More

    ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಫೋನ್​ ಕದ್ದು ಬಳಸುತ್ತಿದ್ದ ಎಸ್​ಐಗೆ ಬಿಗ್​ ಶಾಕ್​..!

    ತಿರುವನಂತಪುರಂ: ಪೊಲೀಸರು​ ಅಂದರೆ ಜನರು ಮೂಗು ಮುರಿಯುವುದೇಕೆ ಎಂಬ ಪ್ರಶ್ನೆಗೆ ಕೇರಳದ ಸಬ್​ ಇನ್ಸ್​ಪೆಕ್ಟರ್​​ ಒಬ್ಬರು ಪ್ರಾಯೋಗಿಕವಾಗಿಯೇ ಉತ್ತರ ನೀಡಿದ್ದಾರೆ. ಹೌದು, ಇಂಥವರಿಂದಲೇ ಪೊಲೀಸ್​ ಇಲಾಖೆಗೆ ಅಪಕೀರ್ತಿ ಎಂಬುದಕ್ಕೆ ಅವರೇ ಉದಾಹರಣೆ ಆಗಿದ್ದಾರೆ.

    ಸಾವಿನಲ್ಲೂ ರಾಜಕೀಯ ಮಾಡುವುದನ್ನು ನೋಡಿದ್ದೇವೆ. ಆದರೆ, ಈ ಎಸ್​ಐ ಸತ್ತು ಹೋದ ವ್ಯಕ್ತಿಯ ಬಳಿಯು ತನ್ನ ನೀಚ ಬುದ್ಧಿ ತೋರಿರುವುದು ಅತ್ಯಂತ ಅಮಾನವೀಯ. ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿದ್ದ ಮೊಬೈಲ್​ ಫೋನ್ ಕಳ್ಳತನ ಮಾಡುವ ಮೂಲಕ ಕೊಲ್ಲಂನ ಚಥನ್ನೂರು ಪೊಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಜ್ಯೋತಿ ಸುಧಾಕರ್ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

    ವಿವರಣೆಗೆ ಬರುವುದಾದರೆ, ಕಳೆದ ಜೂನ್​ 18ರಂದು ಪೆರುಮಥುರಾ ಮೂಲದ ವ್ಯಕ್ತಿಯೊಬ್ಬ ಕನಿಯಾಪುರಂ ರೈಲ್ವೆ ನಿಲ್ದಾಣದ ಬಳಿ ಮೃತಪಟ್ಟಿದ್ದ. ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿದ ಎಸ್​ಐ ಜ್ಯೋತಿ ಸುಧಾಕರ್​ ಎಲ್ಲ ಪ್ರಕ್ರಿಯೆಯನ್ನು ಮುಗಿಸಿದ್ದರು. ಈ ಪ್ರಕ್ರಿಯೆ ವೇಳೆ ಎಸ್​ಐ ಮೊಬೈಲ್​ ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ.

    ಕೆಲ ದಿನಗಳ ಬಳಿಕ ಮೃತ ವ್ಯಕ್ತಿಯ ಸಂಬಂಧಿಯೊರ್ವ ಬಂದು ಮೃತ ವ್ಯಕ್ತಿಯ ಮೊಬೈಲ್​ ನಾಪತ್ತೆ ಆಗಿರುವುದಾಗಿ ಮತ್ತು ಸಾವಿನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಬಳಿಕ ಸೈಬರ್​ ಸೆಲ್​ ನಡೆಸಿದ ವಿಚಾರಣೆಯಲ್ಲಿ ಮೊಬೈಲ್​ ಫೋನ್​ ಅನ್ನು ಜ್ಯೋತಿ ಸುಧಾಕರ್​ ವಶಕ್ಕೆ ಪಡೆದುಕೊಂಡರು ಎಂಬುದು ತಿಳಿದಿದೆ. ಆ ಸಮಯದಲ್ಲಿ ಜ್ಯೋತಿ ಸುಧಾಕರ್​ರನ್ನು​ ಮಂಗಳಪುರಂ ಠಾಣೆಯಿಂದ ಚಥನ್ನೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

    ಎಸ್​ಐ ಸುಧಾಕರ್​ ಕಳುವಾಗಿದ್ದ ಮೊಬೈಲ್​ನಲ್ಲಿ ತನ್ನ ಅಧಿಕೃತ ಸಿಮ್​ ಕಾರ್ಡ್​ ಬಳಸುತ್ತಿದ್ದ. ಇದು ಅಧಿಕಾರಿಗಳ ಗಮನಕ್ಕೆ ಬಂದ ಬೆನ್ನಲ್ಲೇ ಮೊಬೈಲ್​ ಅನ್ನು ವಶಕ್ಕೆ ಪಡೆದುಕೊಂಡು ಎಸ್​ಐನನ್ನು ಅಮಾನತು ಮಾಡಲಾಗಿದೆ. (ಏಜೆನ್ಸೀಸ್​)

    ಪೆಟ್ರೋಲಿಯಂ ಕಂಪನಿಗಳ ನಿರಂತರ ಬೆಲೆ ಏರಿಕೆ: 100ರ ಗಡಿ ಮುಟ್ಟಿದ ಡೀಸೆಲ್​ ದರ..!

    ವಿಶ್ವದಲ್ಲೇ ಮೊದಲ ಮಲೇರಿಯಾ ಲಸಿಕೆ ಭಾರತದಲ್ಲಿ: ಜಗತ್ತಿನ ಕಣ್ಣು ದೇಶದತ್ತ…

    Lakhimpur Kheri Case: ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾ ಬಂಧನಕ್ಕೆ ಕಾರಣವಾದ ಪ್ರಮುಖ 3 ಅಂಶಗಳಿವು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts