More

    ಕಾಂತರಾಜ್ ವರದಿ ಸ್ವೀಕರಿಸಲು ಒತ್ತಾಯಿಸಿ ಪ್ರತಿಭಟನೆ

    ಹೊಸಪೇಟೆ: ಹಿಂದುಳಿದ ವರ್ಗಗಳ ಆಯೋಗದಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಎಚ್.ಕಾಂತರಾಜ್ ನೇತೃತ್ವದ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಸ್ವೀಕರಿಸಿ, ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿ ಎಚ್.ಕಾಂತರಾಜ್ ವರದಿ ಜಾರಿಗಾಗಿ ಹೋರಾಟ ಸಮಿತಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಸಾಮಾಜಿಕ ಸಮಾನತೆಗಾಗಿ ಸರ್ವರ ಸಮೀಕ್ಷೆ ಎಂಬ ಗುರಿಯೊಂದಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಎಚ್.ಕಾಂತರಾಜ್ ನೇತೃತ್ವದಲ್ಲಿ ೨೦೧೫ರಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿತ್ತು. ಭಾರತದಲ್ಲಿ ಮೊಟ್ಟ ಮೊದಲು ಜಾತಿವಾರು ಜನಗಣತಿ ೧೮೭೨ರಲ್ಲಿ ನಡೆದಿದೆ. ೧೮೮೧ ರಿಂದ ೧೯೩೧ರ ವರೆಗೆ ೧೦ ವರ್ಷಗಳಿಗೊಮ್ಮೆ ನಡೆದಿದ್ದು, ಆನಂತರ ಮುಂದುವರಿಸದಿರುವುದು ಚಾರಿತ್ರಿಕ ಅಪರಾಧವೆಂದು ಪ್ರತಿಭಟನಾಕಾರರು ಟೀಕಿಸಿದರು.

    ೨೦೧೪ರರಲ್ಲಿ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮುಖಾಂತರ ಮತ್ತೆ ಸಮೀಕ್ಷೆಗೆ ಚಾಲನೆ ನೀಡಿತ್ತು. ಈಗಾಗಲೆ ಸಮೀಕ್ಷೆ ಮುಕ್ತಾಯಗೊಂಡು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಮಯದಲ್ಲಿ ಕೆಲವು ಬಲಾಡ್ಯ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇದರಿಂದಾಗಿ ಎಚ್.ಕಾಂತರಾಜ್ ವರದಿಯಲ್ಲಿ ಏನಿದೆ ಎಂಬುದೇ ರಾಜ್ಯದ ಜನತೆಗೆ ಗೊತ್ತಿಲ್ಲದಿರುವಾಗ ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಇಂತಹ ಬಲಾಡ್ಯ ಸಮುದಾಯಗಳ ಹಿತಾಸಕ್ತಿಗೆ ಬಲಿಯಾಗದೇ, ರಾಜ್ಯದ ಎಲ್ಲ ಜನರ ಅಭಿವೃದ್ಧಿಗಾಗಿ ಜಾತಿವಾರು ಸಮೀಕ್ಷೆಯನ್ನು ಸ್ವೀಕರಿಸಿ, ಬಹಿರಂಗ ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಸಮಿತಿ ಪ್ರಮುಖರಾದ ಎಂ.ಜAಬಯ್ಯ ನಾಯಕ, ಡಿ. ವೆಂಕಟರಮಣ, ರವಿಕುಮಾರ, ಶಿವಕುಮಾರ, ಮಂಜುನಾಥ, ಬಿಸಾಟಿ ತಾಯಪ್ಪ ನಾಯಕ, ಸಣ್ಣಮಾರೆಪ್ಪ, ತಮನಳೇಪ್ಪ, ಕಾಳಿದಾಸ್, ರಮೇಶ್, ಕೆ.ಶಿವಪ್ಪ ಮತ್ತಿತರಿರದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts