More

    ದಕ್ಷಿಣ ಚೀನಾದಲ್ಲಿ ವಿಮಾನ ಪತನ: 132 ಪ್ರಯಾಣಿಕರ ದುರಂತ ಸಾವು, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಬೀಜಿಂಗ್​: 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡಿದ್ದು, ಎಲ್ಲ ಪ್ರಯಾಣಿಕರು ದುರಂತ ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.

    ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ ಜೆಟ್​ 737-800 ವಿಮಾನವು ಗುವಾಂಗ್ಸಿ ಪ್ರದೇಶದಲ್ಲಿ ಸೋಮವಾರ ಪತನಗೊಂಡಿದೆ. ಸರಿಯಾಗಿಯೇ ಹಾರಾಟ ನಡೆಸುತ್ತಿದ್ದ ವಿಮಾನ ಗುವಾಂಗ್ಸಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೆಳಮುಖವಾಗಿ ಕುಸಿಯಿತು. ಗಂಟೆಗೆ 350 ಮೈಲಿ ವೇಗದಲ್ಲಿ ಕೇವಲ ಎರಡೇ ನಿಮಿಷದಲ್ಲಿ 30 ಸಾವಿರ ಅಡಿಗಳಷ್ಟು ಕುಸಿದು ಬೆಟ್ಟದ ಪ್ರದೇಶಕ್ಕೆ ಬಿದ್ದಿತ್ತು.

    ವಿಮಾನವು ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ತೆರಳುತ್ತಿತ್ತು. ಮಧ್ಯಾಹ್ನ 1.11ಕ್ಕೆ ಟೇಕಾಫ್​ ಆದ ವಿಮಾನ ಮಧ್ಯಾಹ್ನ 3.05ರ ಸುಮಾರಿಗೆ ಮಾರ್ಗಮಧ್ಯೆ ಗುವಾಂಗ್ಸಿ ಪ್ರದೇಶದಲ್ಲಿ ಪತನಗೊಂಡು ಪರ್ವತದಲ್ಲಿ ಬಿದ್ದು ಧಗಧಗಿಸಿದೆ. ವಿಮಾನ ಬಿದ್ದ ತಕ್ಷಣ ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿತು. ಆರಂಭದಲ್ಲಿ ಪ್ರಯಾಣಿಕರ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಚೀನಾದ ಸ್ಥಳೀಯ ಮಾದ್ಯಮಗಳು ಮಾಹಿತಿ ಖಚಿತಪಡಿಸಿದ್ದು, ವಿಮಾನದಲ್ಲಿದ್ದ 132 ಮಂದಿಯೂ ದಾರುಣವಾಗಿ ಮೃತಪಟ್ಟಿದ್ದಾರೆ.

    ಫೈಟರಾಡರ್​ 24 ಹೇಳಿರುವ ವಿಮಾನವು ಆರು ವರ್ಷ ಹಳೆಯದಾಗಿದೆ. ಚೀನಾದ ಬೆಟ್ಟದ ಅರಣ್ಯ ಪ್ರದೇಶಕ್ಕೆ ಅಪ್ಪಳಿಸಿದ ವಿಮಾನವು ದೊಡ್ಡ ಬೆಂಕಿಯ ಚೆಂಡನ್ನು ಸ್ಫೋಟಿಸಿದೆ ಮತ್ತು ಗುವಾಂಗ್ಸಿಯ ದಕ್ಷಿಣ ಪ್ರಾಂತ್ಯದ ಟೆಂಗ್​ ಕೌಂಟಿಯಲ್ಲಿರುವ ವುಝೌ ನಗರದ ಬಳಿ ಬಾಹ್ಯಾಕಾಶದಿಂದ ತೆಗೆದ ನಾಸಾ ಉಪಗ್ರಹ ಚಿತ್ರಗಳಲ್ಲಿ ಕಾಡಿನಲ್ಲಿ ದಟ್ಟ ಬೆಂಕಿ ಗೋಚರಿಸುತ್ತದೆ. ವಿಮಾನವು ಸಂಪೂರ್ಣ ಸುಟ್ಟು ಕರಕಲಾಗಿದ್ದು, ವಿಮಾನದಲ್ಲಿದ್ದ 123 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯ ಸಾವು-ನೋವುಗಳನ್ನು ರಕ್ಷಣಾ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಮೃತರೆಲ್ಲರು ಚೈನೀಸ್ ಎಂದು ತಿಳಿದುಬಂದಿದೆ.

    ಪತನಕ್ಕೂ ಮುಂಚೆ ವಿಮಾನವೂ ಲಂಬವಾಗಿ ನೆಲದ ಕಡೆಗೆ ಧುಮುಕ್ಕುತ್ತಿರುವುದನ್ನು ತೋರಿಸುವ ಭಯಾನಕ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)

    ನೀನು ದಪ್ಪಗಿದ್ದೀಯ ಮಗಳೇ..; ಕಠುವಾದ ಮಾತು ಮಕ್ಕಳಿಗೆ ನೋವು ತರದಿರಲಿ..

    ಬಂಜೆ ಎಂಬ ಶಬ್ದ ಬೇಡ; ಹೆಣ್ಣನ್ನು ಹೀಯಾಳಿಸದಿರಿ…

    ದೆಹಲಿಯಿಂದ ಹೊರಟ ವಿಮಾನ ಪಾಕಿಸ್ತಾನದಲ್ಲಿ ಇಳಿಯಿತು; ನೂರಕ್ಕೂ ಅಧಿಕ ಪ್ರಯಾಣಿಕರಿದ್ದ ಕತಾರ್ ಏರ್​ವೇಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts