More

    ಪಾವಗಡದಲ್ಲಿ ತಪ್ಪಿದ ಮತ್ತೊಂದು ಬಸ್ ದುರಂತ: ರಭಸವಾಗಿ ಹರಿಯುವ ನೀರಿನಲ್ಲಿ ಸಿಲುಕಿದ ಖಾಸಗಿ ಬಸ್

    ತುಮಕೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ವಾಹನ ಚಾಲಕರು ತುಂಬಾ ಜಾಗರೂಕರಾಗಿ ವಾಹನಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

    ತುಮಕೂರಿನ ಪಾವಗಡದಲ್ಲಿ ಮತ್ತೊಂದು ಬಸ್​ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ರಭಸವಾಗಿ ಹರಿಯುವ ನೀರಿನಲ್ಲಿ ಖಾಸಗಿ ಬಸ್​ ಒಂದು ಸಿಲುಕಿದ ಘಟನೆ ಪಾವಗಡ ತಾಲೂಕಿನ ಹಿಂದೂಪುರ ಮಾರ್ಗ ಮಧ್ಯೆ ನಡೆದಿದೆ.

    ಧಾರಾಕಾರ ಮಳೆಯಿಂದಾಗಿ ವೆಂಕಟಾಪುರ ಬಳಿಯಿರುವ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಹೀಗಿದ್ದರೂ ಜಾಗರೂಕತೆ ವಹಿಸಬೇಕಿದ್ದ ಚಾಲಕ, ಹಿಂದು-ಮುಂದು ಯೋಚಿಸಿದೆ ಸೇತುವೆ ಮೇಲೆಯೇ ಬಸ್​ ಚಲಾಯಿಸಿಕೊಂಡು ಹೋಗಿದ್ದಾನೆ. ಪರಿಣಾಮ ಬಸ್​ ಸೇತುವೆ ನಡುವೆಯೇ ಬಸ್​ ಸಿಲುಕಿತು.

    ಹಿಂದೂಪುರದಿಂದ ವೆಂಕಟಾಪುರ ಮಾರ್ಗವಾಗಿ ಪಾವಗಡಕ್ಕೆ ಬಸ್​ ಬರುತ್ತಿತ್ತು. ಸೇತುವೆ ಮೇಲಿನ ನೀರಿನ ರಭಸಕ್ಕೆ ಬಸ್​ ಮುಂದೆ ಸಾಗದೆ ಅಲ್ಲಿಯೇ ನಿಂತಿತು. ಬಸ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ತುಂಬಿದ್ದರು. ವೆಂಕಟಾಪುರ ಗ್ರಾಮಸ್ಥರು ಹಗ್ಗದ ಸಹಾಯದಿಂದ ಬಸ್​ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.

    ಮತ್ತೊಂದು ಖಾಸಗಿ ಬಸ್ ಸಹಾಯದಿಂದ ಸೇತುವೆ ಮೇಲೆ ಸಿಲುಕಿದ್ದ ಬಸ್‌ ಅನ್ನು ಗ್ರಾಮಸ್ಥರು ಹೊರಕ್ಕೆ ತೆಗೆದಿದ್ದಾರೆ. ಚಾಲಕ ಬಸ್​ ಚಲಾಯಿಸಿಕೊಂಡು ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್​ ದುರಂತವೊಂದು ತಪ್ಪಿದೆ. ಹಿಂದೊಮ್ಮೆ ಪಾವಡಗದಲ್ಲಿ ಬಸ್​ ಪಲ್ಟಿಯಾಗಿ 6 ಮಂದಿ ಸ್ಥಳದಲ್ಲೇ ಮೃತಪಟ್ಟು, ಸಾಕಷ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದರು. (ದಿಗ್ವಿಜಯ ನ್ಯೂಸ್​)

    ರಷ್ಯಾ-ಯೂಕ್ರೇನ್​ ಬೆನ್ನಲ್ಲೇ ಚೀನಾ-ತೈವಾನ್​ ಯುದ್ಧ ಭೀತಿ: ತೈವಾನ್​ ಸುತ್ತ ಸೇನಾ ಚಟುವಟಿಕೆ ಆರಂಭಿಸಿದ ಚೀನಾ

    ಸ್ವಾತಂತ್ರ್ಯ ಸಂಭ್ರಮಕ್ಕೆ ಉಗ್ರರ ಕರಿನೆರಳು: ಇಂಟೆಲಿಜೆನ್ಸ್​ ಬ್ಯೂರೋದಿಂದ ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ

    ಅನೈತಿಕ ಸಂಬಂಧಕ್ಕೆ ಶಿಕ್ಷಕಿ ಬಲಿ: 6 ತಿಂಗಳ ಬಳಿಕ ಆರೋಪಿಗಳ ಹೆಡೆಮುರಿ ಕಟ್ಟಿದ ನಂಜನಗೂಡು ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts