More

    ಸ್ವಾವಲಂಬಿ ಬದುಕಿಗೆ ನೈಪುಣ್ಯತೆ ಅತ್ಯವಶ್ಯ

    ರಾಯಚೂರು: ಮಾಡುವ ಕೆಲಸದಲ್ಲಿ ನೈಪುಣ್ಯತೆ, ಕೌಶಲ ರೂಢಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದು ಕೃಷಿ ವಿಜ್ಞಾನಗಳ ವಿವಿ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್ ಹೇಳಿದರು.

    ಸ್ಥಳೀಯ ಕೃಷಿ ವಿಜ್ಞಾನಗಳ ವಿವಿ ಸಭಾಂಗಣದಲ್ಲಿ ಐಸಿಎಆರ್‌ನಿಂದ ಸೋಮವಾರ ಕೃಷಿ ಪದವೀಧರರಿಗಾಗಿ ಏರ್ಪಡಿಸಿದ್ದ ಉದ್ಯಮಶೀಲತೆಗಾಗಿ ಮೃದು ಕೌಶಲಗಳ ಅಭಿವೃದ್ಧಿ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಪಡೆದ ಶಿಕ್ಷಣದ ಜತೆಗೆ ಉದ್ಯಮ ಸ್ಥಾಪನೆಗೆ ಕೌಶಲ ಅಗತ್ಯವಿದೆ. ಕೆಲಸದ ಬಗ್ಗೆ ಕೌಶಲ, ನೈಪುಣ್ಯ ಇಲ್ಲದ ಕಾರಣ ಬಹಳಷ್ಟು ಪದವೀಧರರು ಉದ್ಯಮದಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯ ಡೀನ್ ಡಾ.ಸತ್ಯನಾರಾಯಣರಾವ್ ಮಾತನಾಡಿ, ಕೃಷಿ ಪದವೀಧರರು ಉದ್ಯಮಶೀಲತೆಯಲ್ಲಿ ಸಮಯ ಪ್ರಜ್ಞೆ, ಕೌಶಲ್ಯಾಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಬೇಕು. ಜತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

    ಉಪನ್ಯಾಸಕರಾದ ಡಾ.ಅಮೃತಾ ಜೋಷಿ ಸಂವಹನ ಕೌಶಲ ಕುರಿತು, ಡಾ.ಜಯಪ್ರಕಾಶ ನಿಡಗುಂದಿ ಸ್ಟಾರ್ಟ್‌ಪ್ ಕುರಿತು, ಡಾ.ಬಿ.ಜಿ.ಲೋಕೇಶ ಸರ್ಕಾರದ ಉಪಕ್ರಮಗಳ ಕುರಿತು, ಕಿಸಾನ್ ಸಮೃದ್ಧಿ ಲಿಮಿಟೆಡ್‌ನ ವ್ಯವಸ್ಥಾಪಕ ಹಸನ್‌ಮುಲ್ಲಾ ಗುಂಟು ಚಟುವಟಿಕೆ ಕುರಿತು ಮಾಹಿತಿ ನೀಡಿದರು.

    ಕೊಪ್ಪಳದ ಬಿಯಾಂಡ್ ಸ್ಲಾಶ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶೇಷಗಿರಿ ಗುಬ್ಬಿ, ಉಪನ್ಯಾಸಕರಾದ ಡಾ.ವಿ.ಬಿ.ವಾಲಿ, ಡಾ.ಕೆ.ಸುರೇಶ, ಡಾ.ಸತೀಶಕುಮಾರ, ಡಾ.ಎಂ.ಮನೋಜಕುಮಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts