More

    ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು; ಸಂಬಂಧಿಕರ ಪ್ರತಿಭಟನೆ

    ತುಮಕೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಂಬಂಧಿಕರು ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.

    ನಗರದ ವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ತಿಲಕ್‌ಪಾರ್ಕ್ ನಿವಾಸಿ ಮೊಹಮದ್‌ಗೌಸ್ (50) ಸಾವನ್ನಪ್ಪಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ದೂರಿದ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದ ಸಂಬಂಧಿಕರು ಆಸ್ಪತ್ರೆ ಒಳಗಿನ ಕಿಟಕಿ, ಬಾಗಿಲಿನ ಗಾಜುಗಳನ್ನು ಪುಡಿ ಮಾಡಿದ್ದಾರೆ.

    ಪೊಲೀಸರು ದೌಡು: ಉದ್ರಿಕ್ತ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಹೊಸ ಬಡಾವಣೆ ಠಾಣೆ ಸೇರಿ ವಿವಿಧ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ದಾಂಧಲೆ ನಡೆಸಿದವರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರು ಆಸ್ಪತ್ರೆಯಲ್ಲಿ ಗುರುವಾರವೂ ಬೀಡುಬಿಟ್ಟಿದ್ದರು.

    ಪ್ರಕರಣ ಹಿನ್ನೆಲೆ: ಹೊಟ್ಟೆ ನೋವು ಎಂದು ಮಂಗಳವಾರ ರಾತ್ರಿ ಮೊಹಮ್ಮದ್‌ಗೌಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಯಲ್ಲಿ ಸೋಂಕು ಆಗಿರುವುದರಿಂದ ಸಣ್ಣ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದರು. ಸಣ್ಣ ಆಪರೇಷನ್ ಅಂತ ಹೇಳಿ ಪ್ರಾಣವನ್ನೇ ತೆಗೆದಿದ್ದಾರೆ ಎಂಬುದು ಸಂಬಂಧಿಕರ ಆರೋಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts