗಳ ಹಾವಳಿ ನಿಲ್ಲಿಸಲು ಮೋದಿ ಯತ್ನಿಸಿದರೆ, ಅಯ್ಯಾ, ಮೋಸಗೊಳ್ಳುತ್ತಿರುವವರನ್ನೇ ಎತ್ತಿ ಕಟ್ಟುತ್ತಿದ್ದೀರಲ್ಲ? ‘ನಿಮ್ಮ ಬುದ್ಧಿಗೆ ಅಷ್ಟು…’ ಈಗ ಕ್ರೀಡಾಕೂಟ ವಿಕೇಂದ್ರೀಕರಣ, ಸದಭಿರುಚಿಯ ಚಿತ್ರಗಳ ನಿರ್ವಣಗಳ ಪ್ರೋತ್ಸಾಹ ತುಂಬ ಅವಶ್ಯ. ಯಾವ ಕಾಲೇಜು, ಸ್ಕೂಲು ನೋಡಿ, ಸುತ್ತಮುತ್ತ ಬೀಡಾ ಬೀಡಿ ಅಂಗಡಿಗಳಲ್ಲಿ ಡ್ರಗ್ಸ್ ಮಾರಾಟವಿದೆ. ವ್ಯವಸಾಯೋತ್ಪನ್ನಗಳಲ್ಲಿ ‘ಗಾಂಜಾ’ ಬೆಳೆಗಾರರೂ ಇದ್ದಾರೆ. ‘ಟಞಞಛ್ಟಿ್ಚಚ್ಝ cಟಟ’ ಎಂಬ ಬಣ್ಣ. ಸರಿಯೇ? ಹೊಸ ಯುವ ಪೀಳಿಗೆಯ ರಾಜಕಾರಣಿಗಳು ಅತ್ಯವಶ್ಯ ಈಗ. ಹಳಬರಲ್ಲಿ ಅನ್ಯಾಯದ ಹಣ ಮಾಡದವರು ಯಾರು ಇದ್ದಾರೋ? ದೇವರೇ ಬಲ್ಲ. ಸ್ಕೂಲು, ಕಾಲೇಜು, ಆಸ್ಪತ್ರೆ, ರೆಸಾರ್ಟ್, ಮೋಜುಕೇಂದ್ರಗಳು ಎಲ್ಲ ರಾಜಕಾರಣಿಗಳ ಪಗಡೇ ಹಾಸು. ಯುವಕರು ಆಟದ ಕಾಯಿಗಳು, ಪಾಂಡವರು ಸೋತ ಪಾಠ ಯಾರಿಗೂ ಬೇಡ. ಇತ್ತ ಚೀನಾ, ಅತ್ತ ಪಾಕ್​ಗಳು ನಮ್ಮ ಸರ್ವನಾಶಕ್ಕೆ ಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಕರೊನಾ ಮಾಡಿದ ಉಪಕಾರಗಳಲ್ಲಿ ಸಿನಿಮಾ ಥೇಟರುಗಳ ‘ಬಂದ್’ ಎಂಬುದೂ ಒಂದು ಎಂದು ಭಾವಿಸಲೇ?

    ಯುಎಇಯಲ್ಲಿ ಈಗ ಕ್ರಿಕೆಟ್ ಆಡುತ್ತಿದ್ದಾರೆ. ಅರಬ್ಬರಲ್ಲಿ ಹಣವಿದೆ, ಪೆಟ್ರೋಲಿದೆ. ಅರಬ್ಬರು ಹೆಚ್ಚು ಕೆಡುವುದು ಇನ್ನೂ ಏನೂ ಇಲ್ಲ. ಅವರ ಇಕ್ಕಳದಲ್ಲಿ ಇಮ್ರಾನ್ ಸಾಹೇಬರು! ಅಯ್ಯಾ ಆ ರೋಲ್​ವಾಡೆಲ್ ಇಲ್ಲೇಕೆ? ಮೋದಿಯವರು ಅನ್ಯಾಯ, ಅಕ್ರಮ ಹಣಗಳಿಕೆಯ ನಿಮೂಲನೆಯಲ್ಲಿ ತೊಡಗಿದ್ದು, ಈಗ ಸಿನಿಮಾ, ಕ್ರಿಕೆಟ್ಟು ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕಾಗಿದೆ. ಅದು ಆದರೆ ಎಸ್​ಪಿಬಿ ಅವರಿಗೆ ನೆಮ್ಮದಿ ಪರಲೋಕದಲ್ಲೂ ಸಿಗುತ್ತದೆ. ಹಾಡು=ಶಬ್ದ ಆಗಬಾರದು!

    ‘ಸೌಂಡಿನೊಳಗಿರುವುದಿಲ್ಲ ಸೆನ್ಸು

    ಬರೀ ನಾನ್ಸೆನ್ಸು…’ ಎಂದು ಕವಿ ಬೇಂದ್ರೆ ಬರೆದರು! ಆಟೋಹಾರ್ನ್ ಇರುತ್ತದಲ್ಲ? ಅದು ವಾದ್ಯವೋ? ವೇದ್ಯವೋ? ವೇದನೆಯೇ? ಅಂಥ ಸಂಗೀತ ಬೇಕೆ?

    ಜಾಮೀನಿಗೆ ಅರ್ಜಿ ಹಾಕುವುದಿಲ್ಲ, ನನ್ನನ್ನು ಗಲ್ಲಿಗೇರಿಸಿದರೂ ಸರಿ: ಉಮಾಭಾರತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts