More

    ಮಂಡ್ಯ ಯೋಧ ಗುರು ಹುತಾತ್ಮರಾಗಿ ಇಂದಿಗೆ ಒಂದು ವರ್ಷ: ಗುರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಸ್ನೇಹಿತರು ಭಾಗಿ

    ಮಂಡ್ಯ: ಪುಲ್ವಾಮಾ ದಾಳಿಯಲ್ಲಿ ಮಂಡ್ಯ ಯೋಧ ಗುರು ಹುತಾತ್ಮರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಇಂದು ಗುರು ಸಮಾಧಿಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಪೂಜೆ ಸಲ್ಲಿಸಿದರು.

    ಸಮಾಧಿಗೆ ವಿವಿಧ ಪುಷ್ಪಗಳಿಂದ ಅಲಂಕಾರಗೊಳಿಸಲಾಗಿದೆ. ಗುರು ಅವರೊಂದಿಗೆ ಹುತಾತ್ಮರಾದ 40 ಮಂದಿ ಯೋಧರಿಗೂ ಗೌರವ ಸಲ್ಲಿಸುತ್ತಿರುವ ಕುಟುಂಬಸ್ಥರು.

    ಸಮಾಧಿ ಪಕ್ಕದಲ್ಲಿ 40 ಯೋಧರ ಭಾವಚಿತ್ರವುಳ್ಳ ಬ್ಯಾನರ್ ಹಾಕಿ ಪೂಜಿಗೆ ಸಿದ್ಧತೆ ಮಾಡಲಾಗಿದೆ. ಸಮಾಧಿ ಬಳಿಗೆ ಪೂಜೆಗೆಂದು ಗುರು ತಂದೆ, ತಾಯಿ ಹಾಗೂ ಇಬ್ಬರು ಸಹೋದರರು ಪೂಜೆ ಸಲ್ಲಿಸಿದರು. ಕುಟುಂಬಸ್ಥರ ಪೂಜೆ ಸಿದ್ಧತೆಗೆ ಸಾಥ್ ನೀಡಿರುವ ಗುರು ಸ್ನೇಹಿತರು.

    2019ರ ಫೆ.14ರಂದು ಪುಲ್ವಾಮದಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಪೈಕಿ ಮಂಡ್ಯದ ಗುಡಿಗೆರೆ ಕಾಲನಿಯ ಎಚ್.ಗುರು ಕೂಡ ಒಬ್ಬರು.

    ಫೆ.16 ಗುರು ಪಾರ್ಥೀವ ಶರೀರ ತಂದು ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿತ್ತು. ಗುರು ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಆಗಮಿಸಿದ್ದರು.

    ಹುಸಿಯಾದ ಸ್ಮಾರಕ ನಿರ್ಮಾಣ ಭರವಸೆ: ಸಮಾಧಿ ಸ್ಥಳದಲ್ಲೇ ಸ್ಮಾರಕ ನಿರ್ಮಾಣದ ಮಾಡುವುದಾಗಿ ಹೇಳಿದ್ದ ಶಾಸಕ ಡಿ.ಸಿ. ತಮ್ಮಣ್ಣ ಅವರ ಭರವಸೆ ವರ್ಷವಾದರೂ ಈಡೇರಿಲ್ಲ. ಅಂತ್ಯ ಸಂಸ್ಕಾರದ ದಿನ ಡಿ.ಸಿ. ತಮ್ಮಣ್ಣ ಸ್ಮಾರಕ ನಿರ್ಮಿಸುವ ಭರವಸೆ ನೀಡಿದ್ದರು.

    ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಈಗಳು ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸುತ್ತಾರೆ. ಆದರೆ ಇಂದಿಗೂ ಅಭಿವೃದ್ಧಿ ಕಾಣದ ಯೋಧ ಗುರು ಸಮಾಧಿ ಸ್ಥಳದ ಬಗ್ಗೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts