

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನ ವತಿಯಿಂದ ನೀಡುವ ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನಕ್ಕೆ ಶಶಿ ತರೀಕೆರೆ ಅವರ ‘ತಿರಾಮಿಸು’ ಕಥಾಸಂಕಲನ ಆಯ್ಕೆಯಾಗಿದೆ.
ಈ ಬಹುಮಾನವು ಮೂರು ಸಾವಿರ ನಗದು ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ. ಡಿ. 27ರಂದು ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಪಿ.ವಿ. ನಾರಾಯಣ ಬಹುಮಾನ ವಿತರಣೆ ಮಾಡಲಿದ್ದಾರೆ. ಆಯ್ಕೆ ಸಮಿತಿಯಲ್ಲಿದ್ದ ಡಾ. ಪ್ರೇಮ ಸಿದ್ಧರಾಜು ಮತ್ತು ಡಾ. ರುದ್ರೇಶ್ ಅದರಂಗಿ ಈ ಆಯ್ಕೆ ಮಾಡಿದ್ದಾರೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾಂತರಾಜು ತಿಳಿಸಿದ್ದಾರೆ.