More

    ಶ್ರೀಲಂಕಾ ಮಣಿಸಿದ ಆಫ್ಘನ್: ಹಶ್ಮತ್‌ಉಲ್ಲಾ ಪಡೆ ಸೆಮೀಸ್ ಆಸೆ ಜೀವಂತ

    ಪುಣೆ: ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಗೆಲುವನ್ನು ಸ್ಫೂರ್ತಿಯನ್ನಾಗಿಸಿಕೊಂಡ ಅ್ಘಾನಿಸ್ತಾನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಎಡಗೈ ವೇಗಿ ಫಜಲ್ಹಕ್ ಫಾರೂಕಿ (34ಕ್ಕೆ4) ಮಾರಕ ದಾಳಿ ಹಾಗೂ ಅಜಮತ್ ಉಲ್ಲಾ ಒಮರ್ಜಾಯಿ (73* ರನ್, 63 ಎಸೆತ, 6 ಬೌಂಡರಿ, 3ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ‘ಕಪ್ಪುಗುದುರೆ’ ಅ್ಘಾನಿಸ್ತಾನ ತಂಡ, ಮಾಜಿ ಚಾಂಪಿಯನ್ ಶ್ರೀಲಂಕಾ ಎದುರು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದ ಹಶ್ಮತ್ ಉಲ್ಲಾ ಪಡೆ ಸೆಮೀಸ್ ಆಸೆ ಜೀವಂತವಿರಿಸಿದೆ. ಇತ್ತ 4 ಸೋಲುಂಡ ಶ್ರೀಲಂಕಾದ ಉಪಾಂತ್ಯದ ಹಾದಿ ಕಠಿಣವೆನಿಸಿದೆ.
    ಎಂಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ, ಜಲ್ಹಕ್ ಫಾರೂಕಿ ದಾಳಿಗೆ ನಲುಗಿ 49.3 ಓವರ್‌ಗಳಲ್ಲಿ 241 ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಆಘಾತದ ನಡುವೆಯೂ, ಮಧ್ಯಮ ಸರದಿಯ ಬ್ಯಾಟರ್‌ಗಳಾದ ರಹಮತ್ ಷಾ (62 ರನ್, 74 ಎಸೆತ, 7 ಬೌಂಡರಿ) ಅರ್ಧಶತಕ ಹಾಗೂ ಹಶ್ಮತ ಉಲ್ಲಾ ಶಾಹೀದಿ (58 ರನ್, 74 ಎಸೆತ, 2 ಬೌಂಡರಿ, 1 ಸಿಕ್ಸರ್)- ಅಜ್ಮತ್ ಉಲ್ಲಾ ಒಮರ್ಜಾಯಿ ಮುರಿಯದ 4ನೇ ವಿಕೆಟ್ ಜತೆಯಾಟದ ನೆರವಿನಿಂದ ಅ್ಘಾನಿಸ್ತಾನ ತಂಡ 45.2 ಓವರ್‌ಗಳಲ್ಲಿ 3 ವಿಕೆಟ್‌ಗೆ 242 ರನ್‌ಗಳಿಸಿ ಗೆಲುವಿನ ಸಂಭ್ರಮ ಕಂಡಿತು.

    ಶ್ರೀಲಂಕಾ: 49.3 ಓವರ್‌ಗಳಲ್ಲಿ 241 (ಪಥುಮ್ 46, ಕರುಣರತ್ನೆ 15, ಕುಸಲ್ 39, ಸಧೀರ 39, ಮ್ಯಾಥ್ಯೂಸ್ 23, ಅಸಲಂಕಾ 22, ತೀಕ್ಷಣ 29, ಜಲ್ಹಕ್ ಫಾರೂಕಿ (34ಕ್ಕೆ4), ಮುಜೀಬ್ 38ಕ್ಕೆ2).
    ಅ್ಘಾನಿಸ್ತಾನ 45.2 ಓವರ್‌ಗಳಲ್ಲಿ 3 ವಿಕೆಟ್‌ಗೆ 242 (ಇಬ್ರಾಹಿಂ 39, ರಹಮತ್ 62, ಹಶ್ಮತ್‌ಉಲ್ಲಾ 58*, ಒಮರ್ಜಾಯಿ 73*, ಮಧುಶಂಕ 48ಕ್ಕೆ2, ಕಸುನ್ ರಜಿತ 48ಕ್ಕೆ1).
    ಪಂದ್ಯಶ್ರೇಷ್ಠ: ಜಲ್ಹಕ್ ಫಾರೂಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts