More

    ಗುಡ್ಡಗಾಡು ಓಟದಲ್ಲಿ ಪುತ್ತೂರು, ಹಾಸನ ತಂಡ ಪ್ರಥಮ

    ಧಾರವಾಡ: ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯವು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಂತರ ಕಾನೂನು ಮಹಾವಿದ್ಯಾಲಯಗಳ 10 ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆಯನ್ನು ಬುಧವಾರ ಆಯೋಜಿಸಿತ್ತು.
    ಬಾಲಕರ ವಿಭಾಗದಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪ್ರಥಮ, ಚಿಕ್ಕೋಡಿಯ ಕೆ.ಎಲ್.ಇ. ಕಾನೂನು ಕಾನೂನು ಮಹಾವಿದ್ಯಾಲಯ ದ್ವಿತೀಯ, ಚಿತ್ರದುರ್ಗದ ಸರಸ್ವತಿ ಕಾನೂನು ಮಹಾವಿದ್ಯಾಲಯವು ತೃತೀಯ ಸ್ಥಾನ ಪಡೆಯಿತು.
    ಬಾಲಕಿಯರ ವಿಭಾಗದಲ್ಲಿ ಹಾಸನದ ಸರ್ಕಾರಿ ಕಾನೂನು ಮಹಾವಿದ್ಯಾಲಯ ಪ್ರಥಮ, ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯ ದ್ವಿತೀಯ, ಬೆಂಗಳೂರಿನ ರಾಮಯ್ಯ ಕಾನೂನು ಮಹಾವಿದ್ಯಾಲಯ ತೃತೀಯ ಸ್ಥಾನ ಪಡೆಯಿತು.
    ವಿಜೇತ ತಂಡಗಳಿಗೆ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಬಸವರಾಜ ತಾಳಿಕೋಟಿ ಬಹುಮಾನ ವಿತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ವಿ.ಬಿ. ಯಳಲಿ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ. ಮಟ್ಟಿ, ಕಾನೂನು ವಿವಿ ಕ್ರೀಡಾ ನಿರ್ದೇಶಕ ಡಾ. ಖಾಲೀದ ಖಾನ, ಪ್ರಾಚಾರ್ಯ ಡಾ. ಎಸ್.ವಿ. ಸೋಗಿ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಬಿ. ಸಂತೋಜಿ, ಡಾ. ಎಸ್.ಟಿ. ನಿರ್ವಾಣಿ, ಡಾ. ಎಸ್.ಎಸ್. ಗಾಳಿಮಠ, ಡಾ. ಎಸ್.ಎಲ್. ಪಾಟೀಲ, ಡಿ.ಬಿ. ಬಿರಾದಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts