More

    ಶಶಾಂಕ್​, ಆಶುತೋಷ್​ ಗೆಲುವಿನಾಟ ಪ್ರಶಂಸಿಸಿದ ಪಂಜಾಬ್​ ಕಿಂಗ್ಸ್ ನಾಯಕ ಶಿಖರ್​ ಧವನ್​

    ಅಹಮದಾಬಾದ್​: ಬೃಹತ್​ ಮೊತ್ತದ ಚೇಸಿಂಗ್​ ವೇಳೆ ಆರಂಭಿಕ 4 ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಪಂಜಾಬ್​ ಕಿಂಗ್ಸ್​ ತಂಡಕ್ಕೆ ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ತಂದುಕೊಟ್ಟ ದೇಶೀಯ ಬ್ಯಾಟರ್​ಗಳಾದ ಶಶಾಂಕ್​ ಸಿಂಗ್​ ಮತ್ತು ಆಶುತೋಷ್​ ಶರ್ಮ ಅವರನ್ನು ನಾಯಕ ಶಿಖರ್​ ಧವನ್​ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

    “ಉತ್ತಮ ಆರಂಭ ಒದಗಿಸುವ ಯೋಜನೆ ಇತ್ತು. ಆದರೆ ನಾನು ಬೇಗನೆ ಔಟಾದೆ. ಇನ್ನೂ ಕೆಲ ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡೆವು. ಆದರೆ ಶಶಾಂಕ್​ ಅಮೋ ಆಟವಾಡಿದರು. ದೊಡ್ಡ ಮೊತ್ತದ ಚೇಸಿಂಗ್​ಗೆ ಬೇಕಾದಂತೆ ಶಶಾಂಕ್​ ರನ್​ಗತಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಕೊನೆಯವರೆಗೆ ತಾಳ್ಮೆ ಕಾಯ್ದುಕೊಂಡು ಪಂದ್ಯ ಗೆದ್ದುಕೊಟ್ಟರು. ಜತೆಗೆ ಆಶುತೋಷ್​ ಕೂಡ ಒತ್ತಡದ ಪರಿಸ್ಥಿತಿಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದರು’ ಎಂದು ಧವನ್​ 3 ವಿಕೆಟ್​ ಗೆಲುವಿನ ಬಳಿಕ ಹೇಳಿದ್ದಾರೆ.

    ಗುಜರಾತ್​ ತಂಡದ 199 ರನ್​ಗಳಿಗೆ ಪ್ರತಿಯಾಗಿ ಪಂಜಾಬ್​, 70 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿತು. ಆಗ ಕಣಕ್ಕಿಳಿದ ಶಶಾಂಕ್​ ಸಿಂಗ್​ (61*ರನ್​, 29 ಎಸೆತ, 6 ಬೌಂಡರಿ, 4 ಸಿಕ್ಸರ್​), ಸಿಕಂದರ್​ ಸಿಂಗ್​ (15), ಜಿತೇಶ್​ ಶರ್ಮ (16) ಜತೆಗೂಡಿ ಚೇತರಿಕೆ ಒದಗಿಸಿದರು. ನಂತರ ಆಶುತೋಷ್​ (31) ಜತೆಗೂಡಿ 22 ಎಸೆತಗಳಲ್ಲೇ 43 ರನ್​ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಕೊನೇ ಓವರ್​ನಲ್ಲಿ 7 ರನ್​ ಬೇಕಿದ್ದಾಗ ಆಶುತೋಷ್​ ಮೊದಲ ಎಸೆತದಲ್ಲೇ ಔಟಾದರೂ, ಶಶಾಂಕ್​ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

    *ನಾನು ಬ್ಯಾಟಿಂಗ್​ಗೆ ಇಳಿಯುವಾಗ ನಾನೇ ಶ್ರೇಷ್ಠ ಎಂದು ಯೋಚಿಸುವೆ. ಬೌಲರ್​ ಯಾರೆಂಬುದಕ್ಕಿಂತ ಎಸೆತಗಳ ಕಡೆ ಗಮನಹರಿಸುವೆ. ನನ್ನ ಆಟದ ಬಗ್ಗೆ ಹೆಮ್ಮೆ ಇದೆ.
    | ಶಶಾಂಕ್​ ಸಿಂಗ್​, ಪಂದ್ಯಶ್ರೇಷ್ಠ

    *6: ಪಂಜಾಬ್​ ಕಿಂಗ್ಸ್​ ಐಪಿಎಲ್​ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ಸವಾಲನ್ನು 6 ಬಾರಿ ಬೆನ್ನಟ್ಟಿ ಗೆದ್ದ ಮೊದಲ ತಂಡವೆನಿಸಿತು. ಮುಂಬೈ 5 ಬಾರಿ ಗೆದ್ದಿದ್ದು ಹಿಂದಿನ ದಾಖಲೆ.

    *50: ರಶೀದ್​ ಖಾನ್​ ಐಪಿಎಲ್​ನಲ್ಲಿ 2 ತಂಡಗಳ ಪರ ಕನಿಷ್ಠ 50 ವಿಕೆಟ್​ ಕಬಳಿಸಿದ 4ನೇ ಬೌಲರ್​ ಎನಿಸಿದರು. ಪೀಯುಷ್​ ಚಾವ್ಲಾ, ಅಕ್ಷರ್​ ಪಟೇಲ್​, ಯಜುವೇಂದ್ರ ಚಾಹಲ್​ ಮೊದಲ ಮೂವರು.

    ಹಾರ್ದಿಕ್​ ನಾಯಕತ್ವದ ಬಗ್ಗೆ ಅಸಮಾಧಾನ! ಮುಂಬೈ ಇಂಡಿಯನ್ಸ್​ಗೆ ರೋಹಿತ್​ ಶರ್ಮ ಗುಡ್​ಬೈ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts