More

    ನಟ ಯಶ್​ ಹುಟ್ಟುಹಬ್ಬಕ್ಕೆ ರಜೆ ಕೋರಿ ಪ್ರಾಂಶುಪಾಲರಿಗೆ ಪತ್ರ ಬರೆದ ಅಭಿಮಾನಿ..!

    ಬಳ್ಳಾರಿ: ಜನವರಿ 8ನೇ ತಾರೀಖು ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳ ಪಾಲಿಗೆ ಹಬ್ಬದ ದಿನ. ಏಕೆಂದರೆ ಅಂದು ತಮ್ಮ ನೆಚ್ಚಿನ ನಟ ಹುಟ್ಟುಹಬ್ಬ. ಆದರೆ, ಈ ಬಾರಿ ಕೋವಿಡ್ ಮಾರ್ಗಸೂಚಿ ಇರುವುದರಿಂದ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಣೆ ಸಾಧ್ಯವಿಲ್ಲ. ಹೀಗಾಗಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಜನವರಿ 8ರಂದು ಟ್ವಿಟರ್​ನಲ್ಲಿ ರಾಕಿಂಗ್​ ಬರ್ತಡೇಯನ್ನು ಟ್ರೆಂಡ್​ ಮಾಡಲು ಮುಂದಾಗಿದ್ದಾರೆ.

    ಇದೀಗ ಟ್ವಿಟರ್​ ಟ್ರೆಂಡ್​ನಲ್ಲಿ ಪಾಲ್ಗೊಳ್ಳಲು ಅಭಿಮಾನಿಯೊಬ್ಬ ರಜೆ ಕೋರಿ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಅಭಿಮಾನಿ ಕೆ. ಶಿವಕುಮಾರ್​, ಮೂರನೇ ಸೆಮಿಸ್ಟರ್​ ಬಿಕಾಂ ವಿದ್ಯಾರ್ಥಿ. ನಾಳಿದ್ದು ಯಶ್ ಹುಟ್ಟುಹಬ್ಬ ಹಿನ್ನಲೆಯಲ್ಲಿ ಒಂದು ದಿನ ರಜೆ ಕೋರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ.

    ಯಶ್ ಬಾಸ್ ಬರ್ತಡೇ ಹಿನ್ನಲೆ ನಾಳೆ ಅಭಿಮಾನಿಗಳು 24 ಗಂಟೆ ಟ್ವಿಟರ್ ಟ್ರೆಂಡ್ ನಲ್ಲಿ ಭಾಗವಹಿಸುತ್ತಿದ್ದಾರೆ.‌ ನಾನು ಅದರಲ್ಲಿ ಭಾಗವಹಿಸುತ್ತೇನೆ. ಹೀಗಾಗಿ ನನಗೆ ಒಂದು ದಿನ ರಜೆ ಕೊಡಿ ಎಂದು ಶಿವಕುಮಾರ್​ ಪತ್ರ ಬರೆದಿದ್ದಾನೆ. ಅಲ್ಲದೆ, ಇತರ ನನ್ನ ಸ್ನೇಹಿತರಿಗೂ ರಜೆ ಕೊಡಿ ಎಂದು ಪತ್ರ ಬರೆದಿದ್ದಾನೆ.

    ನಟ ಯಶ್​ ಹುಟ್ಟುಹಬ್ಬಕ್ಕೆ ರಜೆ ಕೋರಿ ಪ್ರಾಂಶುಪಾಲರಿಗೆ ಪತ್ರ ಬರೆದ ಅಭಿಮಾನಿ..!

    ಕೊನೆಯಲ್ಲಿ ಅಭಿಮಾನಿಗಳ ಶುಭಾಶಯಗಳನ್ನು ನೀವು ನೋಡಿ, ನಮ್ಮ ಬಾಸ್​ಗೆ ಶುಭಕೋರಿ ಎಂದು ಪತ್ರ ಬರೆದಿದ್ದಾನೆ. (ದಿಗ್ವಿಜಯ ನ್ಯೂಸ್​)

    ಬಿಗ್​ಬಾಸ್​​​ 9ನೇ ಆವೃತ್ತಿ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ: ಶುರು ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ….

    ಕಟ್ಟಡದ ಮೇಲೆ ಹೆಲಿಕಾಪ್ಟರ್​ ಹಾರಿಹೊಗಿದ್ದಕ್ಕೆ ಮಾಲೀಕನಿಗೆ 25 ಸಾವಿರ ರೂಪಾಯಿ ನಷ್ಟ..!

    ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸುಗುಸು ಸ್ಫೋಟ! ಕೆಟ್ಟ ನನ್ಮಗ, ಇವನಿಂದ ಜಿಲ್ಲೇಲಿ ಒಂದು ಸೀಟ್ ಬರೋಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts