More

    ಜಮೀನು ಉಳಿಸುವಂತೆ ಆಗ್ರಹ

    ವಿಜಯವಾಣಿ ಸುದ್ದಿಜಾಲ ಕುಂದಾಣ
    ಬಡವರ ಅನುಕೂಲಕ್ಕಾಗಿ ಮಂಜೂರು ಮಾಡಿದ ಜಮೀನು ರೈತರಿಗಾಗಿ ಉಳಿಯುವ ಉದ್ದೇಶದಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಕನ್ನಮಂಗಲ ಸಂದೀಪ್ ಹೇಳಿದರು.
    ದೇವನಹಳ್ಳಿಯ ಜಿಲ್ಲಾಡಳಿತ ಭವನ ಆವರಣದಲ್ಲಿ ಗುರುವಾರ ರೈತರೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ದೇವನಹಳ್ಳಿ ತಾಲೂಕಿನ ಪೂಜನಹಳ್ಳಿ ಸರ್ವೇ ನಂ.21ರಲ್ಲಿ ಚಿಕ್ಕಸಣ್ಣೆ ಗ್ರಾಮದ 4 ಜನ ರೈತರಿಗೆ 10 ಎಕರೆ ಜಮೀನು ಸರ್ಕಾರ ಮಂಜೂರು ಮಾಡಿದ್ದು, ನ್ಯಾಯಾಲಯದಲ್ಲೂ ರೈತ ಪರವಾದ ತೀರ್ಪು ಬಂದಿದೆ. ಆದರೂ ಕೆಲವರು ತೋಟಗಾರಿಕೆ ಜಮೀನು ಎಂದು ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಹೇಳಿದರು. ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ. ಯಾವುದೇ ಕೆಲಸಕ್ಕೆ ಹೋದರೂ ಅನಾವಶ್ಯಕವಾಗಿ ಅಲೆದಾಡಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಸರ್ಕಾರ ಮದ್ಯಪ್ರವೇಶಿಸಿ ರೈತರಿಗೆ ಮಂಜೂರಾದ ಜಮೀನನ್ನು ರೈತರಿಗೆ ಬಿಟ್ಟು ಕೊಡುವಂತೆ ರೈತ ಸಂಘದ ಯುವ ಮುಖಂಡ ನಾಗರಾಜ್ ಪೂಜಾರ್ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts