More

    ಸಹಕಾರ ಸಂಘಗಳು ಹೊಸತನ ಅಳವಡಿಸಿಕೊಳ್ಳಲಿ – ಉಪ ನಿಬಂಧಕ ಎಂ.ಆರ್.ಮನೋಹರ ಸಲಹೆ

    ರಾಯಚೂರು: ಸಹಕಾರ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದರೂ, ಕಾಲ ಕಾಲಕ್ಕೆ ಸಹಕಾರ ಕಾಯ್ದೆಗಳು ಬದಲಾಗುತ್ತಿವೆ. ಅದಕ್ಕೆ ತಕ್ಕಂತೆ ಸಹಕಾರ ಸಂಘಗಳು ಬದಲಾಗುವ ಮೂಲಕ ಹೊಸತನವನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕ ಎಂ.ಆರ್.ಮನೋಹರ ಹೇಳಿದರು.

    ಸ್ಥಳೀಯ ಜೆಸಿ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟದಿಂದ ಪತ್ತಿನ ಸಹಕಾರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ವಹಣಾಧಿಕಾರಿಗಳಿಗೆ ಸೋಮವಾರ ಏರ್ಪಡಿಸಿದ್ದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇವಾ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ಅರಿತುಕೊಂಡಲ್ಲಿ ಸಂಘಗಳನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗಲಿದೆ. ತೆರಿಗೆ ನೀತಿ, ನಿಯಮಗಳನ್ನು ಅರಿತುಕೊಂಡು ಎಲ್ಲರೂ ಸಂಘದ ಬೆಳವಣಿಗೆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

    ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ವಿಜಯಕುಮಾರ ಪಾಟೀಲ್ ಮಾತನಾಡಿ, ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಈಗಾಗಲೇ ಜಿಎಸ್‌ಟಿ ಮತ್ತು ಸೇವಾ ತೆರಿಗೆ ಕುರಿತು ಆನ್‌ಲೈನ್ ತರಬೇತಿಯನ್ನು ನೀಡಲಾಗಿತ್ತು. ಹೊಸ ಕಾಯ್ದೆಗಳು ಬಂದಾಗ ಅದನ್ನು ಅರಿತುಕೊಂಡು ಅಳವಡಿಸಿಕೊಳ್ಳಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

    ಸಹ ಪ್ರಾಧ್ಯಾಪಕ ಡಾ.ಆರ್.ಜಿ.ಶಶಿಶೇಖರೆಡ್ಡಿ ಒತ್ತಡ ನಿರ್ವಹಣೆ ಕೌಶಲ ಕುರಿತು, ಬೆಂಗಳೂರಿನ ತೆರಿಗೆ ಸಲಹೆಗಾರ ಅನಿಲ ಭಾರದ್ವಾಜ ಸೇವಾ ತೆರಿಗೆ, ಆದಾಯ ತೆರಿಗೆ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಲೆಕ್ಕ ಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕ ಪಂಪಣ್ಣ, ಒಕ್ಕೂಟದ ನಿರ್ದೇಶಕರಾದ ಎಸ್.ಜಿ.ಕಲ್ಲಯ್ಯಸ್ವಾಮಿ, ಶಿವಪ್ಪಗೌಡ, ಕೆಪಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಮರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts