More

     ಬಡವರ ಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡಿ

    ರೋಣ: ಸಮಾಜದಲ್ಲಿ ಪ್ರತಿಯೊಬ್ಬರೂ ಸಂಘಟಿತರಾಗಿ ಕೆಲಸ ಮಾಡಬೇಕು. ಬಡವರ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ನೆರವು ನೀಡಬೇಕು. ದುರ್ಬಲರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಗಾಣಿಗ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನೂತನ ಶಾಸಕರ ಹಾಗೂ ಸಮಾಜದ ಗಣ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಅಕ್ಕಿಯ ಬದಲು ಹಣ ಕೊಡುವುದರಿಂದ ಮನೆ ನಿರ್ವಹಣೆಗೆ ಅನುಕೂಲವಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ, ಯುವಕರಿಗೆ ಅನುಕೂಲವಾಗಿದೆ ಎಂದರು.

    ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಸಮಾಜ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಡಾ. ಜಯಬಸವಕುಮಾರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸಾಧಕನಿಗೆ ನಿರ್ದಿಷ್ಟ ಸಮಾಜ ಇರಬಾರದು. ಜಾತ್ಯಾತೀತ, ಸಮಗ್ರ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿರಬೇಕು. ಈ ದಿಸೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ವ್ಯಕ್ತಿತ್ವವಿದೆ ಎಂದರು.

    ದಶರಥ ಗಾಣಿಗೇರ,ಬಸವರಾಜ ಬಿಂಗಿ, ಪರಶುರಾಮ ಅಳಗವಾಡಿ, ಬಸವರಾಜ ನವಲಗುಂದ, ಬಸವರಾಜ ಸುಂಕದ, ಬಸನಗೌಡ ಕರಿಗೌಡ್ರ ಪಾಟೀಲ, ಷಣ್ಮಖ ಬಡ್ನಿ , ಎಚ್.ಬಿ. ನವಲಗುಂದ, ಸಿ.ಬಿ. ಬಂಡಿ, ವಿ.ಆರ್. ಗುಡಿಸಾಗರ, ಸಿದ್ದಲಿಂಗೇಶ ಪಾಟೀಲ, ಫಕೀರಗೌಡ ಪಾಟೀಲ, ರಂಗನಗೌಡ ದೊಡ್ಡನಗೌಡ್ರ, ಸಂಗು ನವಲಗುಂದ, ಯಚ್ಚರಗೌಡ ಗೋವಿಂದಗೌಡ, ಪ್ರಭು ಮೇಟಿ,ಸಮಾಜದ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts