More

    ಬೆಳೆ ಹಾನಿ ರೈತರಿಗೆ ಶೀಘ್ರ ಪರಿಹಾರ ನೀಡಿ

    ಶಿಗ್ಗಾಂವಿ: ಪ್ರಸಕ್ತ ವರ್ಷ ಅತಿಯಾದ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಶಿಗ್ಗಾಂವಿ ತಾಲೂಕು ರೈತ ಒಕ್ಕೂಟ (ಪಕ್ಷಾತೀತ)ದ ವತಿಯಿಂದ ಕೃಷಿ ಅಧಿಕಾರಿ ಬಾಬುರಾವ್ ದೀಕ್ಷಿತ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

    ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನಾದ್ಯಂತ ಕಟಾವಿಗೆ ಬಂದ ಶೇಂಗಾ, ಸೋಯಾಬೀನ್, ಗೋವಿನಜೋಳ, ಹತ್ತಿ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ಹಳ್ಳದ ನೀರು ನುಗ್ಗಿ ಶೇಂಗಾ ಸೇರಿದಂತೆ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಬಹುತೇಕ ಬೆಳೆಗಳು ಹಾಳಾಗಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಮಳೆಯ ಅರ್ಭಟಕ್ಕೆ ಸಾಕಷ್ಟು ಮನೆಗಳು ಹಾನಿಗೊಳಗಾಗಿವೆ. ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    2019-20ನೇ ಸಾಲಿನ ಬೆಳೆ ವಿಮಾ ಪರಿಹಾರ ಹಣವನ್ನು ಶೀಘ್ರ ರೈತರ ಖಾತೆಗೆ ಜಮಾ ಮಾಡಬೇಕು. 2020-21ನೇ ಸಾಲಿನ ಬೆಳೆ ವಿಮೆ ಮಧ್ಯಂತರ ಪರಿಹಾರ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಜಿ.ಪಂ. ಮಾಜಿ ಸದಸ್ಯ ಶಶಿಧರ ಹೊಣ್ಣನ್ನವರ, ಉಮೇಶ ಅಂಗಡಿ, ಸುರೇಶ ಸುರಗೊಂಡ, ಬಸವರಾಜ ಕುರಗೋಡಿ, ಈಶ್ವರಗೌಡ ಪಾಟೀಲ, ಉಮೇಶ ವಾಲ್ಮೀಕಿ, ಖಾಜಾಸಾಬ್ ದರ್ಗಾ, ಜಗದೀಶ ಶಿದ್ದಪ್ಪನವರ, ಶಿವು ತೊಂಡೂರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts