More

    ಪಿಯು ಪೂರಕ ಪರೀಕ್ಷೆ, 58 ವಿದ್ಯಾರ್ಥಿಗಳು ಗೈರು

    ಬೆಳಗಾವಿ/ಚಿಕ್ಕೋಡಿ: ಜಿಲ್ಲಾದ್ಯಂತ ಬುಧವಾರ ಪದವಿ ಪೂರ್ವ ದ್ವಿತೀಯ ವರ್ಷದ ಪೂರಕ ಪರೀಕ್ಷೆ ಸುಗಮವಾಗಿ ನಡೆಯಿತು. ಒಟ್ಟು 58 ವಿದ್ಯಾರ್ಥಿಗಳು
    ಗೈರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಿಂದಿ ವಿಷಯ ಪರೀಕ್ಷೆಗೆ ನೋಂದಣಿಗೊಂಡಿದ್ದ 376 ವಿದ್ಯಾರ್ಥಿಗಳ ಪೈಕಿ 337 ವಿದ್ಯಾರ್ಥಿಗಳು
    ಹಾಜರಾಗಿದ್ದರು. 39 ವಿದ್ಯಾರ್ಥಿಗಳು ಗೈರಾಗಿದ್ದರು. ಮರಾಠಿ ಪರೀಕ್ಷೆಗೆ ನೋಂದಣಿಯಾಗಿದ್ದ 10 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು
    ಹಾಜರಾದರು. ಒಬ್ಬ ವಿದ್ಯಾರ್ಥಿ ಗೈರಾಗಿದ್ದ.

    ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಿಂದಿ ವಿಷಯ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 187 ವಿದ್ಯಾರ್ಥಿಗಳ ಪೈಕಿ 171 ವಿದ್ಯಾರ್ಥಿಗಳು ಹಾಜರಾದರು. 16 ವಿದ್ಯಾರ್ಥಿಗಳು ಗೈರಾಗಿದ್ದರು. ಮರಾಠಿ ಪರೀಕ್ಷೆಗೆ ನೋಂದಣಿಯಾಗಿದ್ದ ಐವರು ವಿದ್ಯಾರ್ಥಿಗಳ ಪೈಕಿ ಮೂವರು ಹಾಜರಾದರೆ, ಇಬ್ಬರು ಗೈರು ಉಳಿದಿದ್ದರು. ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts