More

    ಸಂಜನಾ, ಸೋಮರಾಯ ಗೌಡ ರಾಜ್ಯಮಟ್ಟಕ್ಕೆ

    ಚಿಕ್ಕಮಗಳೂರು: ವಿಜ್ಞಾನವನ್ನು ಜನಪ್ರಿಯಗೊಳಿಸಲು ಪರಿಣಾಮಕಾರಿ ಸಾಧನವನ್ನಾಗಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಸಂಘಟಿಸಲಾಗುತ್ತಿದೆ ಎಂದು ವಿಜ್ಞಾನ ಪರಿಷತ್ ಸದಸ್ಯ ಎ.ಎನ್.ಮಹೇಶ್ ಹೇಳಿದರು.

    ನಗರದಲ್ಲಿ ಗುರುವಾರ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸೊಸೈಟಿ, ಶಿಕ್ಷಣ ಇಲಾಖೆಯಿಂದ ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಿ.ವಿ.ರಾಮನ್ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಾತನಾಡಿದರು.

    ಮಕ್ಕಳು ಇತ್ತೀಚೆಗೆ ನಾಲ್ಕು ಗೋಡೆಗಳ ನಡುವೆ ಪಠ್ಯಪುಸ್ತಕದಲ್ಲಿ ಕಳೆದು ಹೋಗುತ್ತಿದ್ದಾರೆ. ಅವರ ಸಾಮಾನ್ಯ ಜ್ಞಾನ ಹಾಗೂ ಪ್ರತಿಭೆ ಹೊರತರಲು ರಾಜ್ಯಾದ್ಯಂತ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಯಾವ ವಿಷಯದ ಬಗ್ಗೆ ಹೆಚ್ಚು ಅಧ್ಯಯನ ಮಾಡುತ್ತಾರೋ ಆ ವಿಷಯದ ಬಗ್ಗೆ ಕುತೂಹಲ, ಅದರ ಹಿಂದಿರುವ ಕಾರಣಗಳ ಬಗ್ಗೆ ಹೆಚ್ಚು ವಿಮರ್ಶೆ, ಚರ್ಚೆ ಮಾಡಿದರೆ ಉತ್ತರ ಹುಡುಕಬಹುದು ಎಂದರು.

    ಡಿಡಿಪಿಐ ಬಿ.ವಿ.ಮಲ್ಲೇಶಪ್ಪ ಮಾತನಾಡಿ, ಸಂಶೋಧನೆ ಮಾಡಬೇಕಾದರೆ ಆ ವಿಷಯದ ಬಗ್ಗೆ ಕುತೂಹಲ ಇರಬೇಕು. ಪ್ರಕೃತಿಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರಬೇಕು. ಜಗತ್ತಿನಲ್ಲಿ ಪೆಟ್ರೋಲ್ ಉತ್ಪಾದನೆ ಕಡಿಮೆಯಾಗುತ್ತಿರುವ ಕಾರಣ ಸೌರಶಕ್ತಿ ಚಾಲಿತ ವಾಹನಗಳು ಬಂದಿವೆ ಎಂದು ಹೇಳಿದರು.

    ರಾಜ್ಯ ಮಟ್ಟಕ್ಕೆ ಆಯ್ಕೆ: ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪೂರ್ಣಪ್ರಜ್ಞ ಶಾಲೆಯ ಸಂಜನಾ, ಸಂಗಮೇಶ್ವರಪೇಟೆ ಶಾಲೆಯ ಸೋಮರಾಯ

    ಗೌಡ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಟಿಎಂಎಸ್ ಶಾಲೆಯ ರಕ್ಷಿತ್, ಹರ್ಷವರ್ಧನ್ ದ್ವೀತಿಯ ಸ್ಥಾನ ಗಳಿಸಿದರು. ವಾಸವಿ ಶಾಲೆ ತೃತೀಯ ಸ್ಥಾನ ಗಳಿಸಿತು.

    ರಾಜ್ಯ ಸಮಿತಿ ಸದಸ್ಯ ಟಿ.ಜಿ.ಕೃಷ್ಣಮೂರ್ತಿರಾಜ್ ಅರಸ್, ಬಿಇಒ ಎಸ್.ಆರ್.ಮಂಜುನಾಥ್, ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಎಚ್.ಎಂ.ನೀಲಕಂಠಪ್ಪ, ಟಿಎಂಎಸ್ ಶಾಲೆ ಪ್ರಾಚಾರ್ಯ ಇಂದ್ರೇಶ್, ಜಿಲ್ಲಾ ಕಾರ್ಯದರ್ಶಿ ಟಿ.ತ್ಯಾಗರಾಜ್, ಮುಖ್ಯಶಿಕ್ಷಕ ಎಂ.ಎಸ್.ನಟರಾಜ್, ಉಪಾಧ್ಯಕ್ಷರಾದ ಓಂಕಾರಪ್ಪ, ಸತ್ಯನಾರಾಯಣ, ವಿಜಯ್ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts