More

    ಕಟ್ಟಡ ಕಟ್ಟುವ ಕಾರ್ವಿುಕರಿಂದ ಪ್ರತಿಭಟನೆ

    ಸವಣೂರ: ಕಾರ್ವಿುಕರಿಗೆ ಸೌಲಭ್ಯ ವಿತರಣೆಯಲ್ಲಿನ ವಿಳಂಬ ನೀತಿ ವಿರೋಧಿಸಿ ರಾಜ್ಯ ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ವಿುಕರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಯಿತು.

    ಜಿಲ್ಲೆಯಲ್ಲಿ ನಕಲಿ ಕಾರ್ವಿುಕರ ಕಾರ್ಡ್ ವಿತರಣೆ ಹಾವಳಿ ಹೆಚ್ಚಾಗಿದ್ದು, ಮೂಲ ಕಾರ್ವಿುಕರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ, ಇಂಥವರ ವಿರುದ್ಧ ಸೂಕ್ತ ಕಾನುನು ಕ್ರಮ ಕೈಗೊಳ್ಳಬೇಕು. ಬಡ ಕಾರ್ವಿುಕರಿಗೆ ಗೃಹ ಸಾಲ ಸೌಲಭ್ಯ ಒದಗಿಸಬೇಕು. ಕಾರ್ವಿುಕರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಕಿಟ್, ಲ್ಯಾಪ್​ಟಾಪ್ ಹಾಗೂ ವಿವಿಧ ಸೌಲಭ್ಯ ತಡೆ ಹಿಡಿಯಲಾಗಿದ್ದು, ಕೂಡಲೆ ತೆರವುಗೊಳಿಸಿ ಸೌಲಭ್ಯ ವಿತರಿಸಬೇಕು. ಕಾರ್ವಿುಕರಿಗೆ ಸರ್ಕಾರದ ಸೌಲಭ್ಯ ಕೊಡಿಸುವುದಾಗಿ ಹಣ ಸುಲಿಗೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
    ಪಟ್ಟಣದ ಎಪಿಎಂಸಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಶಿಂಪಿಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಹಾಯ್ದು ತಹಸೀಲ್ದಾರ್ ಕಚೇರಿ ತಲುಪಿತು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮನವಿ ಸ್ವೀಕರಿಸಿದರು. ಎಐಟಿಯುಸಿ ಸಂಘಟನೆ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಕಟ್ಟಡ ಕಾರ್ವಿುಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್. ಉಮೇಶ, ತಾಲೂಕು ಅಧ್ಯಕ್ಷ ಜೆ.ಐ. ಗವಾರಿ, ಪದಾಧಿಕಾರಿಗಳಾದ ಎನ್.ಪೀರಜಾದೆ, ಎಚ್.ಡಿ. ಕೃಷ್ಣೇಗೌಡ, ಎಂ.ಡಿ. ಕಾಲೇವಾಗ, ಇಮಾಮಸಾಬ್ ನದಾಫ ಹಾಗೂ ನೂರಾರು ಕಾರ್ವಿುಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts