More

    ಸಂಕ್ರಾಂತಿ ಹಬ್ಬ ಮುಗಿಸಿ ರೈಲನ್ನೇರಿದ ಜೂ. ಕಲಾವಿದೆ ದುರಂತ ಸಾವು: ಸವಿನಿದ್ದೆಯೇ ಸಾವಾಗಿ ಬಂತು!

    ಹೈದರಾಬಾದ್​: ತೆಲುಗು ಚಿತ್ರರಂಗದ ಕಿರಿಯ ಕಲಾವಿದೆ ಜ್ಯೋತಿ ರೆಡ್ಡಿ ಎಂಬಾಕೆ ಮಂಗಳವಾರ ರೈಲು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿದ್ದು, ಮೃತಳ ಪಾಲಕರು ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ತನಿಖೆಗೆ ಒತ್ತಾಯ ಮಾಡಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಜ್ಯೋತಿ ಆಂಧ್ರದ ಕಡಪ ಜಿಲ್ಲೆಯ ಚಿತ್ವಾನೆ ವಲಯದ ನಿವಾಸಿ. ಈಕೆ ಹೈದರಾಬಾದ್​ನ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದಳು. ಇದರೊಂದಿಗೆ ಸಿನಿಮಾ ರಂಗಕ್ಕೆ ಎಂಟ್ರಿಯಾಗಲು ಕಿರಿಯ ಕಲಾವಿದೆಯಾಗಿಯು ಕೆಲಸ ಮಾಡುತ್ತಿದ್ದಳು.

    ಸಂಕ್ರಾಂತಿ ಹಬ್ಬಕ್ಕೆಂದು ಊರಿಗೆ ತೆರಳಿದ್ದ ಜ್ಯೋತಿ, ಹಬ್ಬ ಮುಗಿಸಿಕೊಂಡು ಸೋಮವಾರ ಹೈದರಾಬಾದ್​ಗೆ ಮರಳುತ್ತಿದ್ದರು. ಚಿತ್ತೂರಿನ ರೈಲು ನಿಲ್ದಾಣದಲ್ಲಿ ವೆಂಕಟಾದ್ರಿ ಎಕ್ಸ್​ಪ್ರೆಸ್​ ರೈಲು ಹಿಡಿದು ಹೈದರಾಬಾದ್​ನ ಕಾಚಿಗುಡ ರೈಲು ನಿಲ್ದಾಣಕ್ಕೆ ಹೊರಟಿದ್ದಳು. ಇದರ ನಡುವೆ ಶಾದ್​ನಗರ ರೈಲು ನಿಲ್ದಾಣದಲ್ಲಿ ಮಂಗಳವಾರ ಬೆಳಗಿನ ಜಾವ 5.30ರ ಸುಮಾರಿಗೆ ರೈಲು ನಿಂತಿತ್ತು. ಇತ್ತ ನಿದ್ದೆಗೆ ಜಾರಿದ್ದ ಜ್ಯೋತಿ ದಿಢೀರ್​ ಎಚ್ಚರಗೊಂಡಿದ್ದಾಳೆ. ಶಾದ್​ನಗರ ನಿಲ್ದಾಣವನ್ನು ಕಾಚಿಗುಡ ನಿಲ್ದಾಣವೆಂದು ಭಾವಿಸಿದ ಆಕೆ ತರಾತುರಿಯಲ್ಲಿ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದಿದ್ದಾಳೆ. ತಲೆಗೆ ಬಲವಾದ ಏಟು ಬಿದ್ದು ಒದ್ದಾಡುತ್ತಿದ್ದ ಆಕೆಯನ್ನು ರೈಲ್ವೆ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಆದರೆ, ಜ್ಯೋತಿ ರೆಡ್ಡಿ ಸಾವಿನ ಬಗ್ಗೆ ಆಕೆಯ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ರೈಲ್ವೆ ಹಳಿಯ ಮೇಲೆ ನಿಗೂಢ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಸಾವಿನ ಬಗ್ಗೆ ತನಿಖೆ ಆಗಬೇಕೆಂದು ಪಾಲಕರು, ಸಂಬಂಧಿಕರು ಮತ್ತು ಫ್ರೆಂಡ್ಸ್​ ಒತ್ತಾಯ ಮಾಡಿದ್ದಾರೆ.

    ಸದ್ಯ ಜ್ಯೋತಿ ರೆಡ್ಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆಯ ಪಾಲಕರು, ಸಂಬಂಧಿಕರು ಮತ್ತು ಫ್ರೆಂಡ್ಸ್​ ಕೂಡ ಆಸ್ಪತ್ರೆಗೆ ದೌಡಾಯಿಸಿದ್ದು, ಸಾವಿನ ಬಗ್ಗೆ ತನಿಖೆ ನಡೆಸುವಂತೆ ಧರಣಿ ಕುಳಿತಿದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

    ಧನುಷ್​-ಐಶ್ವರ್ಯಾ ನಡುವೆ ನಡೆಯುತ್ತಿತ್ತು ಜಗಳ: ಡಿವೋರ್ಸ್​ಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ನೇಹಿತರು!

    ಬರೋಬ್ಬರಿ 10 ವರ್ಷ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸರ್ಕಾರಿ ಸಂಬಳ ಗಿಟ್ಟಿಸಿದ ಈತ ಸಿಕ್ಕಿಬಿದ್ದಿದ್ದೇ ರೋಚಕ!

    ಐಎನ್​ಎಸ್​ ರಣವೀರ್​ ನೌಕೆಯಲ್ಲಿ ಸ್ಫೋಟ: ಮೂವರು ನೌಕಾಪಡೆಯ ನಾವಿಕರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts