More

    ದಿಗ್ವಿಜಯ ನ್ಯೂಸ್​ಗೆ 3 ರಾಷ್ಟ್ರೀಯ ಪ್ರಶಸ್ತಿಗಳ ಗರಿ: ‘ಸತ್ಯ-ಮಿಥ್ಯ’ ಕರೊನಾದ ಸತ್ಯಾಂಶಗಳ ಸರಣಿ ವರದಿ

    ಬೆಂಗಳೂರು: ದಿಗ್ವಿಜಯ ನ್ಯೂಸ್​ನ ಸಾಮಾಜಿಕ ಕಳಕಳಿಯ ವರದಿಗೆ ಮತ್ತೊಮ್ಮೆ ಮನ್ನಣೆ ದೊರೆತಿದ್ದು, ಮೂರು ರಾಷ್ಟ್ರೀಯ ಪ್ರಶಸ್ತಿಗಳ ಗರಿ ದಿಗ್ವಿಜಯ ನ್ಯೂಸ್​ ಮುಡಿಗೇರಿದೆ.

    ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಎನ್ಬಾ-2021′ ಅವಾರ್ಡ್​ನ ಮೂರು ವಿಭಾಗಗಳಲ್ಲಿ ದಿಗ್ವಿಜಯ ನ್ಯೂಸ್​ಗೆ ಪ್ರಶಸ್ತಿ ದೊರಕಿದೆ.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳ ಪೈಕಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದವನ್ನು ಸತ್ಯ-ಮಿಥ್ಯ ಎಂಬ ಕಾರ್ಯಕ್ರಮದಡಿ ತೋರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಕರೊನಾ ಸಂದರ್ಭದಲ್ಲಿ ಈ ಕಾರ್ಯಕ್ರಮದಿಂದ ಬಹಳ ಜನರಿ ಉಪಯೋಗವಾಗಿತ್ತು. ಇದೀಗ ಈ ಕಾರ್ಯಕ್ರಮವನ್ನು ಮೆಚ್ಚಿ ಎನ್ಬಾ ಪ್ರಶಸ್ತಿ ದೊರಕಿದೆ.

    ಇದರ ಜತೆಗೆ ಹೃದಯವಂತರು ಎಂಬ ಕಾರ್ಯಕ್ರಮವನ್ನು ಸಹ ದಿಗ್ವಿಜಯ ನ್ಯೂಸ್​ ಪ್ರಸಾರ ಮಾಡುತ್ತಿತ್ತು. ಈ ಕಾರ್ಯಕ್ರಮದ ಮೂಲಕ ಮಹಾಮರಿ ಕರೊನಾ ಸಮಯದಲ್ಲಿ ಕಷ್ಟದಲ್ಲಿದ್ದವರಿಗಾಗಿ ಮಿಡಿದಂತಹ ಹೃದಯಗಳ ಬಗ್ಗೆ ವಿಸ್ತೃತವಾದ ಹಾಗೂ ವಿಶೇಷ ವರದಿಯನ್ನು ದಿಗ್ವಿಜಯ ನ್ಯೂಸ್​ ಪ್ರಸಾರ ಮಾಡಿತ್ತು.

    ಅಲ್ಲದೆ, ಆಂಬ್ಯುಲೆನ್ಸ್​ ಕೊರತೆಯ ಕುರಿತಾಗಿ ಸಾಮಾಜಿಕ ಕಳಕಳಿಯುಳ್ಳ ವರದಿಯನ್ನು ಸಹ ದಿಗ್ವಿಜಯ ನ್ಯೂಸ್​ ಪ್ರಸಾರ ಮಾಡಿತ್ತು. ಈ ಮೂರು ವರದಿಗಳಿಗೆ ಸಂಬಂಧಪಟ್ಟಂತೆ ಮೂರು ವಿಭಾಗಗಳಲ್ಲಿ ಎನ್ಬಾ ಪ್ರಶಸ್ತಿಯನ್ನು ನಿಮ್ಮ ನೆಚ್ಚಿನ ದಿಗ್ವಿಜಯ ನ್ಯೂಸ್​ ಮುಡಿಗೇರಿಸಿಕೊಂಡಿದೆ.

    ದಿಗ್ವಿಜಯ ನ್ಯೂಸ್​ಗೆ 3 ರಾಷ್ಟ್ರೀಯ ಪ್ರಶಸ್ತಿಗಳ ಗರಿ: ‘ಸತ್ಯ-ಮಿಥ್ಯ’ ಕರೊನಾದ ಸತ್ಯಾಂಶಗಳ ಸರಣಿ ವರದಿ

    PSI ನೇಮಕಾತಿ ಹಗರಣ: ಕಾಂಗ್ರೆಸ್​ ಜತೆಗಿನ ನಂಟಿನ ಬಗ್ಗೆ ಸಿಐಡಿ ಎದುರು ತಿಳಿಸಿದ ದಿವ್ಯಾ ಹಾಗರಗಿ

    ಬಿ.ಎಲ್​. ಸಂತೋಷ್​ ಹೇಳಿಕೆಯಿಂದ ಬಿಜೆಪಿ ಶಾಸಕರು ಹಾಗೂ ಸಚಿವರ ಎದೆಯಲ್ಲಿ ಶುರುವಾಯ್ತು ಭಯ!

    ಮೈಸೂರು-ಧಾರವಾಡ ರೈಲಿನಲ್ಲಿ ಮಧ್ಯರಾತ್ರಿ ಬೆಂಕಿ: ಜೀವ ಕೈಯಲ್ಲಿ ಹಿಡಿದುಕೊಂಡ ಪ್ರಯಾಣಿಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts