More

    ಭಾಗ್ಯವಂತ ಪುನೀತ ಚಿತ್ರರಂಗ ಅನಾಥ

    ಪುನೀತ್​ ರಾಜಕುಮಾರ್​ ಮತ್ತು ಸುದೀಪ್​ ನಡುವೆ ಒಳ್ಳೆಯ ಗೆಳೆತನ ಇರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಇಬ್ಬರ ನಡುವೆ ಬಾಲ್ಯದಿಂದಲೇ ಸ್ನೇಹ ಇದ್ದು, ನಂತರ ದಿನಗಳಲ್ಲಿ ಅದು ಇನ್ನಷ್ಟು ಪಕ್ವವಾಗಿತ್ತು. ಪುನೀತ್​ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಅವರ ಸದಾಶಿವನಗರದ ಮನೆಗೆ ಭೇಟಿ ನೀಡಿದ ಸುದೀಪ್​, ಅಂತಿಮ ದರ್ಶನ ಪಡೆದು ಬಂದಿದ್ದರು. ಇದೀಗ ಗೆಳೆಯನ ಅಕಾಲಿಕ ನಿಧನದಿಂದ ಶಾಕ್​ ಆಗಿರುವ ಅವರು, ಸುದೀರ್ವಾಗಿ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

    ಅಂತಿಮ ಯಾತ್ರೆ ಮಾರ್ಗ
    ಕಂಠೀರವ ಕ್ರೀಡಾಂಗಣ ಹಿಂಭಾಗದ ಗೇಟ್​ನಿಂದ ಪುನೀತ್​ ರಾಜ್​ಕುಮಾರ್​ ಪಾರ್ಥಿವ ಶರೀರವನ್ನು ವಿಶೇಷ ವಾಹನದಲ್ಲಿ ಮೆರವಣಿಗೆ ಹೊರಟು ಆರ್​.ಆರ್​.ಎಂ. ರಸ್ತೆ, ಹಡ್ಸನ್​ ಸರ್ಕಲ್​& ಪೊಲೀಸ್​ ಕರ್ನರ್​& ಕೆ.ಜಿ ರಸ್ತೆ& ಮೈಸೂರು ಬ್ಯಾಂಕ್​ ಸರ್ಕಲ್​&ಪೋಸ್ಟ್​ ಆಫೀಸ್​ ರಸ್ತೆ& ಕೆ.ಆರ್​.ಸರ್ಕಲ್​ನಲ್ಲಿ ಎಡ ತಿರುವು ಪಡೆದು ಶೇಷಾದ್ರಿ ರಸ್ತೆ& ಮಹಾರಾಣಿ ಮೇಲ್ಸೆತುವೆ& ಸಿಐಡಿ ಜಂಕ್ಷನ್​& ಚಾಲುಕ್ಯ ಸರ್ಕಲ್​& ಬಿಡಿಎ ಆ್​ ರ್ಯಾಂಪ್​& ಪಿಜಿ ಹಳ್ಳಿ ಕ್ರಾಸ್​& ಕಾವೇರಿ ಜಂಕ್ಷನ್​ನಲ್ಲಿ ಎಡ ತಿರುವು ಪಡೆದು ಬ್ಯಾಷ್ಯಂ ವೃತ್ತ& ಸ್ಯಾಂಕಿ ರಸ್ತೆ& ಮಲ್ಲೇಶ್ವರ 18ನೇ ಕ್ರಾಸ್​ನಲ್ಲಿ ಬಲ ತಿರುವು ಪಡೆದು ಮಾರಮ್ಮ ವೃತ್ತ& ಬಿಎಚ್​ಇಎಲ್​, ಸರ್ವಿಸ್​ ರಸ್ತೆ& ಬಿಎಚ್​ಇಎಲ್​ ವೃತ್ತ& ಯಶವಂತಪುರ ವೃತ್ತ, ಮೆಟ್ರೋ ಷಾಪ್​& ಮಾರಪ್ಪನ ಪಾಳ್ಯ& ಗೋವರ್ಧನ ಥಿಯೇಟರ್​ ಜಂಕ್ಷನ್​& ಆರ್​ಎಂಸಿ ಯಾರ್ಡ್​ ಪೊಲೀಸ್​ ಠಾಣೆ& ಎಂಇಐ, ಬಸ್​ ನಿಲ್ದಾಣ& ಗೊರಗುಂಟೆಪಾಳ್ಯ ಜಂಕ್ಷನ್​ನಲ್ಲಿ ಮೂಲಕ ಡಾ.ರಾಜ್​ಕುಮಾರ್​ ಸ್ಮಾರಕ (ಕಂಠೀರವ ಸ್ಟುಡಿಯೋ) ಸೇರಿಲಿದೆ.

    ನಮ್ಮ ಮತ್ತು ರಾಜ್​ ಕುಟುಂಬದ ನಡುವೆ ಅವಿನಾಭಾವ ನಂಟಿದೆ. ನಮ್ಮ ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ಶಿವರಾಜಕುಮಾರ್​, ರಾವೇಂದ್ರ ರಾಜಕುಮಾರ್​, ಪುನೀತ್​ ರಾಜಕುಮಾರ್​ ಒಟ್ಟಿಗೆ ಆಗಮಿಸುತ್ತಾರೆ. ಇದೀಗ ನಮ್ಮೆಲ್ಲರ ನೆಚ್ಚಿನ ಅಪ್ಪು, ಪುನೀತ್​ ರಾಜಕುಮಾರ್​ ಅಕಾಲಿಕ ಮರಣಹೊಂದಿದ್ದಾರೆ. ನಿಜಕ್ಕೂ ಇದು ದುರಂತ. ಜೀರ್ಣಿಸಿಕೊಳ್ಳಲಾಗದ ನೋವು. ದೇವರು ಪುನೀತ್​ಗೆ ದೊಡ್ಡ ಅನ್ಯಾಯ ಮಾಡಿದ. ಆ ಭಗವಂತ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ನೀಡಲಿ.

    | ಚಿರಂಜೀವಿ ಹಿರಿಯ ತೆಲುಗು ನಟ

    ಮೊನ್ನೆಯಷ್ಟೇ ಗುರುಕಿರಣ್​ ಅವರ ರ್ಬತ್​ ಡೇ ಪಾರ್ಟಿಯಲ್ಲಿ ಮೂರು ವರ್ಷಗಳ ಬಳಿಕ ಸಿಕ್ಕಿದ್ದರು. ರಾಜ್​ ಕುಟುಂಬದ ಮಕ್ಕಳ ಜತೆ ಸಿನಿಮಾ ಮಾಡಬೇಕೆಂಬ ಅಮ್ಮನ ಆಸೆ ಈಡೇರಿಸಿದ್ದೆ. ದೇವರಿಗೆ ಎಷ್ಟು ಥ್ಯಾಂಕ್ಸ್​ ಹೇಳಿದರೂ ಸಾಲದು.

    | ರಚಿತಾ ರಾಮ್​

    ಇಂಥ ದಿನವೂ ಬರುತ್ತೆ ಎಂದುಕೊಂಡಿರಲಿಲ್ಲ. “ಮಿಲನ’ ಸಿನಿಮಾದಲ್ಲಿ ಅವರೊಂದಿಗೆ ತೆರೆಹಂಚಿಕೊಂಡಿದ್ದೇ ನನ್ನ ಅದೃಷ್ಟ. ಅದೇ ರೀತಿ ಸ್ವಿಟ್ಜರ್​ಲೆಂಡ್​ನಲ್ಲಿ ಆ ಚಿತ್ರದ ಶೂಟಿಂಗ್​ ಹೋದಾಗ, ಕೆಳಗಡೆ ಕುಳಿತೇ ಊಟ ಮಾಡುತ್ತಿದ್ದರು. ಅಷ್ಟೊಂದು ಸರಳ ವ್ಯಕ್ತಿತ್ವ ಅವರದ್ದು. ಹಾಗಾಗಿ ರೀಲ್​ ಲ್​ೈನಲ್ಲಿ ರಾಜಕುಮಾರ, ರಿಯಲ್​ ಲ್​ೈನಲ್ಲಿಯೂ ರಾಜಕುಮಾರ. ಭೇಟಿಯಾದಾಗಲೆಲ್ಲ ಕೇರಿಂಗ್​ ಕೇರಿಂಗ್​ ಎನ್ನುತ್ತಿದ್ದರು. ನಗು ಮೊಗದಲ್ಲಿಯೇ ಎಲ್ಲರನ್ನೂ ಸ್ವಾಗತಿಸುತ್ತಿದ್ದರು. ನಮ್ಮೆಲ್ಲರ ಹೃದಯದಲ್ಲಿ ಪುನೀತ್​ ಸದಾ ಜೀವಂತ. ಮತ್ತೊಂದು ಸಲ ಡಾ. ರಾಜ್​ ಅವರನ್ನು ಶಂಕರ್​ನಾಗ್​ ಅವರನ್ನು ಕಳೆದುಕೊಂಡಿದ್ದೇವೆ ಅನಿಸುತ್ತಿದೆ.

    | ಪೂಜಾ ಗಾಂಧಿ ನಟಿ

    ಪುನೀತ್​ ನೆನಪಲ್ಲಿ ಭಾವುಕ ಪತ್ರ ಬರೆದ ಸುದೀಪ್​

    “ನಾನು ಪುನೀತ್​ ಅವರನ್ನು ಭೇಟಿ ಮಾಡುವಷ್ಟರಲ್ಲಿ ಅವರು ದೊಡ್ಡ ಸ್ಟಾರ್​ ಆಗಿದ್ದರು. “ಭಾಗ್ಯವಂತ’ ಚಿತ್ರದ ವಿಜಯಯಾತ್ರೆಗೆ ಪುನೀತ್​ ಶಿವಮೊಗ್ಗಕ್ಕೆ ಬಂದಿದ್ದರು. ನನ್ನ ತಂದೆ ಸಿನಿಮಾ ಬಳಗದಲ್ಲಿ ಚಿರಪರಿಚಿತರಾದ್ದರಿಂದ, ಪುನೀತ್​ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದರು. ನಾನು ಅವರನ್ನು ಮೊದಲು ನೋಡಿದ್ದು ಆಗಲೇ. ಬಹುಶ@ ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ನಾವಿಬ್ಬರೂ ಬಹಳ ಬೇಗ ಸ್ನೇಹಿತರಾದೆವು. ಪುನೀತ್​ಗೆ ಊಟಕ್ಕಿಂತ ಹೆಚ್ಚಾಗಿ ನನ್ನ ಬಳಿ ಇದ್ದ ಗೊಂಬೆಗಳ ಬಗ್ಗೆ ಕುತೂಹಲವಿತ್ತು. ಪುನೀತ್​ಗೆ ಊಟ ಮಾಡಿಸುವುದಕ್ಕೆ ಅವರ ಜತೆಗಿದ್ದವರು ಕಷ್ಟಪಡುತ್ತಿದ್ದರೆ, ನಾವಿಬ್ಬರೂ ಆಟದಲ್ಲಿ ನಿರತರಾಗಿದ್ದೆವು. ಪುನೀತ್​ ಖುಷಿಯಾಗಿರುವುದನ್ನು ನೋಡಿ, ನನಗೆ ಇನ್ನಷ್ಟು ಖುಷಿಯಾಗಿತ್ತು.

    ಅಲ್ಲಿಂದ ನಾವಿಬ್ಬರೂ ಹಲವು ಬಾರಿ ಭೇಟಿಯಾಗಿದ್ದೇವೆ. ಸ್ನೇಹಿತರಿಂದ ಇಬ್ಬರೂ ಸಹೋದ್ಯೋಗಿಗಳಾಗಿದ್ದೇವೆ. ಬರೀ ಸ್ನೇಹಿತನಷ್ಟೇ ಅಲ್ಲ, ಅವರೊಬ್ಬ ಪ್ರತಿಸ್ಪರ್ಧಿಯಾಗಿದ್ದರು. ಒಬ್ಬ ಒಳ್ಳೆಯ ನಟನಷ್ಟೇ ಅಲ್ಲ, ಒಳ್ಳೆಯ ಡ್ಯಾನ್ಸರ್​ ಮತ್ತು ೈಟರ್​ ಸಹ ಆಗಿದ್ದರು. ಅವರೊಡ್ಡಿದ ಸ್ಪರ್ಧೆಯನ್ನು ನಾನು ನಿಜಕ್ಕೂ ಎಂಜಾಯ್​ ಮಾಡಿದೆ. ಏಕೆಂದರೆ, ಅದು ನನ್ನನ್ನು ಇನ್ನಷ್ಟು ಚೆನ್ನಾಗಿ ಕೆಲಸ ಮಾಡುವುದಕ್ಕೆ ಪ್ರೇರೇಪಿಸುತ್ತಿತ್ತು. ನಾನು ಅವರ ಸಮಕಾಲೀನರಾಗಿದ್ದಕ್ಕೆ ನನಗೆ ನಿಜಕ್ಕೂ ಖುಷಿಯಿದೆ, ಹೆಮ್ಮೆ ಇದೆ. ಪುನೀತ್​ ನಿಧನದಿಂದ ಚಿತ್ರರಂಗ ಅಪೂರ್ಣ ಎಂದೆನಿಸುತ್ತಿದೆ. ಸಮಯ ಬಹಳ ಕ್ರೂರಿಯಾಗಿದ್ದು, ಇಡೀ ಚಿತ್ರರಂಗದಲ್ಲಿ ದು@ಖ ಮಡುಗಟ್ಟಿದೆ.

    ಶುಕ್ರವಾರ, ಬೆಂಗಳೂರಿನಲ್ಲಿ ಇಳಿಯುತ್ತಿದ್ದಂತೆಯೇ, ನೇರವಾಗಿ ಅವರ ಮನೆಗೆ ಹೋದೆ. ಉಸಿರುಗಟ್ಟಿಸುವಂತಹ ವಾತಾವರಣ ಅಲ್ಲಿತ್ತು. ನಾನು ಇಂಥದ್ದೊಂದು ಳಿಗೆಯನ್ನು ನಿರೀೆ ಮಾಡಿರಲಿಲ್ಲ. ಪುನೀತ್​ ಆ ತರಹ ಮಲಗಿದ್ದನ್ನು ನೋಡಿ, ಹೃದಯದ ಮೇಲೆ ದೊಡ್ಡ ಬಂಡೆಯೊಂದನ್ನು ಇಟ್ಟಂತಾಗಿತ್ತು. ಮೊದಲ ಬಾರಿಗೆ ಸಹಜವಾಗಿ ಉಸಿರಾಡುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ. ಹೆಚ್ಚು ಕಾಲ ಅಲ್ಲಿರುವುದಕ್ಕೆ ನನ್ನಿಂದ ಸಾಧ್ಯವಾಗಲೇ ಇಲ್ಲ. ಶಿವಣ್ಣ ಅವರ ಮಾತು ಕೇಳಿ, ನೋವು ಇನ್ನೂ ಹೆಚ್ಚಾಯಿತು. ಅವರೊಂದು ಮಾತು ಹೇಳಿದರು. “ನಾನು ಅವನಿಗಿಂತ 13 ವರ್ಷ ದೊಡ್ಡವನು. ಇದೇ ಕೈಯಲ್ಲಿ ಅವನನ್ನು ಆಡಿ ಬೆಳೆಸಿದ್ದೇನೆ. ಇಲ್ಲಿಯವರೆಗೂ ಸಾಕಷ್ಟು ನೋಡಿದ್ದೇನೆ. ಇನ್ನೂ, ಏನೇನು ನೋಡಬೇಕೋ’ ಎಂದು ಕಣ್ಣೀರಿಟ್ಟರು. ಅವರ ಮಾತುಗಳು ಇನ್ನೂ ಕಿವಿಯಲ್ಲಿ ಎಕೋ ಹೊಡೆಯುತ್ತಿವೆ.

    ಪುನೀತ್​ ಸಾವಿನಿಂದ ಎಲ್ಲರೂ ಶಾಕ್​ ಆಗಿರುವುದಷ್ಟೇ ಅಲ್ಲ, ಛಿದ್ರರಾಗಿದ್ದಾರೆ. ಸಹಜಸ್ಥಿತಿಗೆ ಬರುವುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಸಹಜಸ್ಥಿತಿಗೆ ಬಂದರೂ, ಆ ಸ್ಥಾನ ಖಾಲಿಯಾಗಿಯೇ ಉಳಿಯುತ್ತದೆ. ಆ ಸ್ಥಾನವನ್ನು ಯಾರಿಂದಲೂ ತುಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಸ್ಥಾನವನ್ನು ಅಪು$್ಪ ಎಂಬ ಆ ಅದ್ಭುತ ಮನುಷ್ಯನಿಗೆ ಮಾತ್ರ ತುಂಬಲು ಸಾಧ್ಯ. ಹೋಗಿ ಬನ್ನಿ ಅಪು$್ಪ …’

    ನನ್ನ ಸಹೋದರ, ಸ್ನೇಹಿತ ಇಲ್ಲವೆಂಬಂತೆ ನೋವಾಗುತ್ತಿದೆ. ನಾವು ಒಂದೇ ತಾಯಿ ಮಕ್ಕಳಾಗದಿದ್ದರೂ, ಸೋದರರಂತೆ ಇದ್ದೆವು. ದೇವರು ಏಕೆ ಇಂತಹ ಅನ್ಯಾಯ ಮಾಡಿದ್ದಾನೆ ಎಂದು ಬೇಸರವಾಗುತ್ತಿದೆ. ಪುನೀತ್​ ಕಲಾವಿದನಾಗಿ ಅಭಿಮಾನಿಗಳನ್ನು ರಂಜಿಸಿದ್ದರು. ನಟನೆ ಜತೆಗೆ ಸಮಾಜ ಸೇವೆಯನ್ನೂ ಸಹ ಮಾಡಿದ್ದರು. ನೇತ್ರ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

    | ನಂದಮೂರಿ ಬಾಲಕೃಷ್ಣ ತೆಲುಗು ನಟ

    ಸಾವು ಅನಿರೀತ. ಪುನೀತ್​ ಸಾವಿನ ಸುದ್ದಿ ಈಗಲೂ ನನಗೆ ನಂಬಲಾಗುತ್ತಿಲ್ಲ. ಅವರೊಂದಿಗೆ ತುಂಬ ಆತ್ಮೀಯ ಒಡನಾಟ ನನಗಿದೆ. ಅವರ ್ಯಾಮಿಲಿ ಜತೆ ಒಳ್ಳೇ ನಂಟಿದೆ. ನಟನೆಯ ಜತೆಗೆ ಎಷ್ಟೋ ಮಂದಿಗೆ ಸಹಾಯ ಮಾಡಿದ್ದಾರೆ. ರಾಜಕುಮಾರ್​, ಪಾರ್ವತಮ್ಮ, ವರದಪ್ಪ ಇವೆರೆಲ್ಲರೂ ಈಗಾಗಲೇ ಅಗಲಿದ್ದಾರೆ. ಇದೀಗ ಪುನೀತ್​ ಸಹ ಇಲ್ಲ. ವಯಸ್ಸಿನಲ್ಲಿ ತುಂಬ ಚಿಕ್ಕವನು. ಕಳೆದ ಒಂದು ತಿಂಗಳ ಹಿಂದಷ್ಟೇ ಕಾಲ್​ ಮಾಡಿದ್ದೆ. ಭೇಟಿಯಾಗುವ ವಿಚಾರವೂ ಇತ್ತು. ಅಷ್ಟರಲ್ಲಿ ಹೀಗಾಯಿತು. ಮಿಸ್​ ಯೂ ಅಪು$್ಪ.

    | ಪುರಿ ಜಗನ್ನಾಥ್​ ನಿರ್ದೇಶಕ

    ಪುನೀತ್​ ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಈಗ ಪುನೀತ್​ ಇಲ್ಲವೆಂದು ಊಹಿಸುವುದಕ್ಕೂ ಆಗುತ್ತಿಲ್ಲ.

    |  ಪ್ರಿಯಾಂಕ ಉಪೇಂದ್ರ ನಟಿ

    ನಮ್ಮ ಸಹೋದರನನ್ನು ಕಳೆದುಕೊಂಡಂತೆ ಆಗುತ್ತಿದೆ. ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ

    | ಶರಣ್​ ನಟ

    ಪುನೀತ್​ಗೆ ಇದ್ದ ಸಹಾಯ ಮಾಡೋ ಗುಣ ಮತ್ತೆ ಯಾರಿಗೂ ಬರುವುದಿಲ್ಲ. ಯಾರೇ ಕಷ್ಟ ಹೇಳಿಕೊಂಡು ಬಂದರೂ, ನೆರವು ನೀಡುತ್ತಿದ್ದರು. ಅಪು$್ಪ ಕುಟುಂಬಕ್ಕೆ ದು@ಖ ಭರಿಸುವ ಶಕ್ತಿ ನೀಡಲಿ.

    | ರವಿಶಂಕರ್​ ನಟ

    “ಜೇಮ್ಸ್​’ ಸಿನಿಮಾದಲ್ಲಿ ಪುನೀತ್​ ಜತೆಗೆ ಒಟ್ಟಿಗೆ 45 ದಿನ ಕೆಲಸ ಮಾಡಿದ್ದೇನೆ. ಕಳೆದ 25 ವರ್ಷಗಳಿಂದ ನನಗೆ ಡಾ. ರಾಜ್​ ಕುಟುಂಬದ ಜತೆ ಒಡನಾಟವಿದೆ. ಕಳೆದ ವಾರವಷ್ಟೇ ಡಬ್ಬಿಂಗ್​ ವಿಚಾರವಾಗಿ ಮಾತನಾಡಿದ್ದೆ. ಇದೀಗ ಈ ಶಾಕಿಂಗ್​ ಸುದ್ದಿ ನನ್ನನ್ನು ದಿಗ್ಭ್ರಮೆಗೊಳಿಸಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಷ್ಟೇ ಹೇಳಲು ನನ್ನಿಂದ ಸಾಧ್ಯ.

    |  ಶ್ರೀಕಾಂತ್​ ತೆಲುಗು ನಟ

    ರಾಜಕುಮಾರ್​ ಕುಟುಂಬಕ್ಕೂ ನನಗೆ 35 ವರ್ಷದ ನಂಟು. ಒಳ್ಳೆಯವರನ್ನೇ ದೇವರು ಬೇಗನೆ ಕರೆದುಕೊಳ್ಳುತ್ತಿದ್ದಾನೆ. ಪುನೀತ್​ ಅವರದ್ದು ಅದ್ಬುತ ವ್ಯಕ್ತಿತ್ವ. ಆ ವ್ಯಕ್ತಿತ್ವವನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಸಾಕಷ್ಟು ಸಲ ದುಬೈ, ಅಬುದಾಬಿಯಲ್ಲಿ ಇಬ್ಬರೂ ಭೇಟಿ ಮಾಡಿದ್ದೇವೆ. ಭೇಟಿ ಮಾಡಿದಾಗಲೆಲ್ಲ, ನಮ್ರತೆಯಿಂದ ಅಣ್ಣ ಅಣ್ಣ.. ಎಂದು ಕರೆದು ಅಪು$್ಪಗೆ ನೀಡುತ್ತಿದ್ದರು. ಪುನೀತ್​ ಅವರನ್ನು ಭೇಟಿಮಾಡಿದಾಗಲೆಲ್ಲ ಅವರ ಕಣ್ಣಲ್ಲಿ ಕಾಣುತಿದ್ದದ್ದು ಡಾ. ರಾಜಕುಮಾರ್​. ಇದೀಗ ಆ ಕಣ್ಣುಗಳೇ ಮುಚ್ಚಿವೆ.

    | ಅಲಿ ತೆಲುಗು ನಟ

    ಬಿಗಿ ಭದ್ರತೆಗೆ ವ್ಯವಸ್ಥೆ
    ಪುನೀತ್​ ಅಂತಿಮ ಯಾತ್ರೆಯುದ್ದಕ್ಕೂ ಬಿಗಿ ಭದ್ರತೆ ನಿಯೋಜಿಸಲಾಗುತ್ತದೆ. 8 ಸಾವಿರ ಕಾನೂನು ಸುವ್ಯವಸ್ಥೆ ಪೊಲೀಸರು, 3 ಸಾವಿರ ಸಂಚಾರ ಪೊಲೀಸರು, 60 ಕೆಎಸ್​ಆರ್​ಪಿ, 35 ಸಿಎಆರ್​/ಡಿಎಆರ್​ ತುಕಡಿ, 2 ಆರ್​ಎಎ್​ ಕಂಪನಿ, 19 ಡಿಸಿಪಿ/ಎಸಿಪಿ ಮತ್ತು ಇಬ್ಬರು ಹೆಚ್ಚುವರಿ ಪೊಲೀಸ್​ ಆಯುಕ್ತರನ್ನು ನಿಯೋಜನೆ ಮಾಡಲಾಗಿದೆ. ಪಾರ್ಥಿವ ಶರೀರ ಹೋಗುವ ರಸ್ತೆಗಳಲ್ಲಿ ಸೆಕ್ಟರ್​ಗಳಾಗಿ ವಿಂಗಡಿಸಿ ಪ್ರತಿ ಸೆಕ್ಟರ್​ ಉಸ್ತುವಾರಿಯನ್ನು ಡಿಸಿಪಿ ನೇತೃತ್ವದಲ್ಲಿ ತಂಡ ನಿರ್ವಹಣೆ ಮಾಡಲಿದೆ. ಅಂತಿಮ ಯಾತ್ರೆ ಹೊರಟುವ ಸಮಯದಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಬೇರೆ ಮಾರ್ಗವನ್ನು ಕಲ್ಪಿಸಲಾಗುತ್ತದೆ. ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಕೈ ಜೋಡಿಸಬೇಕೆಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts