More

    ಹಕ್ಕು, ಕರ್ತವ್ಯಗಳ ಜಾಗೃತಿ ಮೂಡಿಸಿ

    ನರಗುಂದ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ನ್ಯಾಯಾಧೀಶ ಲಗಮಾ ಹುಕ್ಕೇರಿ ಹೇಳಿದರು.

    ಪಟ್ಟಣದ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವನ್ನು ಸಾರ್ವಭೌಮ, ಸಮಾಜವಾದಿ ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಪ್ರಯತ್ನಿಸಬೇಕು. ಸಂವಿಧಾನದ ಪ್ರಾಮುಖ್ಯತೆ ಮತ್ತು ಸಂವಿಧಾನಾತ್ಮಕ ಕರ್ತವ್ಯ, ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ರಾಷ್ಟ್ರದ ಸಂವಿಧಾನವನ್ನು ರಕ್ಷಣೆ ಮಾಡಿದರೆ, ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡಂತೆ ಎಂದು ತಿಳಿಸಿದರು.

    ವಕೀಲ ಆರ್.ಟಿ. ಪಾಟೀಲ, ಸಂವಿಧಾನದ ಪೀಠಿಕೆ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕಾಧ್ಯಕ್ಷ ಎಂ.ಬಿ. ಕುಲಕರ್ಣಿ, ಎಸ್.ಕೆ. ಹರಪನಹಳ್ಳಿ, ಎಫ್.ವೈ. ದೊಡಮನಿ, ಎಸ್.ಆರ್. ಪಾಟೀಲ, ಸಿ.ವಿ. ತುರಮರಿ, ವಿ.ಎಸ್. ದೇಶಪಾಂಡೆ, ಕೆ.ಎಸ್. ಹೂಲಿ, ಎಸ್.ಎಂ. ಗುಗ್ಗರಿ, ಎ.ವಿ. ಭೋಸಲೆ, ಆರ್.ಎಸ್. ದೊಡಮನಿ, ವೈ.ಬಿ. ಯಾವಗಲ್ಲ, ಬಿ.ಎಸ್. ಕಲ್ಲಪ್ಪನವರ ಇತರರು ಉಪಸ್ಥಿತರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts