More

    ಕೋರ್ಸ್ ರದ್ದತಿ ಖಂಡಿಸಿ ಪ್ರತಿಭಟನೆ

    ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯ ಅಧೀನದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿನ 3 ವರ್ಷದ ಕಾನೂನು ಪದವಿ ಕೋರ್ಸ್ ರದ್ದುಗೊಳಿಸಲು ನಿರ್ಧರಿಸಿದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಹಾವಿದ್ಯಾಲಯ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

    ಕೋರ್ಸ್ ರದ್ದು ಮಾತುಗಳು ಕೇಳಿ ಬಂದ ದಿನದಿಂದಲೂ ಕವಿವಿಯ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದೆ 2020-21ನೇ ಸಾಲಿನಲ್ಲಿ 3 ವರ್ಷದ ಕೋರ್ಸ್​ಗೆ ಪ್ರವೇಶಾತಿ ರದ್ದು ಮಾಡಿದ್ದಾರೆ. ಈ ಕ್ರಮದಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

    3 ವರ್ಷದ ಕೋರ್ಸ್​ನಿಂದ ವೃತ್ತಿಪರ ಹಾಗೂ ಗುಣಮಟ್ಟದ ವಕೀಲರನ್ನು ಸಮಾಜಕ್ಕೆ ನೀಡಲಾಗದ ಹಿನ್ನೆಲೆಯಲ್ಲಿ ರದ್ದು ಮಾಡಲಾಗುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯರು ಕಾರಣ ನೀಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಅಧ್ಯಾಪಕರ ಅಗತ್ಯವಿದೆಯೇ ಹೊರತು ವರ್ಷದ ಲೆಕ್ಕವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೆ ಈ ಕೋರ್ಸ್ ರದ್ದು ಮಾಡಬಾರದು. ಹೀಗಾಗಿ ಈ ವಿಷಯವಾಗಿ ಮತ್ತೊಮ್ಮೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

    ನಂತರ ಸ್ಥಳಕ್ಕೆ ಆಗಮಿಸಿದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಹನುಮಂತ ಬಗಲಿ, ಪ್ರತೀಕ ಮಾಳಿ, ಗಂಗಾಧರ ಹಂಜಗಿ, ಶಿವಾನಂದ ಕಂಟಿಕಾರ, ಉಮೇಶ, ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ, ಪಿ.ಎಚ್. ನೀರಲಕೇರಿ ಇತರರಿದ್ದರು.

    ರಾಜ್ಯದ ಎಲ್ಲ ಕಾನೂನು ಮಹಾವಿದ್ಯಾಲಯಗಳಲ್ಲಿ 5 ವರ್ಷಗಳ ಕೋರ್ಸ್ ಮಾತ್ರ ನಡೆಸಲಾಗುತ್ತಿದೆ. ವೃತ್ತಿಪರ ಹಾಗೂ ಗುಣಮಟ್ಟದ ವಕೀಲರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ 3 ವರ್ಷದ ಕೋರ್ಸ್ ರದ್ದತಿಗೆ ನಿರ್ಧರಿಸಲಾಗಿದೆ. ಈ ವಿಷಯವಾಗಿ ಕವಿವಿ ಸಮಿತಿ ರಚಿಸಿದ್ದು, ಸಮಿತಿ ವರದಿ ನೀಡಿದ ಬಳಿಕ ವಿಶ್ವ ವಿದ್ಯಾಲಯ ಅಂತಿಮ ನಿರ್ಣಯ ಕೈಗೊಳ್ಳಲಿದೆ.

    | ವಿಶ್ವನಾಥ ಎಂ., ಸರ್ ಸಿದ್ದಪ್ಪ ಕಂಬಳಿ ಕಾಲೇಜ್ ಪ್ರಾಚಾರ್ಯ (ಪ್ರಭಾರಿ)



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts