More

    ರಾಷ್ಟ್ರಿಯ ವಿಶ್ರಾಂತಿ ಸಮಯ ಅಗತ್ಯ, ಕರೊನಾ ಮಣಿಸಿದ ಪುತ್ತಿಗೆ ಶ್ರಿ ಸಲಹೆ

    ಉಡುಪಿ: ಮನುಷ್ಯನ ಪ್ರತಿರೊಧ ಶಕ್ತಿ ವೃದ್ಧಿಗಾಗಿ ಕೇಂದ್ರ ಸರ್ಕಾರ ರಾತ್ರಿ 8ರಿಂದ ಬೆಳಗ್ಗೆ 4 ಗಂಟೆವರೆಗೆ ರಾಷ್ಟ್ರಿಯ ವಿಶ್ರಾಂತಿ ಸಮಯ ಎಂದು ಘೊಷಿಸಲು ಪುತ್ತಿಗೆ ಶ್ರಿ ಸುಗುಣೇಂದ್ರ ತಿರ್ಥ ಸ್ವಾಮಿಜಿ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

    ಕರೊನಾ ಸೊಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮ ಪ್ರಕಟಣೆ ನೀಡಿದ ಅವರು, ಕರೊನಾ ವೈರಸ್ನಂತಹ ಮಹಾ ಸಮಸ್ಯೆ ಬಗ್ಗೆ ಚಿಂತಿಸುವಾಗ ಸನಾತನ ಧರ್ಮಶಾಸ್ತ್ರಗಳ ಸೂಚನೆಯಂತೆ ಇದಕ್ಕೆ ಪ್ರಮುಖ ಪರಿಹಾರವನ್ನಾಗಿ ಅನುಭವದಿಂದ ಕಂಡುಕೊಂಡು ದಿಗ್ಬ್ರಾಂತನಾಗಿದ್ದೆನೆ. ನನಗೆ ಕರೊನಾ ವೈರಸ್ ಬಾಧಿಸಲು ಶುರುವಾಗಿದ್ದು, ಕೆಮ್ಮು ಮೂಲಕ.

    ಬೆಳಗ್ಗೆ 4ಕ್ಕೆ ಸರಿಯಾಗಿ ಕೆಮ್ಮು ಪ್ರಾರಂಭವಾಗುತ್ತದೆ. ಈ ನಿಗದಿತ ಸಮಯದಲ್ಲೆ ಕೆಮ್ಮು ಆರಂಭವಾಗುವ ಬಗ್ಗೆ ತಜ್ಞರಲ್ಲಿ ವಿಚಾರಿಸಿದಾಗ, ವಿಳಂಬವಾಗಿ ನಿದ್ರೆ ಮಾಡಿದಾಗ ಹೀಗೆ ಆಗುತ್ತದೆ ಎಂದು ತಿಳಿಸಿದರು. ಅಂದಿನಿಂದ ಪ್ರಯತ್ನಪಟ್ಟು ರಾತ್ರಿ 9 ಗಂಟೆಯೊಳಗೆ ಮಲಗಲು ಆರಂಭಿಸಿದಾಗ, ಕೆಮ್ಮು ಕ್ರಮೆಣ ಇಳಿಮುಖವಾಯಿತು. ಈ ಬಗ್ಗೆ ಅಧ್ಯಯನ ನಡೆಸಿ ಮನುಷ್ಯನ ಪ್ರತಿರೊಧ ಶಕ್ತಿಗೂ, ನಿದ್ರಾ ಸಮಯಕ್ಕೂ ನೇರ ಸಂಬಂಧ ಇರುವುದು ತಿಳಿದುಬಂತು. ಪ್ರತಿನಿತ್ಯದ ಸಾರ್ವಜನಿಕ ಕಾರ್ಯಕ್ರಮ ಹಾಗೂ ನಿರಂತರ ಪ್ರಪಂಚ ಪರ್ಯಟನದಿಂದ ರಾತ್ರಿ 11, 12 ಗಂಟೆಯೊಳಗೆ ನಿದ್ರಿಸಲು ಸಾಧ್ಯವಾಗುತ್ತಿರಲಿಲ್ಲ.

    ನಿದ್ರೆ ಸಮಯ ಹಾಗೂ ಆಹಾರದ ಬಗ್ಗೆ ಅನಿವಾರ್ಯವಾಗಿ ಉಪೇಕ್ಷೆ ಹೊಂದಿದ್ದೆ. ಕರೊನಾ ಬಾಧೆ ಆರಂಭವಾದಾಗ ಮಣಿಪಾಲ ಆಸ್ಪತ್ರೆಗೆ ಸೇರಿ, ಬೇಗ ನಿದ್ರೆ, ಬೇಗ ಉತ್ಥಾನದ ಬಗ್ಗೆ ಅಭ್ಯಾಸ ಮಾಡಲು ತೆರಳಿದ್ದು, ಈ ಸಮಯದಲ್ಲಿ ರಾತ್ರಿ 8ರಿಂದ ಬೆಳಗ್ಗೆ 4ರವರೆಗೆ ಮಾಡುವ ನಿದ್ರೆಯಿಂದ ದೇಹದಲ್ಲಿ ಪ್ರತಿರೊಧ ಶಕ್ತಿ ಜಾಗೃತವಾಗಿರುವುದನ್ನು ಅನುಭವಿಸಿದ್ದೆನೆ ಎಂದು ಶ್ರಿಗಳು ಹೇಳಿಕೊಂಡಿದ್ದಾರೆ.

    ಪ್ರಸಕ್ತ 59ನೇ ವಯಸ್ಸಿನಲ್ಲಿ ನಿರಂತರ 47 ವರ್ಷ ಶುದ್ಧ ಸಾತ್ವಿಕ ಆಹಾರ ಸೇವಿಸಿಕೊಂಡು ಬಂದರೂ, ಆಹಾರ ಮತ್ತು ನಿದ್ರೆ ಸಮಯಕ್ಕೆ ಮಹತ್ವ ನೀಡಿರಲಿಲ್ಲ. ಸಾತ್ವಿಕ ಜೀವನದಲ್ಲಿಯೂ ಈ ನಿದ್ರಾಹಾರಗಳ ಸಮಯ ವ್ಯತ್ಯಾಸದಿಂದ ಪ್ರತಿರೊಧ ಶಕ್ತಿ ಕುಂಠಿತವಾಗಿ ಕರೊನಾದಂತಹ ಆರೊಗ್ಯ ಸಮಸ್ಯೆಗೆ ತುತ್ತಾಗಿರುವುದು ಮನಗಂಡಿದ್ದೆನೆ. ಕರೊನಾಗೆ ಲಸಿಕೆ ಕಂಡುಹಿಡಿದರೂ ದೇಹದಲ್ಲಿ ಪ್ರತಿರೊಧ ಶಕ್ತಿ ಬಲಗೊಳಿಸುವ ಕ್ರಮ ಅನುಸರಿಸದಿದ್ದರೆ, ಕರೊನಾ ನಿಮೂಲನೆ ಕಷ್ಟಸಾಧ ಎಂದವರು ಅಭಿಪ್ರಾಯಪಟ್ಟಿದ್ದಾರೆ.

    ಸರ್ಕಾರ ಯೊಗ, ಪ್ರಾಣಾಯಾಮ, ಆಯುರ್ವೆದಕ್ಕೆ ವಿಶೇಷ ಮಹತ್ವ ಕೊಡಬೇಕಿದೆ. ರಾತ್ರಿ 8ರಿಂದ ಬೆಳಗ್ಗೆ 4 ರ ತನಕ ರಾಷ್ಟ್ರಿಯ ವಿಶ್ರಾಂತಿ ಘೊಷಿಸಿ ಈ ಸಮಯದಲ್ಲಿ ಟಿವಿ ಪ್ರಸಾರ, ಮನೊರಂಜನಾ ಕಾರ್ಯಕ್ರಮ, ರಾತ್ರಿ ಪ್ರಯಾಣ ನಿರ್ಬಂಧಿಸಬೇಕು.ದೇಶದ ಜನರ ಉತ್ತಮ ಆರೊಗ್ಯಕ್ಕಾಗಿ ಸಕಾಲ ನಿದ್ರಾ, ಸಕಾಲ ಆಹಾರ ಪದ್ಧತಿಯನ್ನು ಪಾಲಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.

    – ಶ್ರಿ ಸುಗುಣೇಂದ್ರ ತಿರ್ಥ ಸ್ವಾಮಿಜಿ, ಪುತ್ತಿಗೆ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts