More

    ಅಯ್ಯೋ ದುರ್ವಿಧಿಯೇ! ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಕಣ್ಣೀರಿಡುತ್ತಲೇ ಬದುಕಿಗೆ ವಿದಾಯ ಹೇಳಿದ ಶಿಕ್ಷಕ ದಂಪತಿ

    ವಿಜಯವಾಡ: ಶಾಲೆ ನಡೆಸುತ್ತಿದ್ದ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ ಪ್ರೀತಿ ಪಾತ್ರದವರಿಗೆ ಗುಡ್​ಬೈ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್​ ಮಾಡಿ ಒಳಗಡೆ ಕುಳಿತು ಕಣ್ಣೀರಿಡುತ್ತಾ ತಮ್ಮ ಪ್ರೀತಿ ಪಾತ್ರದವರಿಗೆ ಕೊನೆಯ ಸಾಲುಗಳನ್ನು ಹೇಳುತ್ತಿರುವ ದೃಶ್ಯವಿದೆ. ಆರ್ಥಿಕ ಸಂಕಷ್ಟದಿಂದ ದಂಪತಿ ಈ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಘಟನೆ ಶನಿವಾರ ರಾತ್ರಿ ಅಟ್ಮಕರ್​ ಮಂಡಲದ ಕರಿವೇನಾ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಕಾರ್ನತಿ ಸುಬ್ರಮಣ್ಯಂ (33) ಮತ್ತು ಆತನ ಪತ್ನಿ ರೋಹಿಣಿ (27) ಎಂದು ಗುರುತಿಸಲಾಗಿದೆ. ದಂಪತಿ ಬಹಳ ಉತ್ಸಾಹದಿಂದಲೇ ಜೀವನ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕೋಯ್ಲಕುಂಟ್ಲದಲ್ಲಿ ಖಾಸಗಿ ಇಂಗ್ಲಿಷ್​ ಮಾಧ್ಯಮ ಶಾಲೆಯನ್ನು ತೆರೆದಿದ್ದರು. ಆದರೆ, ಕರೊನಾ ಕಾರಣದಿಂದಾಗಿ ಮಕ್ಕಳ ಪಾಲಕರು ಶಾಲಾ ಶುಲ್ಕವನ್ನು ಕಟ್ಟಲು ಆಗಲಿಲ್ಲ. ಇತ್ತ ಶಾಲೆ ಆರಂಭಿಸಲು ಮಾಡಿದ್ದ ಸಾಲದ ಬಡ್ಡಿ ಮತ್ತು ಇಎಂಐ ಕಟ್ಟುವುದೇ ದಂಪತಿಗೆ ಚಿಂತೆಯಾಗಿತ್ತು. ಪೊಲೀಸ್​ ಮೂಲಗಳ ಪ್ರಕಾರ ದಂಪತಿ ಶಾಲೆಯ ಮೂಲಸೌಕರ್ಯ ಹೆಚ್ಚಿಸಲು ಸುಮಾರು 1.5 ರಿಂದ 2 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಇನ್ಸ್​ಪೆಕ್ಟರ್​ ನಾರಾಯಣ ರೆಡ್ಡಿ ದಂಪತಿ ಎಂಟು ವರ್ಷಗಳ ಹಿಂದೆ ಮದುವೆ ಆಗಿದ್ದರು. ಶಾಲೆಯನ್ನು ಸ್ಥಾಪಿಸಿ ಅದನ್ನು ನಿರ್ವಹಣೆ ಮಾಡಲು ಸುಮಾರು 1.5 ರಿಂದ 2 ಕೋಟಿ ರೂ. ಸಾಲ ಮಾಡಿದ್ದರು. ಆದರೆ, ಕರೊನಾದಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಸಾಲದ ಬಡ್ಡಿ ಹೆಚ್ಚಾಗಿ ಕೊನೆಗೆ ಸಾಲ ತೀರಿಸಲಾಗದೇ ದಂಪತಿ ಹೆದರಿದ್ದಾರೆ. ಆಗಸ್ಟ್​ 16 ರಂದು ರೋಹಿಣಿ ತನ್ನ ಪತಿಯ ಜತೆಗೆ ತವರಿಗೆ ಹೋಗಿ ಅವರೊಂದಿಗೆ ಸ್ವಲ್ಪ ಸಮಯ ಕಳೆದು ಇಬ್ಬರು ಸಂಜೆ ಮನೆಗೆ ಮರಳಿದ್ದಾರೆ.

    ದಂಪತಿ ಮಾರ್ಗ ಮಧ್ಯೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಕೊನೆಯ ಸಂದೇಶದ ವಿಡಿಯೋ ರೆಕಾರ್ಡ್​ ಮಾಡಿ ದಂಪತಿ ಕಣ್ಣೀರಿಡುತ್ತಲೇ ಬದುಕಿಗೆ ವಿದಾಯ ಹೇಳಿದ್ದಾರೆ. ವಿಡಿಯೋ ನೋಡಿದ ಕುಟುಂಬಸ್ಥರು ಅವರನ್ನು ಹುಡುಕಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದಾದರೂ ಇಬ್ಬರು ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ನಿತ್ಯಾನಂದ ದಿಢೀರ್‌ ಪ್ರತ್ಯಕ್ಷ- ಶಾಕಿಂಗ್‌ ಹೇಳಿಕೆ ಕೊಟ್ಟು ಮಠಾಧಿಪತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ‘ಕೈಲಾಸವಾಸಿ’

    ಒಲಿಂಪಿಯನ್‌ಗಳಿಗೆ ಪ್ರೋತ್ಸಾಹ, ಪ್ರಧಾನಿ ಮೋದಿಗೆ ಕಪಿಲ್ ದೇವ್ ಶ್ಲಾಘನೆ

    ಅಭಿವೃದ್ಧಿ ಗುರಿ, ಜನಪ್ರೀತಿಯ ಗರಿ: ಜನರ ಭಾವನೆ ಅರಿಯುವ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts