More

    ಸರ್ಕಾರದ ಆದೇಶವಿದ್ರೂ ಕಾಲೇಜಿಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು: ಪ್ರಾಂಶುಪಾಲರ ಜತೆ ವಾಗ್ವಾದ

    ಉಡುಪಿ: ಸರ್ಕಾರದ ಆದೇಶವಿದ್ದರೂ ಕಾಲೇಜಿಗೆ ಹಿಜಾಬ್​ ಧರಿಸಿ ಬಂದಿದ್ದರಿಂದ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ವಾಗ್ವಾದ ಉಂಟಾದ ಘಟನೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.

    ಹಿಜಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಗೆ ತೆರಳದಂತೆ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದರು. ಬಳಿಕ ಹಿಜಾಬ್ ಕಳಚಿ ಕ್ಲಾಸ್​ಗೆ ಬರುವಂತೆ ಸೂಚಿಸಿದರು.

    ಈ ವೇಳೆ ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಾಗ್ವಾದಕ್ಕಿಳಿದ ವಿದ್ಯಾರ್ಥಿನಿಯರು ಸರ್ಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಾದಿಸಿದರು. ಆದರೆ, ಸರಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ ಎಂದು ಪ್ರಾಂಶುಪಾಲರು ಉತ್ತರಿಸಿದರು.

    ಇನ್ನೊಂದೆಡೆ ಕೇಸರಿ ಶಾಲು ತೊಡದೆ ಹಿಂದು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ. ನಿನ್ನೆ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಕಾಲೇಜಿಗೆ ಬಂದಿದ್ದರು. ಸದ್ಯ ಈ ವಿವಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಕ್ಕಾಟಕ್ಕೆ ಕಾರಣವಾಗಿದೆ. (ದಿಗ್ವಿಜಯ ನ್ಯೂಸ್​)

    ಜನರೇ ಎಚ್ಚರ! ಒಂದು ಫೋನ್​ ಕಾಲ್​, ಒಂದು ಸಣ್ಣ ಎಡವಟ್ಟು… 70 ಸಾವಿರ ಹಣ ಕಳೆದುಕೊಂಡ ಮಹಿಳೆ

    ಈ ಫೋಟೋ ನಕಲಿ! ಕೆಟ್ಟದಾಗಿ ತಿರುಚಿದ ಫೋಟೋ ವಿರುದ್ಧ ಗುಡುಗಿದ ನಟಿ ಮಾಳವಿಕ ಮೋಹನನ್​

    ಪಬ್​ಜಿಗೆ ದಾಸನಾಗಿ ಕುಟುಂಬವನ್ನೆ ಕೊಂದ ಬಾಲಕನ ಮಾತು ಕೇಳಿ ಪಾಕ್​ ಪೊಲೀಸರೇ ಶಾಕ್​! PUBG ಬ್ಯಾನ್​ಗೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts