More

    ಟಿಎಲ್‌ಬಿಸಿ ಕೆಳಭಾಗಕ್ಕೆ ನೀರು ಹರಿಸಿ

    ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯಭಾಗದ ರೈತರಿಗೆ ಸಮರ್ಪಕ ನೀರು ಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿವಿಧ ಪಕ್ಷಗಳ ಮುಖಂಡರ ನಿಯೋಗ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕಗೆ ಒತ್ತಾಯಿಸಿದೆ.

    ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಂದ್ರಶೇಖರ ನಾಯಕರಿಗೆ ಗುರುವಾರ ಭೇಟಿಯಾದ ನಿಯೋಗ, ಕಾಲುವೆ ಕೊನೆಯಭಾಗದ ಮಾನ್ವಿ, ಸಿರವಾರ ಮತ್ತು ರಾಯಚೂರು ತಾಲೂಕಿನ ಹಳ್ಳಿಗಳಿಗೆ ನೀರು ಬಾರದಿರುವುದನ್ನು ಖಂಡಿಸಿ ಶುಕ್ರವಾರ ಸಿರವಾರದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

    ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ಕಾಲುವೆಯಲ್ಲಿ ನೀರಿನ ಗೇಜ್ ನಿರ್ವಹಣೆ ಮಾಡದಿರುವುದರಿಂದ ಕೆಳಭಾಗಕ್ಕೆ ನೀರು ಬಾರದಂತಾಗಿದೆ. ಕಾಲುವೆ ಮೇಲೆ ನಿಷೇಧಾಜ್ಞೆ ಜಾರಿಗೊಳಿಸಿದರೂ ಅಕ್ರಮವಾಗಿ ನೀರು ಬಳಕೆ ನಿಲ್ಲುತ್ತಿಲ್ಲ. ಇದರಿಂದ ಕೊನೆಯಭಾಗದ ರೈತರು ಬೆಳೆದ ಬೆಳೆಗಳು ನೀರಿಲ್ಲದೆ ಒಣಗುವಂತಾಗಿವೆ ಎಂದು ದೂರಿದರು.

    ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಮಾತನಾಡಿ, ನೀರಿನ ಸಮಸ್ಯೆ ಗಮನಕ್ಕೆ ಬಂದಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಜತೆ ಮಾತನಾಡಿ, ಶೀಘ್ರದಲ್ಲಿ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ನಿಯೋಗದಲ್ಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಹಂಪಯ್ಯ ನಾಯಕ, ಗಂಗಾಧರ ನಾಯಕ, ಮುಖಂಡರಾದ ಜೆ.ಶರಣಪ್ಪಗೌಡ, ಎನ್.ಗಿರಿಜಾಶಂಕರ, ಅಮರೇಶಪಾಟೀಲ್ ಬಲ್ಲಟಗಿ, ಶಂಕರಗೌಡ ಹರವಿ, ಶಿವರಾಜಪ್ಪಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts